ಚಾಕೊಲೇಟ್ ಮೇಲೂ ಪಿಎಚ್​ಡಿ ಮಾಡಿ!

ಚಾಕೊಲೇಟ್ ಪ್ರೇಮಿಗಳಿಗೊಂದು ಸಿಹಿ ಸುದ್ದಿ. ಬ್ರಿಸ್ಟಾಲ್​ನ ವೆಸ್ಟ್ ಆಫ್ ಇಂಗ್ಲೆಂಡ್​ನ ವಿಶ್ವವಿದ್ಯಾಲಯ ಚಾಕೊಲೇಟ್​ನಲ್ಲಿ ಪಿಎಚ್​ಡಿ ಪದವಿ ಪಡೆಯುವ ಅವಕಾಶವನ್ನು ಒದಗಿಸಿದೆ. ಇದಕ್ಕಾಗಿ, ಅದು 15,000 ಪೌಂಡ್(12.5 ಲಕ್ಷ ರೂ.)ನ್ನು ವಾರ್ಷಿಕ ಅನುದಾನವಾಗಿ ಮೀಸಲಿರಿಸಿದೆ. ಹೀಗೊಂದು ಕೋರ್ಸ್ ಆರಂಭಿಸಿ ಎಂದು ಇಂಗ್ಲೆಂಡಿನ ವಿವಿಧ ಚಾಕೊಲೇಟ್ ಉದ್ಯಮಗಳು ವಿಶ್ವವಿದ್ಯಾಲಯವನ್ನು ಕೇಳಿಕೊಂಡಿದ್ದವು. ಕೊಕೊ ಬೀಜಗಳು, ಒಂದು ಫ್ಲೇವರ್​ಗಿಂತ ಮತ್ತೊಂದು ಫ್ಲೇವರ್ ಹೇಗೆ ಭಿನ್ನ ಎಂಬ ವಿಷಯದ ಬಗ್ಗೆ ಮೂರು ವರ್ಷದ ಅವಧಿಯಲ್ಲಿ ಪಿಎಚ್​ಡಿ ಅಧ್ಯಯನ ಮಾಡಲು ಅಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿಯಲ್ಲಿ ಪಿಎಚ್​ಡಿ ಜತೆಗೆ ಮಾಂಡೊಲಿಝå್ ಇಂಟರ್​ನ್ಯಾಷನಲ್​ನ ಮೂಲಕ ಅರೆಕಾಲಿಕ ವೃತ್ತಿಯಾಗಿ ಚಾಕೊಲೇಟ್ ರುಚಿ ನೋಡುವ ಕೆಲಸದ ಆಫರ್ ಕೂಡಾ ಇದೆ. ವಿಶ್ವವಿದ್ಯಾಲಯವು ವಿವಿಧ ಚಾಕೊಲೇಟ್ ಫ್ಲೇವರ್​ಗಳು, ಅವುಗಳ ವೈಶಿಷ್ಟ್ಯ ಮತ್ತು ಹೇಗೆ ಅವು ಜನರ ಮೇಲೆ ಪ್ರಭಾವ ಬೀರುತ್ತವೆ ಎಂಬ ಬಗ್ಗೆ ಆಸಕ್ತರು ವಿಶೇಷ ಅಧ್ಯಯನ ನಡೆಸಬಹುದು ಎಂದಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಫೆ. 27ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ.

– ಪಿಟಿಐ

Leave a Reply

Your email address will not be published. Required fields are marked *