ಸಿನಿಮಾ

ಗ್ರಾಮಾಡಳಿತಾಧಿಕಾರಿಗಳಿಬ್ಬರ ಸಸ್ಪೆಂಡ್

ಚಿತ್ರದುರ್ಗ: ಬೆಳೆ ಪರಿಹಾರ ಹಣ ದುರ್ಬಳಕೆ ಆರೋಪದಡಿ ಚಳ್ಳಕೆರೆ ತಾಲೂಕು ಜಾಜೂರು ಕಂದಾಯ ವೃತ್ತದ ಗ್ರಾಮಾಡಳಿತಾಧಿಕಾರಿ ಮುಮ್ತಾಜ್ ಉನ್ನೀಸಾ ಹಾಗೂ ಕಾಲುವೇಹಳ್ಳಿ ಕಂದಾಯ ವೃತ್ತದ ಗ್ರಾಮಾಡಳಿತಾಧಿಕಾರಿ ಸಿರಾಜ್‌ಉಲ್‌ಹುಸೇನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಆದೇಶಿಸಿದ್ದಾರೆ.
ಮುಮ್ತಾಜ್‌ಉನ್ನೀಸಾ ಅವರು ಬೆಳೆ ಪರಿಹಾರದ ಮೊತ್ತವನ್ನು ಅರ್ಹರ ಫಲಾನುಭವಿಗಳ ಹೆಸರಿಗೆ ನಮೂದಿಸದೇ,ಇತರೆ 37 ಜನರು-ಸಂಬಂ ಧಿಕರಿಗೆ 2020-21,2021-22 ಮತ್ತು 2022-23ನೇ ಸಾಲಿನ ಬೆಳೆ ಪರಿಹಾರ ಹಣ ಹಾಗೂ ಸಿರಾಜ್‌ಉಲ್‌ಹುಸೇನ್ ಅವರು ಉಳ್ಳಾರ್ತಿ ಕಾ ವಲ್,ಕಾಲುವೇಹಳ್ಳಿ ವ್ಯಾಪ್ತಿಯ ಅರ್ಹ ರೈತರಿಗೆ 2022-23ನೇ ಸಾಲಿನ ನೆರೆ ಪರಿಹಾರದ ಸಂದಾಯ ಮಾಡದೆ,ಹಿರಿಯೂರು ತಾಲೂಕು ಗನ್ನನಾಯಕನಹಳ್ಳಿಯ ಕೆಲವು ರೈತರು ಹಾಗೂ ರೈತರಲ್ಲದವರ ಖಾತೆಗೂ ಜಮೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆರ್‌ಟಿಸಿ ಹಾಗೂ ಜಮಾ ಖಾತೆ ಸಂಖ್ಯೆ ವಾರಸುದಾರರಿಗೂ ವ್ಯತ್ಯಾಸವಿದ್ದರೆ ಖಚಿತಪಡಿಸಿಕೊಂಡೇ ಹಣ ಪಾವತಿಸ ಬೇಕಿತ್ತು. ಆದರೆ ಆರೋಪಿ ತರು ಉದ್ದೇಶಪೂರ್ವಕವಾಗಿ ಅನರ್ಹರ ಹೆಸರಿಗೆ ಪರಿಹಾರ ನಮೂದಿಸಿ ಕರ್ತವ್ಯ ಲೋಪ ಎಸಗಿದ್ದಾರೆ.
ಈ ಕುರಿತಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರು ಶಿಸ್ತು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂ ತೆ ಬೆಳೆ ಪರಿಹಾರ ಮೊತ್ತ ಪಾವತಿ ವಿವರ ಪರಿಶೀಲಿಸಬೇಕಿದ್ದ ಹಿಂದಿನ ತಹಸೀಲ್ದಾರ್ ಆಗಿದ್ದ ಎನ್.ರಘುಮೂರ್ತಿ,ಕಂಪ್ಯೂಟರ್‌ಆಪರೇಟರ್‌ಗ ಳು,ಗ್ರಾಮ ಆಡಳಿತ ಅಧಿಕಾರಿಗಳು ಸೇರಿ 6 ಜನರ ವಿರುದ್ಧ ಈಗಾಗಲೇ ತಳಕು ಠಾಣೆಯಲ್ಲಿ 20.49 ಲಕ್ಷ ರೂ.ದುರ್ಬಳಕೆ ದೂರು ಸಲ್ಲಿಕೆಯಾ ಗಿದ್ದು,ಎಫ್‌ಐಆರ್ ದಾಖಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.


Latest Posts

ಲೈಫ್‌ಸ್ಟೈಲ್