ಗೋಕರ್ಣ: ಇಲ್ಲಿನ ಪ್ಯಾರಡೈಸ್ ಬೀಚ್ನಲ್ಲಿ ಚರಸ್ ಇಟ್ಟುಕೊಂಡ ಆಪಾದನೆ ಮೇರೆಗೆ ಪೊಲೀಸರು ಇಬ್ಬರು ಪ್ರವಾಸಿಗರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಉತ್ತರ ಪ್ರದೇಶ ಮೀರಠ್ನ ವಂದಿತ್ನಾರಾಯಣ ವಿ. ತ್ಯಾಗಿ ಮತ್ತು ನವೀ ಮುಂಬೈನ್ ರೋಶನ್ ರೋಹಿದಾಸ ಡೋಂಗ್ರೆ ಬಂಧಿತರು. ಇವರ ಬಳಿಯಿಂದ ಸುಮಾರು 5 ಸಾವಿರ ರೂ. ಮೌಲ್ಯದ 17.2 ಗ್ರಾಂ ಚರಸ್ ವಶ ಪಡಿಸಿಕೊಳ್ಳಲಾಗಿದೆ.