24.9 C
Bangalore
Wednesday, December 11, 2019

ಗ್ರೇಡರ್, ಖರೀದಿ ಕೇಂದ್ರ ಹೆಚ್ಚಿಸಲು ಒತ್ತಾಯ

Latest News

ವಿಷ್ಣು‌ ಸೇನಾ‌ ಸಮಿತಿಯಿಂದ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಆಯೋಜನೆ

ಬಳ್ಳಾರಿ: ಚಿತ್ರನಟ ವಿಷ್ಣುವರ್ಧನ್ ಅವರ 10ನೇ ಪುಣ್ಯಸ್ಮರಣೆ ಹಿನ್ಮೆಲೆಯಲ್ಲಿ ವಿಷ್ಣು ಸೇನಾ ಸಮಿತಿಯಿಂದ ಡಿ.29ರಂದು ನಗರ ಹಾಗೂ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಸಿಂಹಾದ್ರಿ ಸಸ್ಯಾದ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.29ರಂದು...

ಮೈಸೂರಿನ ಬನುಮಯ್ಯ ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ

ಮೈಸೂರು: ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಸಮಾರಂಭವನ್ನು ಶಾಸಕ ಎಸ್.ಎ.ರಾಮದಾಸ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಂತವೀರ...

ಮೊದಲ ಪತ್ನಿ, ಮೂವರು ಮಕ್ಕಳನ್ನು ಮನೆಯಿಂದ ಹೊರದಬ್ಬಿದ ಪತಿ: ಚಳಿಯಲ್ಲೇ ಇಡೀ ರಾತ್ರಿ ಕಳೆದ ಪತ್ನಿ, ಮಕ್ಕಳು

ಬೆಳಗಾವಿ: ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ಬೆಳಗಾವಿಯ ವೀರಭದ್ರ ನಗರದಲ್ಲಿ ನಡೆದಿದೆ. ರಾಜಾಸಾಬ್ ಕೊಲ್ಲಾಪುರೆ, ಮೊದಲ...

ಚಿತ್ರದುರ್ಗ: ಆರ್ ಒಗಳ ನಿರ್ವಣೆ ಇನ್ನು ಮುಂದೆ ಇಲಾಖೆ ಹೊಣೆ

ಚಿತ್ರದುರ್ಗ: ಶುದ್ಧ ಕುಡಿವ ನೀರು ಘಟಕಗಳ ಹೊಣೆ ಇನ್ನು ಮುಂದೆ ಕುಡಿವ ನೀರು ‌ಮತ್ತು ನೈರ್ಮಲ್ಯ ಇಲಾಖೆಯದ್ದಾಗಿದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮ ಹೇಳಿದರು. ಜಿಪಂ ಮಾಸಿಕ...

ಪೌರತ್ವ ತಿದ್ದುಪಡಿ ಮಸೂದೆ ದೇಶದ ಈಶಾನ್ಯ ಭಾಗದ ಜನರ ಮೇಲಿನ ಕ್ರಿಮಿನಲ್​ ದಾಳಿ: ರಾಹುಲ್​ ಗಾಂಧಿ ಟೀಕೆ

ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಟೀಕಿಸಿದ್ದು, ದೇಶದ...

ಅಣ್ಣಿಗೇರಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ಸಹಯೋಗದಲ್ಲಿ ಆರಂಭಿಸಿರುವ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಹತ್ತಿ ಖರೀದಿ ಪ್ರಕ್ರಿಯೆ ವಿಳಂಬದಿಂದ ರೈತರು ಹೈರಾಣಾಗಿದ್ದಾರೆ.

ಸ್ಥಳೀಯ ಮೆಸರ್ಸ್ ಸಿ.ಎಸ್. ಕಾಟನ್ ಇಂಡಸ್ಟ್ರೀಜ್ ಹಾಗೂ ದಿ. ಅಣ್ಣಿಗೇರಿ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಕೋ ಆಪರೇಟಿವ್ ಸೇಲ್ ಪೊ›ಸೆಸ್ಸಿಂಗ್ ಸೊಸೈಟಿಯಲ್ಲಿ ಖರೀದಿ ಪ್ರಕ್ರಿಯೆ ನಡೆದಿದೆ. ಆದರೆ, ರೈತರು ಕಳೆದ ಎರಡ್ಮೂರು ದಿನದಿಂದ ಸರದಿಯಲ್ಲಿ ಕಾಯುತ್ತಿದ್ದರೂ ತಮ್ಮ ಪಾಳಿ ಬರದೇ ಅಲ್ಲೇ ಠಿಕಾಣಿ ಹೂಡುವಂತಾಗಿದೆ. ಮಳೆ ಬೇರೆ ಬರುತ್ತಿದ್ದು, ಹತ್ತಿ ಸಂರಕ್ಷಣೆ ಮಾಡುವುದೇ ಸವಾಲಾಗಿದೆ ಎಂದು ಅನೇಕ ರೈತರು ದೂರಿದ್ದಾರೆ.

ಅಣ್ಣಿಗೇರಿ ಖರೀದಿ ಕೇಂದ್ರದಲ್ಲಿ ಒಬ್ಬರೇ ಹತ್ತಿ ಗ್ರೇಡರ್ ಇದ್ದಾರೆ, ಖರೀದಿ ಕೇಂದ್ರ ಸಹ ಒಂದೇ ಇದೆ. ಇದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಹಿರಿಯ ಅಧಿಕಾರಿಗಳು ಇನ್ನೊಬ್ಬ ಗ್ರೇಡರ್ ಕೊಟ್ಟು ಖರೀದಿ ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಅನೇಕ ರೈತರು ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಿಲ್ಲ. ಹಾಗಾಗಿ ಬಹಳಷ್ಟು ರೈತರು ಅಣ್ಣಿಗೇರಿ ಕೇಂದ್ರಕ್ಕೆ ಬರುತ್ತಿದ್ದಾರೆ. ಇದರಿಂದಲೂ ಸಮಸ್ಯೆಯಾಗಿದೆ ಎಂದು ರೈತರು ದೂರಿದರು.

ಸೋಮವಾರ 300ಕ್ಕೂ ಹೆಚ್ಚು ಗಾಡಿಯಲ್ಲಿ ಹತ್ತಿ ಬಂದಿತ್ತು. ಅದರಲ್ಲಿ 50- 60 ಗಾಡಿಗಳಲ್ಲಿನ ಹತ್ತಿ ಮಾತ್ರ ಖರೀದಿಯಾಗಿದೆ. ಉಳಿದ ಗಾಡಿಗಳಿಗೆ ನಾಳೆ ಪಾಳಿ ಬರಲಿದೆ.

ಹಣ ವಸೂಲಿ ಆರೋಪ: ಖರೀದಿ ಕೇಂದ್ರದಲ್ಲಿ ರೈತರಿಂದ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕೆಲವರು ದೂರಿದ್ದಾರೆ. ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಹಣ ವಸೂಲಿ ಮಾಡದಂತೆ ನಿಯಮವಿದ್ದರೂ ಸ್ಥಳೀಯ ಎಪಿಎಂಸಿ ನೇತೃತ್ವದಲ್ಲಿ ಪ್ರತಿ ರೈತರಿಂದ 50 ರೂ. ವಸೂಲಿ ಮಾಡಲಾಗುತ್ತಿದೆ ಎಂದು ರೈತರಾದ ಪ್ರಕಾಶ ಹಳ್ಳಿ, ಶಂಕ್ರಪ್ಪ ಕುರಹಟ್ಟಿ ಅಳಲು ತೋಡಿಕೊಂಡರು.

ಹಣ ವಸೂಲಿ ಮಾಡಲು ಸರ್ಕಾರದಿಂದ ಯಾವುದೇ ಆದೇಶ ಇಲ್ಲ. ರೈತರಿಂದ ಅನಧಿಕೃತವಾಗಿ ಹಣ ವಸೂಲಿ ನಿಲ್ಲಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ. | ಗುರುನಾಥಗೌಡ ಉಳ್ಳಾಗಡ್ಡಿ, ಎಪಿಎಂಸಿ ಅಧ್ಯಕ್ಷ

Stay connected

278,741FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...