ಗ್ರಾಹಕರಿಗೆ ಉತ್ತಮ ಸೇವೆ ನಮ್ಮ ಹೊಣೆ

ಚಿತ್ರದುರ್ಗ: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಚ್.ಎನ್.ತಿಪ್ಪೇಸ್ವಾಮಿ ಹೇಳಿದರು.
ನಗರದ ಸಹಕಾರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ತಿನ ಹಾಗೂ ನೌಕರರ ಪತ್ತಿನ ಸಹಕಾರ ಸಂಘಗಳ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ತರಬೇತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘದ ಕಾರ್ಯದರ್ಶಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸ ಬೇಕಾದರೆ ಇಂತಹ ತರಬೇತಿ ಅಗತ್ಯವಿದೆ ಎಂದರು.
ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್‌ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಬಹಳ ಮಹತ್ವವಿದೆ. ಚುನಾವಣೆ ಸುಗುಮವಾಗಿ ನಡೆಯಲು ಸಹಕಾರ ಸಂಘಗಳ ಕಾರ್ಯನಿರ್ವಾಹಕರ ಜವಾಬ್ದಾರಿ ಬಹಳ ಮುಖ್ಯ. ಕಾನೂನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ ಮಾತನಾಡಿ, 2024 ಫೆಬ್ರವರಿ, ಮಾರ್ಚ್‌ನಲ್ಲಿ ಪತ್ತಿನ ಸಹಕಾರ ಸಂಘಗಳ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಪ್ರಚಲಿತ ಕಾನೂನು ಯಾವ ರೀತಿ ಅಳವಡಿಸಿಕೊಳ್ಳಬೇಕು. ಠೇವಣಿ, ವಿವಿಧ ರೀತಿಯ ಸಾಲ ವಿತರಣೆ ಕುರಿತಂತೆ ತರಬೇತಿ ಕೊಡಲಾಗುತ್ತದೆ ಎಂದರು.
ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಚಿಕ್ಕಮಗಳೂರಿನ ಎಸ್.ವಿ.ಬಸವರಾಜ್ ಉಪನ್ಯಾಸ ನೀಡಿದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ‌್ಯನಿರ್ವಾಹಣಾಧಿಕಾರಿ ನಾಗರಾಜ್ ಪಾಟೀಲ್ ಇದ್ದರು.
ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ನಿಂದ ತರಬೇತಿ ಆಯೋಜಿಸಲಾಗಿತ್ತು.

Share This Article

ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್​ ಮಾಡಿಕೊಳ್ಳಿ

ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…

ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈಗ ಹೇಳಿರುವ ಸರಳ ಪರಿಹಾರಗಳನ್ನು…

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…