More

  ಚನ್ನವೀರ ಶರಣರ ಪುಣ್ಯ ಸ್ಮರಣೋತ್ಸವ ನಾಳೆ

  ಹುಬ್ಬಳ್ಳಿ: ಇಲ್ಲಿಯ ನವನಗರದ ಮೌನಯೋಗಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ 26ನೇ ಪುಣ್ಯ ಸ್ಮರಣೋತ್ಸವ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಮಾ.18ರಂದು ಆಯೋಜಿಸಲಾಗಿದೆ.

  ಬೀಳಗಿ ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಆಶ್ರಮದ ವಿದ್ಯಾರ್ಥಿ ಅಚ್ಯುತ್ ನಾಯ್್ಕ ಅವರು ಮಾ.18ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಾನಪದ ಕಲಾವಿದ ಧಾರವಾಡದ ಬಸವಲಿಂಗಯ್ಯ ಹಿರೇಮಠ ಹಾಗೂ ಹನುಮಂತಕುಮಾರ ಯರೇಹಂಚಿನಾಳ ಮತ್ತು ಸಂಗಡಿಗರು ಸಂಗೀತ ಕಾರ್ಯ ಕ್ರಮ ನಡೆಸಿಕೊಡುವರು. ಅಂದು ಬೆಳಗ್ಗೆ ಬ್ರಾಹ್ಮಿಮುಹೂರ್ತದಲ್ಲಿ ಶರಣರ ಗದ್ದುಗೆಗೆ ಮಹಾರುದ್ರಾಭಿಷೇಕ, 7ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಶರಣರು ಹಾಗೂ ಧರ್ಮದರ್ಶಿಗಳು, ಭಕ್ತರು ನೆರವೇರಿಸುವರು. 10.30ಕ್ಕೆ ಅನ್ನಪೂರ್ಣೆಶ್ವರಿ ಪೂಜೆ, ಉಡಿತುಂಬುವ ಕಾರ್ಯಕ್ರಮ ನಡೆಯಲಿವೆ. ಧರ್ಮ ಚಿಂತನಗೋಷ್ಠಿಗಳು ನಡೆಯಲಿವೆ.

  ಧರ್ಮಪ್ರಕಾಶ ಬೀರಿದ ಶರಣರು: ಚಿಕೇನಕೊಪ್ಪದ ಲಿಂಗೈಕ್ಯ ಶ್ರೀ ಚನ್ನವೀರ ಶರಣರು ಗ್ರಾಮೀಣ ಜನಜೀವನಕ್ಕೆ ಪ್ರೇರಣೆ ನೀಡಿ ಸದ್ಬೋಧನೆ ಮಾಡುತ್ತ ಸಮಾಜ ಉದ್ಧಾರಗೈದವರು. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕೇನಕೊಪ್ಪದಲ್ಲಿ ವೇದಮೂರ್ತಿ ಖಾನಯ್ಯನವರು ಹಾಗೂ ಶಿವಮ್ಮನವರ ಸುಪುತ್ರರಾಗಿ 1923, ಜೂ.15 ರಂದು ಜನಿಸಿದ ಶರಣರು, ಚಿಕ್ಕಂದಿನಲ್ಲೇ ಧಾರ್ವಿುಕ ಮನೋಭಾವ ಬೆಳೆಸಿಕೊಂಡವರು. ಮುಲ್ಕಿವರೆಗೆ ಶಿಕ್ಷಣ ಪಡೆದು ಶಿಕ್ಷಕ ವೃತ್ತಿ ಆರಂಭಿಸಿದರು. ಕಾಯಕವಿಲ್ಲದೇ ಪ್ರಸಾದ ಸ್ವೀಕರಿಸಕೂಡದು ಎಂಬ ಶರಣರ ತತ್ವವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು.

  ಉಜ್ಜಯನಿ ಶ್ರೀಗಳಿಂದ ಲಿಂಗದೀಕ್ಷೆ, ಕೊಪ್ಪಳದ ಶ್ರೀ ಮರಿಶಾಂತವೀರ ಸ್ವಾಮೀಜಿಗಳಿಂದ ಅನುಗ್ರಹ ದೀಕ್ಷೆ ಪಡೆದು ಕಠಿಣ ತಪಸ್ಸು ಮಾಡಿದರು. ಬಡವರ ಸೇವೆಗೆ ಜಾತಿ, ಕುಲ ಎನ್ನದೇ ಸರ್ವರೊಳಗೂಡಿದವರು. ಉಚಿತ ಆರೋಗ್ಯ ತಪಾಸಣೆ, ನೇತ್ರ ಚಿಕಿತ್ಸೆ, ಅಂಧರ ಕಲ್ಯಾಣ, ಜ್ಞಾನ ದಾಸೋಹ, ಸಾಮೂಹಿಕ ವಿವಾಹ, ಸಂಗೀತ ಕಚೇರಿ, ಶರಣರ ನಾಟಕಗಳ ಪ್ರದರ್ಶನ ಏರ್ಪಡಿಸುತ್ತಿದ್ದರು. 1995ರ ಫೆಬ್ರವರಿ 6ರಂದು ಲಿಂಗೈಕ್ಯರಾದರು. 1981ರಲ್ಲಿ ಗದಗ ಜಿಲ್ಲೆ ಬಳಗಾನೂರಲ್ಲಿ ಶರಣರು ಮಠವನ್ನು ಸ್ಥಾಪಿಸಿ ತನ್ಮೂಲಕ ಶಾಲೆ, ಕಾಲೇಜುಗಳ್ನು ಪ್ರಾರಂಭಿಸಿದರು. 1985ರಿಂದ ನೇತೃತ್ವ ವಹಿಸಿಕೊಂಡ ಶ್ರೀ ಶಿವಶಾಂತವೀರ ಶರಣರು ಶರಣಸ್ಥಲ ಪರಂಪರೆ ಮುಂದುವರಿಸಿಕೊಂಡು ಹೋಗುವ ಸಂಕಲ್ಪದೊಂದಿಗೆ ಮುನ್ನಡೆದಿದ್ದಾರೆ. ಬಳಗಾನೂರಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ.

  ನವನಗರ ಆಶ್ರಮ: 1982ರಲ್ಲಿ ಡಾ. ಎಲ್.ಎಸ್. ಮಾನ್ವಿ ಅವರು ನವನಗರದಲ್ಲಿ ನಡೆಸುತ್ತಿದ್ದ ಧಾರವಾಡ ಜಿಲ್ಲಾ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ರೀಸರ್ಚ್ ಸೆಂಟರ್ ಅನ್ನು ಮುಂದೆ ಶ್ರೀ ಶಿವಶಾಂತವೀರ ಶರಣರ ಮಡಿಲಿಗೆ ಹಾಕಲಾಯಿತು. ನಂತರದಲ್ಲಿ ಮಹಾನಗರ ಪಾಲಿಕೆಯಿಂದ ಮತ್ತಷ್ಟು ಜಾಗ ಪಡೆದುಕೊಂಡು ಅಂಧರಿಗೆ ನಿರಂತರ ಸಹಾಯ ಹಸ್ತ ಚಾಚಲು ಆಶ್ರಮ ಟ್ರಸ್ಟ್ ಸ್ಥಾಪಿಸಿ ಅದರಂತೆ ಸೇವಾ ಕಾರ್ಯಗಳನ್ನು ಮುಂದುವರಿಸಲಾಗಿದೆ.</

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts