ಕೊಡೇಕಲ್: ನಾಡಿನಲ್ಲಿ ಉತ್ತಮ ಮಳೆ, ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸುವ ಮೂಲಕ ಈ ವರ್ಷದ ಫಸಲು ಉತ್ತಮವಾಗಿ ಬರಲಿ ಎಂಬ ಉz್ದೆÃಶದಿಂದ ಮಂಗಳವಾರ ಹೋಬಳಿ ವಲಯದ ವಿವಿಧ ಗ್ರಾಮಗಳಲ್ಲಿ ಗ್ರಾಮದೇವತೆಗೆ ಉಡಿ ತುಂಬುವ ಕರ‍್ಯಕ್ರಮ ಶ್ರದ್ಧಾ ಭಕ್ತಿಯಹಿಂದ ನಡೆಯಿತು.
ಪ್ರತಿವರ್ಷ ಮುಂಗಾರು ಆರಂಭಕ್ಕೂ ಮುನ್ನ ಗ್ರಾಮದಲ್ಲಿರುವ ಗ್ರಾಮದೇವತೆಗೆ ಉಡಿ ತುಂಬುವ ಕರ‍್ಯಕ್ರಮ ಮಾಡಲಾಗುತ್ತದೆ. ಅದರಂತೆ ಈ ವರ್ಷವೂ ಕೂಡ ಕೊಡೇಕಲ್, ಬೂದಿಹಾಳ, ಬರದೇವನಾಳ ಗ್ರಾಮದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉಡಿ ತುಂಬಲಾಗಿದೆ. ಅಲ್ಲದೆ ಬಪ್ಪರಗಿ ಗ್ರಾಮದಲ್ಲಿ ದೇವಿ ಜಾತ್ರೆ ಅದ್ದೂರಿಯಾಗಿ ಜರುಗಿತು.
ಕೊಡೇಕಲ್ ವರದಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮ ದೇವಿಗೆ ಸೋಮವಾರ ರಾತ್ರಿ ಗಂಗಾಸ್ನಾನ ನೆರವೇರಿಸಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮಾಡಲಾಯಿತು. ನಂತರ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಕಟ್ಟೆ ಮೇಲೆ ವಿರಾಜಮಾನಳಾದಳು. ಮಂಗಳವಾರ ಬೆಳಗ್ಗೆ ಆರತಿ ಮಾಡಿದ ನಂತರ ೧೧ಕ್ಕೆ ರಾಜ ಮನೆತನದವರಾದ ರಾಜಾ ಜಿತೇಂದ್ರನಾಯಕ ಜಹಾಗೀರದಾರ್ ಮತ್ತು ರಾಜಾ ವೆಂಕಟಪ್ಪನಾಯಕ ಜಹಾಗೀರದಾರ್ ಸೇರಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ದೈವದ ಸೀರೆ ಅರ್ಪಿಸಲಾಯಿತು. ನಂತರ ಅರ್ಚಕರು ದೇವಿಗೆ ಉಡಿ ತುಂಬಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಅದೇ ರೀತಿ ಬೂದಿಹಾಳ ಹಾಗೂ ಬರದೇವನಾಳ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತೆಗೆ ಉಡಿ ತುಂಬುವ ಕರ‍್ಯಕ್ರಮ ನಡೆಯಿತು. ಬರದೇವನಾಳದಲ್ಲಿ ಮಂಗಳವಾರ ಬೆಳಗ್ಗೆ ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ನಾಡಗೇರ ಮನೆತನದ ಕಲ್ಯಾಣರಾವ ದೇಶಪಾಂಡೆ ಸೇರಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ದೇವತೆಗೆ ದೈವದ ಸೀರೆ ಸಮರ್ಪಿಸಲಾಯಿತು. ಮುತ್ತೆÊದೆಯರು ದೇವಿಗೆ ಉಡಿ ತುಂಬುವ ಮೂಲಕ ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.
ಕೃಷಿ ಚಟುವಟಿಕೆಗೆ ಚಾಲನೆ: ಗ್ರಾಮೀಣ ಭಾಗದಲ್ಲಿ ಪ್ರತಿ ವರ್ಷ ಗ್ರಾಮ ದೇವತೆಗೆ ಉಡಿ ತುಂಬುದ ನಂತರ ಕೃಷಿ ಚಟುವಟಿಕೆಗೆ ಚಾಲನೆ ನೀಡಲಾಗುತ್ತದೆ. ಈಗಾಗಲೇ ಉತ್ತಮ ಮಳೆಯಾಗಿದ್ದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗೆ ಚಾಲನೆ ನೀಡಿದ್ದಾರೆ. ಬರದೇವನಾಳ ಗ್ರಾಮದಲ್ಲಿ ಬಿತ್ತನೆಗೆ ಬೇಕಾದ ಕೂರಿಗೆ, ತಾಳವನ್ನು ಸಿದ್ಧತೆ ಮಾಡಿಕೊಳ್ಳುವ ಮೂಲಕ ಚಾಲನೆ ನೀಡಿದರು.
ಬೂದಿಹಾಳ ಗ್ರಾಮದಲ್ಲಿ ಗಂಗಾಸ್ನಾನ ಮುಗಿಸಿ ದೇವಸ್ಥಾನಕ್ಕೆ ಮರಳಿದ ಗ್ರಾಮದೇವತೆಗೆ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.