More

    ಘಟಾನುಘಟಿಗಳಿಗೆ ಸಿಗದ ಮನ್ನಣೆ

    ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ
    ನಗರಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಪದಾಧಿಕಾರಿ ಮತ್ತು ಸ್ವಪಕ್ಷದ ಮಾಜಿ ಸದಸ್ಯರಿಗೆ ಮಣೆ ಹಾಕಿಲ್ಲದಿರುವುದರಿಂದ ಕೃಪಾಕಟಾಕ್ಷ ವಂಚಿತ ಆಕಾಂಕ್ಷಿಗಳು, ಕಣದಿಂದ ಹಿಂದೆ ಸರಿಯುವ ಇಲ್ಲವೇ ಪಕ್ಷೇತರರಾಗಿ ಸ್ಪರ್ಧಿಸುವಂತಾಗಿದೆ.

    ವರ್ಷದಿಂದ ಚುನಾವಣೆ ಗಮನದಲ್ಲಿಟ್ಟುಕೊಂಡು ಆಯಾ ವಾರ್ಡ್‌ಗಳಲ್ಲಿ ಮತದಾರರ ಮನವೊಲಿಕೆ ಕಸರತ್ತು ನಡೆಸಿಕೊಂಡು ಬಂದಿದ್ದರು. ಜತೆಗೆ ಪಕ್ಷ ಬೆಂಬಲದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಇದನ್ನು ನಾಯಕರು ಬದಲಾದ ಸನ್ನಿವೇಶದಲ್ಲಿ ಹುಸಿಗೊಳಿಸಿದ್ದು ಬಂಡಾಯದ ಕಾವು ಜೋರಾಗಿದೆ. ಪರಸ್ಪರ ಮುನಿಸಿನಿಂದ ಒಳಗೊಳಗೆ ಮಾತೃಪಕ್ಷಕ್ಕೆ ಕೈ ಕೊಡುವ ಇಲ್ಲವೇ ಬಹಿರಂಗವಾಗಿ ಅನ್ಯ ಪಕ್ಷದ ಕೈ ಹಿಡಿಯುವ ಕಸರತ್ತು ನಡೆಯುತ್ತಿವೆ.

    ವಂಚಿತ ಪದಾಧಿಕಾರಿಗಳು ; ಮೀಸಲಾತಿ ಬದಲಾವಣೆ ಮತ್ತು ಸ್ವಪಕ್ಷೀಯ ಪ್ರತಿಸ್ಪರ್ಧಿಗಳ ತೀವ್ರ ಪೈಪೋಟಿಗೆ ಮೂರು ಪಕ್ಷಗಳಲ್ಲೂ ಬಹುತೇಕ ಪದಾಧಿಕಾರಿಗಳು ಬಿ ಾರ್ಮ್ ಪಡೆಯುವಲ್ಲಿ ವಿಲರಾಗಿದ್ದಾರೆ. ಕೈ ಪಾಳಯದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುನೀಲ್ ಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಜಾರ್, ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಕಲಾ ನಾಗರಾಜ್, ಒಬಿಸಿ ಜಿಲ್ಲಾಧ್ಯಕ್ಷ ಚಂದ್ರಶೇಖರ್, ನಗರ ಅಧ್ಯಕ್ಷ ಕೃಷ್ಣಮೂರ್ತಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಬಿ.ಕಿರಣ್, ನಗರ ಅಧ್ಯಕ್ಷ ಮಧುಚಂದ್ರ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಆದರೆ, ವರಿಷ್ಠರು ನಾನಾ ಕಾರಣ ಹೇಳಿ ಬಿ ಫಾರ್ಮ್ ನಿರಾಕರಿಸಿದ್ದಾರೆ.

    ಹಿಂದೆ ಸರಿದ ಮಾಜಿ ಸದಸ್ಯರು : ಒಂದೆಡೆ ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಆದ್ಯತೆ ಸಿಗದಿರುವುದರ ನಡುವೆ ನಗರಸಭಾ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಮಾಜಿ ಸದಸ್ಯರಾದ ಜಿ.ಎನ್.ನಾರಾಯಣಸ್ವಾಮಿ, ಪಿ.ಶ್ರೀನಿವಾಸ್, ಚಿಕ್ಕಪ್ಪಯ್ಯ, ದೇವರಾಜ್, ಸುಮಿತ್ರಮ್ಮ, ಕೆ.ಟಿ.ಭಾರತಿ, ಶ್ವೇತಾ ಮಂಜುನಾಥ್, ಜೆಡಿಎಸ್‌ನ ಬಂಡ್ಲು ಶ್ರೀನಿವಾಸರೆಡ್ಡಿ, ರಮೇಶ್ ಟಿಕೆಟ್ ವಂಚಿತರಾಗಿದ್ದು ಕಣದಿಂದ ದೂರ ಸರಿದಿದ್ದಾರೆ. ನಗರಸಭಾ ಮಾಜಿ ಉಪಾಧ್ಯಕ್ಷ ಜಾವೀದ್ ಪಾಷಾ, ಮಾಜಿ ಸದಸ್ಯರಾದ ಗಾಯತ್ರಿ ರಘು, ಸುಬ್ರಹ್ಮಣ್ಯಚಾರಿ ಪಕ್ಷೇತರ ಅಭ್ಯರ್ಥಿಗಳಾಗಿ ಮತ್ತು ಅಲ್ತಾಫ್ ಪಾಷಾ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

    ಎಲ್ಲೆಡೆ ಮತಬೇಟೆ ಶುರು : ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಕೈಯಲ್ಲಿ ಹಿಡಿದು ಅಭ್ಯರ್ಥಿಗಳು ಈಗಾಗಲೇ ಮತಬೇಟೆ ಶುರುವಿಟ್ಟುಕೊಂಡಿದ್ದಾರೆ. ನಗರದ 31 ವಾರ್ಡ್‌ನಲ್ಲೂ ಅಭ್ಯರ್ಥಿಗಳ ಜತೆಗೆ ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕೆಲ ವಾರ್ಡುಗಳ ವ್ಯಾಪ್ತಿ ಬದಲಾವಣೆಯಾಗಿದೆ. ಇನ್ನು ಹೊಸದಾಗಿ ಮೀಸಲಾತಿ ನಿಗದಿಯಾಗಿರುವುದರಿಂದ ಸ್ವಂತ ವಾರ್ಡ್ ಬಿಟ್ಟು ಬೇರೆ ಕಡೆ ಸ್ಪರ್ಧಿಸುವಂತಾಗಿದೆ. ಇದರಿಂದ ಮತದಾರರ ಪಟ್ಟಿ ಹಿಡಿದು ಹೊಸ ಮತದಾರರನ್ನು ಹುಡುಕುವ ಮತ್ತು ಮನವೊಲಿಸುವ ಪ್ರಕ್ರಿಯೆ ಬಿರುಸಾಗಿದೆ.

    ಪ್ರಸ್ತುತ ರಾಜಕೀಯ ಪಕ್ಷಗಳು ಬಹಿರಂಗವಾಗಿ ರ‌್ಯಾಲಿ, ಸಮಾವೇಶ ಸೇರಿ ಯಾವುದೇ ಪ್ರಚಾರ ಕೈಗೊಂಡಿಲ್ಲ. ಪಕ್ಷದ ಬಿ ಾರ್ಮ್‌ಗೆ ತೀವ್ರ ಪೈಪೋಟಿ, ಸ್ವಪಕ್ಷೀಯರಲ್ಲಿನ ಭಿನ್ನಮತ ಮತ್ತು ಉಮೇದುವಾರಿಕೆ ಹಿಂಪಡೆಯಲು ಅವಕಾಶ ಇರುವುದು ಸೇರಿ ನಾನಾ ಕಾರಣಗಳಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು ಇದೀಗ ಎಲ್ಲವೂ ಆಯಾ ಅಭ್ಯರ್ಥಿಗಳ ನೇತೃತ್ವವನ್ನೇ ಆಧರಿಸಿವೆ. ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ವಾರ್ಡ್‌ಗಳಲ್ಲಿ ಸುತ್ತಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts