ಸಂತೋಷ ದೇಶಪಾಂಡೆ ಬಾಗಲಕೋಟೆ:
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅವಽ ಮುಕ್ತಾಯಗೊಂಡು ನಾಲ್ಕು ವರ್ಷಗಳು ಗತಿಸುತ್ತಾ ಬಂದಿದೆ. ನೊರೆಂಟು ಗೊಂದಲ, ಗೊಜಲಿನ ನಡುವೇ ನಡೆದ ಬೆಳವಣಿಗೆಗಳು ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಮೂಡಿಸಿತ್ತು. ಎಲ್ಲವು ಅಂತಿಮಘಟ್ಟಕ್ಕೆ ಬರುವ ಲಕ್ಷಣ ಗೋಚರಿಸಿದ್ದು, ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿಲ್ಲ. ಆದರೇ ಜಿಲ್ಲೆಯಲ್ಲಿ ಚುನಾವಣೆ ಸ್ಪಽðಸುವ ಆಕಾಂಕ್ಷಿಗಳು ರಾಜಕೀಯ ಚುಟುವಟಿಕೆ ತೊಡಗಿಕೊಂಡಿದ್ದಾರೆ.!!
ಲೋಕಸಭೆ, ವಿಧಾನಸಭೆ ಚುನಾವಣೆ ರಂಗಿನ ಬಳಿಕ ರಾಜಕೀಯ ಕ್ಷೇತ್ರದ ಜನರ ಆಕಾಂಕ್ಷಿಗಳು ಸಹಕಾರಿ ಕ್ಷೇತ್ರಗಳತ್ತ ನೆಟ್ಟಿತ್ತು, ಅಲ್ಲಿನ ಸೋಲು, ಗೆಲುವಿನ ಬಳಿಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮೇಲೆ ಕಣ್ಣು ನೆಟ್ಟಿದೆ. ಕೆಲವೇ ತಿಂಗಳಿನಲ್ಲಿ ಜಿಪಂ, ತಾಪಂ ಸಮೀಪಿಸುತ್ತಿರುವ ಕಾರಣ ಎರಡನೇ ಹಂತ ರಾಜಕೀಯ ನಾಯಕರು ಹೊಸ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇನ್ನು ಈ ಹಿಂದಿನ ಚುನಾವಣೆ ಆಧಾರದ ಮೇಲೆ ಹೊಸ ರೀತಿಯ ರಾಜಕೀಯ ಸಮೀಕರಣ ನಡೆಸಲು ಕೈ, ಕಮಲ ಪಕ್ಷಗಳು ಸಜ್ಜಾಗಿವೆ.
ಭರ್ಜರಿ ಸಿದ್ಧತೆಯಲ್ಲಿ ಮಗ್ನ…
ಜಿಲ್ಲೆಯಲ್ಲಿ ತಾಲೂಕು ಪಂಚಾಯಿತಿಗ್ಗಿAತ ಜಿಲ್ಲಾ ಪಂಚಾಯಿತಿಯಲ್ಲಿ ಅಽಕಾರದ ಚುಕ್ಕಾಣೆ ಹಿಡಿಯುವುದು ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠಿಯಾಗಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ತಾಲೀಮು ಆರಂಭವಾಗಿದೆ. ಎಐಸಿಸಿ ಕಾರ್ಯದರ್ಶಿ ಗೋಪಿನಾಥ -Àಳನೀಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಜಿಲ್ಲಾ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರು, ನಾಯಕರ ಅಳಲು ಆಲಿಸಿದರು. ಜಿಪಂ, ತಾಪಂ ಚುನಾವಣೆ ಬಗ್ಗೆಯೇ ಒತ್ತಿ ಒತ್ತಿ ಹೇಳಿದ್ದು, ಗಮನಾರ್ಹ ಸಂಗತಿ. ಬಿಜೆಪಿ ಕೂಡಾ ಹಿಂದೆ ಬಿದ್ದಿಲ್ಲ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಳೇ ಕುದರೇ ಶಾಂತಗೌಡ ಪಾಟೀಲ ಅವರನ್ನೆ ಮುಂದುವರೆಸಿ ಹೊಸ ಪಣಕ್ಕೆ ಸಿದ್ಧತೆಗೊಂಡಿದೆ. ನವ ಶಕ್ತಿ ತುಂಬಲು ನಾನಾ ರಣ ತಂತ್ರ ರೂಪಿಸುತ್ತಿದೆ. ಕೆಲವೇ ದಿನಗಳಲ್ಲಿ ಎರಡು ಪಕ್ಷಗಳು ವಿಧಾನಸಭಾವಾರು ಪಕ್ಷದ ನಾಯಕರು, ಪದಾಽಕಾರಿಗಳೊಂದಿಗೆ ಸರಣಿ ಸಭೆ ನಡೆಸಲು ರೂಪು ರೇಷ ಸಿದ್ದಗೊಂಡಿದೆ. ಯಾವ ರೀತಿ ಚದುರಂಗದಾಟವಾಡಿದರೇ ಲಾಭ, ನಷ್ಟ ಎಂದು ಗಹನ ಚರ್ಚೆಯಲ್ಲಿ ಮಗ್ನರಾಗಲಿದ್ದಾರೆ.
ಜೆಡಿಎಸ್-ಬಿಜೆಪಿ ಮಿತೃತ್ವದ ಚುನಾವಣೆ…
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಆ ಬಳಿಕ ಯಾವುದೇ ಚುನಾವಣೆ ನಡೆದಿಲ್ಲ. ಈ ಹಿಂದಿನ ಜಿ.ಪಂ, ತಾಪಂ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು, ಈ ಸಾರಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿಯಬೇಕಿದೆ. ಸೀಟು ಹಂಚಿಕೆ ಆಧಾರ ಮೇಲೆ ಎರಡು ಪಕ್ಷಗಳು ಮುನ್ನಡೆಯಲಿವೆ. ಹೀಗಾಗಿ ಪಕ್ಷದ ವರಿಷ್ಠರು ಸ್ಥಳೀಯ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಸೀಟು ಹಂಚಿಕೆ ವಿಷಯ ಅಂತಿಮಗೊಳಿಸುವ ಸಾಧ್ಯತೆ ಇದೆ. ಎರಡು ಪಕ್ಷಗಳಿಗೆ ಈ ಚುನಾವಣೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
ಪಕ್ಷಕ್ಕಿಂತ ಜಾತಿ ಮುಖ್ಯ..
೨೦೧೫ ರಿಂದ ೨೦೨೧ ಸಾಲಿನಲ್ಲಿ ಜಿಲ್ಲೆ ಪಂಚಾಯಿತಿಯಲ್ಲಿ ಬಿಜೆಪಿ ಅಽಕಾರಕ್ಕೆ ಏರುವ ಎಲ್ಲ ಅವಕಾಶವಿದ್ದರು ಕೊನೆ ಘಳಿಗೆಯಲ್ಲಿ ರಾಜಕೀಯ ದಾಳಕ್ಕೆ ಸಿಕ್ಕು ಒದ್ದಾಡಿದೆ. ಬಹುತೇಕ ಜಿ.ಪಂ ಸದಸ್ಯರು ಪಕ್ಷಕ್ಕಿಂತ ಜಾತಿಯನ್ನು ಮುಖ್ಯವಾಗಿ ಪರಿಗಣಿಸಿದ್ದರಿಂದ ಕಾಂಗ್ರೆಸ್ ಸುಲಭವಾಗಿ ಗದ್ದುಗೆ ಏರಲು ಕಾರಣವಾಗಿತ್ತು. ಪಕ್ಷದ ವಿಪ್ ಉಲ್ಲಂöಸಿದರ ಮೇಲೆಯೂ ಯಾವುದೇ ಕ್ರಮ ತೆಗೆದುಕೊಳ್ಳಲಾಗದೇ ಬಿಜೆಪಿ ಮುಜುಗರ ಅನುಭವಿಸಿತ್ತು. ಈ ಸಾರಿ ತಪ್ಪು ಮರಕಳಿಸದಂತೆ ಎಚ್ಚರಿಕೆ ಹೆಜ್ಜೆ ಇಡಲು ಕಮಲ ಪಕ್ಷ ನಿರ್ಧರಿಸಿದೆ. ಜಿ.ಪಂ, ತಾ.ಪಂನಲ್ಲಿ ಗೆಲುವಿನ ನಗೆ ಬೀರಲು ಹೊಸ ಯೋಜನೆ ಹಾಕಿಕೊಂಡಿದೆ. ಕಾಂಗ್ರೆಸ್ ಕೂಡಾ ವಿಧಾನಸಭೆ ಚುನಾವಣೆಯಂತೆ ಈ ಚುನಾವಣೆಗಳಲ್ಲಿ ಯಶಸ್ವಿ ಗಳಿಸಲು ಹವಣಿಸುತ್ತಿದೆ. ಚುನಾವಣೆ ನಡೆದ ಬಳಿಕವೇ ಅಂತಿಮ ಚಿತ್ರಣಕ್ಕೆ ಮತದಾರರು ಸ್ಪಷ್ಟೋಕ್ತಿ ಗೊತ್ತಾಗಲಿದೆ.
