ಗ್ರಾಪಂ ಸಹಯೋಗದಲ್ಲಿ ಗ್ರಂಥಾಲಯ, ಆನ್‌ಲೈನ್ ವ್ಯವಸ್ಥೆ

blank

ಚಿಕ್ಕಮಗಳೂರು: ತಾಲೂಕಿನ ಲಕ್ಕುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸ್ಥಳೀಯ ಯುವಕ-ಯುವತಿಯರಿಗೆ ಅನುಕೂಲವಾಗಲು ಗ್ರಂಥಾಲಯ, ಕಂಪ್ಯೂಟರ್, ಇಂಟರ್ ನೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಗ್ರಾಪಂ ಪಿಡಿಓ ಮಂಜೇಗೌಡ ತಿಳಿಸಿದರು.

blank

ಪಂಚಾಯಿತಿ ಕಟ್ಟಡದ ಎರಡು ಕೊಠಡಿಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್, ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕರು ಬೇಕಾದ ಪಠ್ಯ ಡೌನ್‌ಲೋಡ್ ಮಾಡಿಕೊಂಡು ಅಭ್ಯಾಸಿಕೊಳ್ಳಬಹುದು. ಅಲ್ಲದೇ ಜ್ಞಾನಾರ್ಜನೆ ವೃದ್ದಿಗೊಳ್ಳಲು ಎರಡನೇ ಕೊಠಡಿಯಲ್ಲಿ ಗ್ರಂಥಾಲಯವನ್ನು ತೆರೆಯಲಾಗಿದೆ. ಗ್ರಾಪಂ ವ್ಯಾಪ್ತಿಯ ಜನ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಸ್ತುತ ಆರು ಗ್ರಾಮಗಳನ್ನು ಒಳಗೊಂಡಿರುವ ಪಂಚಾಯಿತಿ ಇದಾಗಿದೆ. ಇತ್ತೀಚೆಗೆ ಕೆಲವು ತಾಂತ್ರಿಕ ದೋಷದಿಂದ ಕೆಲವು ತೊಂದರೆಯಾಗಿತ್ತು. ಇದೀಗ ಸಕಲ ಸವಲತ್ತನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ರುದ್ರೇಶ್ ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

Share This Article
blank

ಮಳೆಗಾಲದಲ್ಲಿ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು! rainy season

rainy season: ಈಗಾಗಲೇ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ಈ ಹವಾಮಾನ  ಅನೇಕ ರೋಗಗಳು ಮತ್ತು ಸೋಂಕುಗಳ…

ಈ ವಿಷಯಗಳಲ್ಲಿ ಪುರುಷರು ಮಹಿಳೆಯರ ಮುಂದೆ ನಿಲ್ಲಲು ಸಾಧ್ಯವಿಲ್ಲ! Chanakya Niti

Chanakya Niti : ಆಚಾರ್ಯ ಚಾಣಕ್ಯ ರಾಜಕೀಯ, ಸಮಾಜ, ಸಂಬಂಧಗಳು ಮತ್ತು ಜೀವನದ ಸೂಕ್ಷ್ಮ ವ್ಯತ್ಯಾಸಗಳನ್ನು…

blank