25.8 C
Bangalore
Monday, December 9, 2019

ಗ್ರಾಮಸಿಂಹಗಳ ಹಾವಳಿಗೆ ಜಿಲ್ಲಾಡಳಿತ ತತ್ತರ

Latest News

ಬಿಜೆಪಿ ಕಾರ್ಯಕರ್ತರ ಭರ್ಜರಿ ವಿಜಯೋತ್ಸವ

ಅಥಣಿ ಕ್ಷೇತ್ರದಲ್ಲಿ ಅರಳಿದ ಕಮಲ ಕುಮಠಳ್ಳಿಗೆ ಜೈ ಎಂದ ಮತದಾರವಿಜಯವಾಣಿ ಸುದ್ದಿಜಾಲ ಅಥಣಿಅಥಣಿ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ...

ಅತಂತ್ರದಿಂದ ಸುತಂತ್ರದೆಡೆಗೆ ಬಿಎಸ್​ವೈ ಸರ್ಕಾರ : 2018 ಮತ್ತು 19ರ ವಿಧಾನಸಭೆ ಸದಸ್ಯ ಬಲ ಬದಲಾವಣೆಯ ಚಿತ್ರಣ ಇಲ್ಲಿದೆ..

ಬೆಂಗಳೂರು: ಕಳೆದ ವಿಧಾನಸಭೆಯಲ್ಲಿ ಅತಂತ್ರ ಜನಾದೇಶ ಬಂದ ಕಾರಣ ಒಂದೂವರೆ ವರ್ಷ ಕಾಲ ರಾಜ್ಯವನ್ನು ರಾಜಕೀಯ ಅಸ್ಥಿರತೆ ಕಾಡಿತ್ತು. ಇದಕ್ಕೆ ಪರಿಹಾರ ಕಾಣಲು...

ಚಿತ್ರದುರ್ಗ,ಕಾಡಾನೆಗೆ ಡಾಂಟಿಂಗ್

ಚಿತ್ರದುರ್ಗ: ಕೊನೆಗೂ ಡಾಂಟಿಂಗ್ ಆದ ಕಾಡಾನೆ. ಜೋಗಿಮಟ್ಟಿ ಅರಣ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಬೀಡುಬಿಟ್ಟಿದ್ದ ಸಲಗ. ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ. ನಂದಿಪುರ ವಡಗಟ್ಟೆ ಅರಣ್ಯದಲ್ಲಿ ಅರವಳಿಕೆ ಕೊಟ್ಟು ಹಗ್ಗ...

ಬೈ ಎಲೆಕ್ಷನ್​ ರಿಸಲ್ಟ್​| ಶಿವಾಜಿನಗರ ‘ಕೈ’ ಪಾಲಿಗೆ; ರಿಜ್ವಾನ್​ ಅರ್ಷಾದ್​ಗೆ 13,520ಮತಗಳ ಅಂತರದಿಂದ ಗೆಲುವು

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್​ ಅರ್ಷದ್​ 49,887 ಮತ ಗಳಿಸಿ, ಸಮೀಪದ ಸ್ಪರ್ಧಿ ಬಿಜೆಪಿಯ ಎಂ. ಶರವಣ ವಿರುದ್ಧ 13520 ಮತಗಳ...

ಕೊಟ್ಟ ಮಾತು ಉಳಿಸಿಕೊಂಡ ಸವದಿ

ಐಗಳಿ: ಅಥಣಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ...

ಕಾರವಾರ: ‘ನಾಯಿ ಥರ’ ಎಂದು ಅತಿ ಕನಿಷ್ಠ ವಸ್ತುವಿಗೆ ಹೋಲಿಸುವುದಿದೆ. ಆದರೆ, ಅದೇ ನಾಯಿಗಳು ಈಗ ಜಿಲ್ಲಾಡಳಿತಕ್ಕೆ ತಲೆಬಿಸಿ ನೀಡುತ್ತಿವೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ ಹೆಚ್ಚುತ್ತಿರುವ ‘ಗ್ರಾಮ ಸಿಂಹ’ಗಳ ಹಾವಳಿಯಿಂದ ಜನರನ್ನು ಮುಕ್ತ ಮಾಡಲು ಸಮಗ್ರ ಯೋಜನೆ ರೂಪಿಸಲು ಹೊರಟ ಜಿಲ್ಲಾಡಳಿತ ಅದರ ವೆಚ್ಚ ನೋಡಿ ದಂಗಾಗಿದೆ.

ಪಶು ಸಂಗೋಪನಾ ಇಲಾಖೆಯ ದಾಖಲೆ ಪ್ರಕಾರ, ಜಿಲ್ಲೆಯಲ್ಲಿ 76 ಸಾವಿರ ನಾಯಿಗಳಿವೆ. ಎಲ್ಲ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು 3.5 ಕೋಟಿ ರೂ. ಬೇಕು ಎಂದು ಲೆಕ್ಕ ಹಾಕಲಾಗಿದೆ. ಇಷ್ಟೊಂದು ಹಣವನ್ನು ಎಲ್ಲಿಂದ ತರುವುದು ಎಂದು ಯೋಚಿಸುವಂತಾಗಿದೆ.

ನಿರಂತರ ದಾಳಿ: ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಲೂ ಕಾರಣವಿದೆ. ಜಿಲ್ಲೆಯಲ್ಲಿ ಪ್ರತಿ ದಿನ ಕನಿಷ್ಠ 30 ಜನರಿಗೆ ಬೀದಿ ನಾಯಿಗಳು ಕಚ್ಚುತ್ತಿವೆ. ಕಳೆದ ಕೆಲ ತಿಂಗಳ ಹಿಂದೆ ನಾಯಿ ಕಚ್ಚಿ ಭಟ್ಕಳದ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಗುರುವಾರ ಕಾರವಾರದಲ್ಲಿ ಇಬ್ಬರಿಗೆ ನಾಯಿ ಕಚ್ಚಿದೆ. ಆರೋಗ್ಯ ಇಲಾಖೆಯ ಲೆಕ್ಕಾಚಾರದ ಪ್ರಕಾರ, ಕಳೆದ ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ 6205 ಜನರು ನಾಯಿ ಕಡಿತಕ್ಕೊಳಗಾಗಿದ್ದಾರೆ. ಕಾರವಾರದಲ್ಲಿ 287, ಅಂಕೋಲಾದಲ್ಲಿ 391, ಕುಮಟಾದಲ್ಲಿ 650, ಹೊನ್ನಾವರದಲ್ಲಿ 567, ಭಟ್ಕಳದಲ್ಲಿ 820, ಶಿರಸಿಯಲ್ಲಿ 1138, ಸಿದ್ದಾಪುರದಲ್ಲಿ 244, ಯಲ್ಲಾಪುರದಲ್ಲಿ 383, ಮುಂಡಗೋಡಿನಲ್ಲಿ 826, ಹಳಿಯಾಳದಲ್ಲಿ 762, ಜೊಯಿಡಾದಲ್ಲಿ 137 ಜನರಿಗೆ ನಾಯಿ ಕಚ್ಚಿದೆ.

ಗಂಟೆ ಕಟ್ಟುವವರ್ಯಾರು..?: ಇಷ್ಟೆಲ್ಲ ತೊಂದರೆ ಮಾಡುತ್ತಿವೆ ಎಂದು ಅವುಗಳನ್ನು ಸಾಯಿಸುವಂತಿಲ್ಲ. ಪ್ರಾಣಿ ಹಿಂಸೆ ನಿರ್ಬಂಧ ಕಾಯ್ದೆ 1961ರ ಪ್ರಕಾರ ಅದು ಅಪರಾಧ. ಈ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ಮಾಡಬೇಕಿದೆ. ಶಸ್ತ್ರ ಚಿಕಿತ್ಸೆ ಮಾಡಲು ಪಶು ವೈದ್ಯರು ಲಭ್ಯರಿದ್ದಾರೆ. ಆದರೆ, ನಾಯಿಗಳನ್ನು ಹಿಡಿಯುವುದೇ ಸಮಸ್ಯೆ. ಹೊರ ಊರುಗಳಿಂದ ಅದಕ್ಕಾಗಿ ತಂಡ ಕರೆಸಬೇಕಿದೆ. ಕಳೆದ ಬಾರಿ ಕಾರವಾರದಲ್ಲಿ ನಾಯಿ ಕಾಟ ವಿಪರೀತವಾದಾಗ ಹುಬ್ಬಳ್ಳಿಯಿಂದ ಟೀಮ್ ಕರೆಸಿ ನಾಯಿಗಳನ್ನು ಹಿಡಿಸಲಾಗಿತ್ತು. ಪ್ರತಿ ನಾಯಿಗೆ 800 ರೂ.ನಷ್ಟು ಖರ್ಚು ತಗುಲಿತ್ತು. ಇದನ್ನೆಲ್ಲ ತಪ್ಪಿಸಲು ಜಿಲ್ಲಾದ್ಯಂತ ಒಂದೇ ಟೆಂಡರ್ ಮಾಡಿ ಎಲ್ಲೆಡೆ ಶಸ್ತ್ರ ಚಿಕಿತ್ಸೆ ಮಾಡಿಸಲು ಜಿಲ್ಲಾಡಳಿತ ಯೋಜಿಸಿ ಸಿದ್ಧತೆ ನಡೆಸಿದೆ.

11 ಸಾವಿರ ನಾಯಿಗೆ 50 ಲಕ್ಷ !: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 67 ಸಾವಿರ, ನಗರ ಪ್ರದೇಶದಲ್ಲಿ 8,900 ನಾಯಿಗಳಿವೆ ಎಂದು ಲೆಕ್ಕ ಹಾಕಲಾಗಿದೆ. ಪ್ರತಿ ನಾಯಿಯ ಶಸ್ತ್ರಚಿಕಿತ್ಸೆಗೆ ಸರ್ಕಾರ 465 ರೂ. ನಿಗದಿ ಮಾಡಿದೆ. ಗಂಡು ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಗ್ರಾಮೀಣ ಭಾಗದ ಶೇ 10ರಷ್ಟು , ಹಾಗೂ ನಗರ ಪ್ರದೇಶದ ಶೇ 50ರಷ್ಟು ಸೇರಿ ಸುಮಾರು 11 ಸಾವಿರ ನಾಯಿಗಳಿಗೆ 50 ಲಕ್ಷ ರೂ. ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಟೆಂಡರ್ ಪಡೆದವರು ನಾಯಿಗಳನ್ನು ಹಿಡಿದು, ಶಸ್ತ್ರ ಚಿಕಿತ್ಸೆ ಮಾಡಿ, ಮೂರು ದಿನ ಇಟ್ಟುಕೊಂಡು ಅವುಗಳ ಆರೋಗ್ಯ ಪರಿಸ್ಥಿತಿ ನೋಡಿ ಮೊದಲು ಸಿಕ್ಕಿದ ಜಾಗದಲ್ಲೇ ಬಿಡಬೇಕಿದೆ.

ಡಿಸಿ ಸೂಚನೆಯಂತೆ ಯೋಜನೆ ರೂಪಿಸಿದ್ದೇವೆ. ಜಿಪಂ ಸಿಇಒ ಅನುಮತಿಗಾಗಿ ಕಡತವನ್ನು ಸಲ್ಲಿಸಲಾಗಿದೆ. ನಾವು ಟೆಂಡರ್ ಕರೆದು ಕಂಪನಿಯನ್ನು ಗುರುತಿಸಿಕೊಡುತ್ತೇವೆ. ಯಾವ ಸ್ಥಳದಲ್ಲಿ ನಾಯಿ ಹಿಡಿಯಲಾಗಿದೆಯೋ ಆ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆ ಅಥವಾ ಗ್ರಾಪಂ ನಾಯಿಯ ಶಸ್ತ್ರ ಚಿಕಿತ್ಸೆಯ ವೆಚ್ಚ ಭರಿಸಬೇಕಿದೆ. ಆರ್.ಪಿ.ನಾಯ್ಕ ನಗರರಾಭಿವೃದ್ಧಿ ಕೋಶದ ಇಂಜಿನಿಯರ್

Stay connected

278,751FansLike
584FollowersFollow
622,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...