ಚಂಬಲ್ ಚಿತ್ರಕ್ಕೂ ರವಿ ಜೀವನಕ್ಕೂ ಸಂಬಂಧವಿಲ್ಲ

ಹುಬ್ಬಳ್ಳಿ: ‘ಚಂಬಲ್’ ಕಲ್ಪನೆ ಆಧಾರಿತ ಚಲನಚಿತ್ರ. ಈ ಚಿತ್ರಕ್ಕೂ ಐಎಎಸ್ ಅಧಿಕಾರಿ ಡಿ.ಕೆ.ರವಿ ಜೀವನಕ್ಕೂ ಸಂಬಂಧವಿಲ್ಲ ಎಂದು ನಿರ್ದೇಶಕ ಜೇಕಬ್ ವರ್ಗೀಸ್ ಸ್ಪಷ್ಟಪಡಿಸಿದ್ದಾರೆ.

ಕೆಲವರು ಈ ಚಿತ್ರ ರವಿ ಅವರ ಜೀವನಾಧಾರಿತ ಚಿತ್ರ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ನಟ ನೀನಾಸಂ ಸತೀಶ್ ಐಎಎಸ್ ಅಧಿಕಾರಿ ಪಾತ್ರ ಮಾಡಿರುವುದರಿಂದ ಈ ರೀತಿ ತಪ್ಪು ಕಲ್ಪನೆ ಮೂಡಿದೆ ಎಂದು ಹೇಳಿದ್ದಾರೆ.