More

  ಚಕ್ರಕೋಟಿ ಬಾಯಮ್ಮ ಸಿಡಿ ಬಿಡುಗಡೆ

  ಭಾಲ್ಕಿ: ಲಖನಗಾಂವ್ ಗ್ರಾಮದಲ್ಲಿ ಶ್ರೀ ಮಹಾಯೋಗಿಣಿ ಚಕ್ರಕೋಟಿ ಬಾಯಮ್ಮ ಜಾತ್ರಾ ಮಹೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ಜರುಗಿತು.
  ಜಾತ್ರೆ ನಿಮಿತ್ತ ಚಕ್ರಕೋಟಿ ಬಾಯಮ್ಮ ಅವರ ಜೀವನ ಚರಿತ್ರೆಯ ಕುರಿತ ಸಂಗೀತ ಹಾಡುಗಳ ಸಿಡಿ ಬಿಡುಗಡೆ ಕಾರ್ಯಕ್ರಮ ಜರುಗಿತು. ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಬಾಯಮ್ಮ ಅವರ ಅಧ್ಯಾತ್ಮಕ ಸಾಧನೆ ಅಪಾರ. ಅವರ ತತ್ವ, ಆದರ್ಶಗಳನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
  ಗಾಯಕಿ ಪವಿತ್ರ ಮಾಡಗೂಳೆ ಮಾತನಾಡಿ, ಸಾಹಿತ್ಯ, ಸಂಗೀತ ಜತೆಯಲ್ಲಿ ಅಧ್ಯಾತ್ಮ ಕ್ಷೇತ್ರದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
  ಸಂಗೀತ ನಿರ್ದೇಶಕ, ಗಾಯಕ ಶಿವಕುಮಾರ ಪಾಂಚಾಳ ಮಾತನಾಡಿದರು. ಬಾಯಮ್ಮ ಮಠದ ಅಧ್ಯಕ್ಷ ದಿಲೀಪ ಬೋಗೆ, ಪ್ರಮುಖರಾದ ಮಹಾದೇವ ಮಹಾರಾಜ, ಸೋಮನಾಥ ಸ್ವಾಮಿ, ವಿಶ್ವನಾಥ ಮಾಡಗೂಳ, ಮಹಾದೇವ ಮಹಾರಾಜ, ನಂದಾ ಬಿಡವೆ, ಗುರುನಾಥ ವಡ್ಡೆ, ಪತ್ರಿ ಸ್ವಾಮಿ, ನೆಹರು ಬಿರಾದಾರ್, ನಂದಾ ಬಿಡವೆ, ಜ್ಯೋತಿ ಶೆಟಕಾರ, ಬಸವ ಶೆಟಕಾರ, ಮಂಗಲಾ ಜಡಗೆ, ಬಾಳು ವಟಮಾಳ, ವಿಜಯಕುಮಾರ ಬಿರಾದಾರ್ ಇತರರಿದ್ದರು. ಸಿದ್ರಾಮ ಶೆಟಕಾರ ನಿರೂಪಣೆ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts