More

    ಚದುರಂಗದಾಟದಂತಾಯ್ತು ಚುನಾವಣೆ

    ಭಟ್ಕಳ: ರಾಜಕೀಯ ಪಕ್ಷಗಳ ಚದುರಂಗ ದಾಟದ ನಡುವೆ ಸಿಲುಕಿಕೊಂಡ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರ ಚುನಾವಣೆ ಯನ್ನು ಮುಂದೂಡಿರುವ ಪ್ರಕರಣ ತಾಲೂಕಿನ ಕಾಯ್ಕಿಣಿ ಸಹಕಾರಿ ಸಂಘದಲ್ಲಿ ಶನಿವಾರ ನಡೆದಿದೆ.

    ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಶನಿವಾರ ಚುನಾವಣೆ ನಿಗದಿಯಾಗಿತ್ತು. ಕಾನೂನಿನ ಪ್ರಕಾರ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ನಡೆದಿದ್ದವು. ಮಾಜಿ ಶಾಸಕ ಮಂಕಾಳ ವೈದ್ಯ ಸ್ವತಃ ಆಕಾಂಕ್ಷಿಯಾಗಿ ಒಂದು ತಂಡದ ನೇತೃತ್ವ ವಹಿಸಿದ್ದರೆ, ಶಾಸಕ ಸುನೀಲ ನಾಯ್ಕ ಅವರ ಬೆಂಬಲಿಗರ ತಂಡವೂ ಎದುರಾಳಿಯಾಗಿ ಸ್ಪರ್ಧಿಸಿತ್ತು. ಚುನಾವಣೆಯಲ್ಲಿ ಭಾಗವಹಿಸಲು 1279 ಸದಸ್ಯರಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು.

    ಅದರಂತೆ ಚುನಾವಣಾಧಿ ಕಾರಿಗಳು ಬ್ಯಾಲೆಟ್ ಪೇಪರ್, ಪೋಲಿಂಗ್ ಬೂತ್, ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದ್ದರು. ಚುನಾವಣೆಗೆ 24 ಗಂಟೆ ಇರುವಾಗ ಶಾಸಕ ಸುನೀಲ ನಾಯ್ಕ 322 ಸದಸ್ಯರಿಗೆ, ಮಾಜಿ ಶಾಸಕ ಮಂಕಾಳ ವೈದ್ಯ 328 ಸದಸ್ಯರಿಗೆ ಮತದಾನ ಮಾಡಲು ಹೈಕೋರ್ಟ್​ನಿಂದ ಆದೇಶ ತಂದಿದ್ದಾರೆ. ಈ ವಿಷಯದಲ್ಲಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ, ಹೊಡೆದಾಟ ನಡೆದು ಪ್ರಕರಣವೂ ದಾಖಲಾಗಿತ್ತು.

    ಅತ್ತ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಲಾಗದೆ ಇತ್ತ ಚುನಾವಣೆಗೆ ಬೇಕಾಗಿರುವ ಮತದಾರರ ಯಾದಿ, ಬ್ಯಾಲೆಟ್ ಪೇಪರ್ ಕೊರತೆ, ಪೋಲಿಂಗ್ ಬೂತ್, ಮತ್ತಷ್ಟು ಸಿಬ್ಬಂದಿ ನೇಮಕ ಇವೆಲ್ಲವನ್ನೂ ಕಡಿಮೆ ಸಮಯದಲ್ಲಿ ಸಿದ್ಧಪಡಿಸುವುದು ಕಷ್ಟವಿತ್ತು. ಅಲ್ಲದೆ, ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಪರಸ್ಪರ ಹೊಡೆದಾಟದಲ್ಲಿ ನಿರತರಾಗಿದ್ದು , ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಪರಿಸ್ಥಿತಿ ಕೈ ಮೀರುವ ಲಕ್ಷಣ ಕಂಡು ಬಂದ ಹಿನ್ನ್ನೆಲೆಯಲ್ಲಿ ಚುನಾವಣೆಯನ್ನು ಜ. 19ಕ್ಕೆ ಮುಂದೂಡಿ ಚುನಾವಣೆ ಅಧಿಕಾರಿ ಆದೇಶ ಹೊರಡಿಸಿದ್ದರು. ಇದರಿಂದ ಶನಿವಾರ ಕಾಯ್ಕಿಣಿಯಲ್ಲಿ ಬಿಗುವಿನ ವಾತಾವರಣದ ಹಿನ್ನ್ನೆಲೆಯಲ್ಲಿ ಬಿಗಿ ಪೊಲೀಸ್ ಪಹರೆ ನೀಡಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಸಂಘದ ಮುಖ್ಯ ಕಾರ್ಯ

    ನಿರ್ವಹಣಾಧಿಕಾರಿ ಹಾಗೂ ಚುನಾವಣೆಯ ಎಲ್ಲ ಸಾಮಗ್ರಿಗಳನ್ನು ಪೊಲೀಸರೆ ಅವರ ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

    ನಿರ್ಧಾರವಾಗಿದ್ದ ಚುನಾವಣೆ ಮುಂದೂಡಲು ಯಾರಿಗೂ ಅವಕಾಶವಿಲ್ಲ. ಆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಇರುವುದು ಬೆಂಗಳೂರಿನ ಚುನಾವಣೆ ಪ್ರಾಧಿಕಾರಕ್ಕೆ ಮಾತ್ರ. ರಿಟರ್ನಿಂಗ್ ಅಧಿಕಾರಿಗೆ ಸಮಸ್ಯೆಗಳು ಇದ್ದಲ್ಲಿ ನನ್ನೊಂದಿಗೆ ರ್ಚಚಿಸಬೇಕಿತ್ತು.

    | ಎನ್.ಎಸ್. ಕುಮ್ಮೂರು

    ಸಹಕಾರಿ ಸಂಘಗಳ ಉಪನಿಬಂಧಕರು ಕಾರವಾರ

    ಚುನಾವಣೆಯಲ್ಲಿ ಸೋಲುವ ಭಯದಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಶಾಸಕ ಸುನೀಲ ನಾಯ್ಕ ಚುನಾವಣೆ ಮುಂದೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಲ್ಲ ನಾಳೆ ಚುನಾವಣೆ ಪ್ರಕ್ರಿಯೆ ನಡೆದೆ ನಡೆಯುತ್ತದೆ.

    | ಮಂಕಾಳ ವೈದ್ಯ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts