ನಮೋ ಜನ್ಮದಿನ ಸಂಭ್ರಮ

ಚನ್ನಗಿರಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ಸ್ವಚ್ಚತೆ ಕಾರ್ಯ ಹಾಗೂ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರಧಾನಿ ಮೋದಿ ಜನ್ಮದಿನ ಆಚರಿಸಿದರು.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಮೋದಿ ಭಾರತ ಕಂಡ ಅಪ್ಪಟ ದೇಶಪ್ರೇಮಿ, ಜಗತ್ತೇ ಒಪ್ಪಿಕೊಂಡ ಧೀಮಂತ ನಾಯಕ. ಹಿಂದು ಧರ್ಮ ಗೌರವಿಸುವ ಅಪರೂಪದ ವ್ಯಕ್ತಿ. ಭರತ ಖಂಡದ ಪ್ರಧಾನ ಸೇವಕ ಎಂದರು.

ಪರಿಸರ ದಿನ ಆಂದೋಲನದ ರೂಪದಲ್ಲಿ ನಡೆದಾಗ ಮಾತ್ರ ಪ್ರಕೃತಿ ಉಳಿಯಲು ಸಾಧ್ಯ. ಜನ ಜಾಗೃತಿ ಮೂಡಬೇಕು. ಭೂಮಿ ಮತ್ತೊಮ್ಮೆ ಹಸಿರಿಂದ ಕಾಣಬೇಕಾದರೆ ಜನರು ಗಿಡ ಬೆಳೆಸಬೇಕು ಎಂದು ತಿಳಿಸಿದರು.

ಪಶ್ಚಿಮಘಟ್ಟಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ರಾಜ್ಯದಲ್ಲಿ ಹೆಚ್ಚು ಮಳೆಯಾಗುವ ಆಗುಂಬೆಯಲ್ಲಿಯೇ ಮಳೆ ಇಲ್ಲ. ಇದಕ್ಕೆ ಮನುಷ್ಯನ ಸ್ವಾರ್ಥ ಕಾರಣ. ಶೇ.33ರಷ್ಟು ಇರುವ ಕಾಡು ಕಡಿದು ಬರಗಾಲಕ್ಕೆ ಆಹ್ವಾನ ನೀಡಿದ್ದೇವೆ. ನಮ್ಮ ಸುತ್ತಮುತ್ತ ಹಸಿರು ಕಾಣುವವರೆಗೆ ನಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಮೆದಿಕೆರೆ ಸಿದ್ದೇಶ್, ಪುರಸಭೆ ಸದಸ್ಯರಾದ ಪರಮೇಶ್ ಪಾರಿ, ಪಟ್ಲಿ ನಾಗರಾಜ್, ಎ.ಕೆ.ಅಣ್ಣಯ್ಯ. ಡಾ.ರಾಜಪ್ಪ. ಡಾ.ಸುನೀಲ್, ಡಾ.ಚನ್ನಕೇಶವ ಇದ್ದರು.

Leave a Reply

Your email address will not be published. Required fields are marked *