ಆಲ್ದೂರು: ಆಲ್ದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎ.ಬಿ.ಭರತ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎನ್.ಚೇತನ್‌ಕುಮಾರ್ ಕಾರ್ಯನಿರ್ವಹಿಸಿದರು.

ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು ಉಪಾಧ್ಯಕ್ಷ ಭರತ್ ಅವರನ್ನು ಅಭಿನಂದಿಸಿ ಮಾತನಾಡಿ, ನೂತನ ಉಪಾಧ್ಯಕ್ಷರ ಮೇಲೆ ಮಹತ್ತರ ಜವಾಬ್ದಾರಿ ಇದೆ. ಗ್ರಾಮಸ್ಥರ ನಿರೀಕ್ಷೆಗೆ ಮೀರಿ ಕೆಲಸ ಮಾಡಲಾಗದಿದ್ದರೂ ಜನತೆಯ ಮನಸ್ಸನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದರು.
ಗ್ರಾಪಂನಲ್ಲಿ ಹಳೇ ಬೇರು, ಹೊಸ ಚಿಗುರು ಸಮ್ಮಿಲನವಾಗಿದೆ. ಗ್ರಾಪಂಗೆ ಪತ್ರಿಕೆ ಹಾಕುತ್ತಿದ್ದ ಬಾಲಕ ಈಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರ ದಕ್ಷತೆಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯವಿದೆ ಎಂದರು.
ನೂತನ ಉಪಾಧ್ಯಕ್ಷ ಭರತ್ ಮಾತನಾಡಿ, ಚುನಾವಣೆಯಲ್ಲಿ ಜನರು ಅಧಿಕ ಮತ ನೀಡಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಎಲ್ಲ ಪಕ್ಷದವರ ಸಹಕಾರದಿಂದ ಉಪಾಧ್ಯಕ್ಷನಾಗಿ ಜನಸಾಮಾನ್ಯರ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ, ಧರ್ಮಗುರು ಾದರ್ ಸಂತೋಷ್, ಬ್ಯಾರಿ ಮಸೀದಿಯ ಮೌಲಾನಗಳು, ಮುಖಂಡರಾದ ಕೆ.ಟಿ. ರಾಧಾಕೃಷ್ಣ, ಕುರುವಂಗಿ ವೆಂಕಟೇಶ್, ಕೆ.ಆರ್.ಅನಿಲ್‌ಕುಮಾರ್, ಸಂತೋಷ್ ಕೋಟ್ಯಾನ್, ಸೀತಾರಾಮ ಭರಣ್ಯ, ದೊಡ್ಡಮಾಗರವಳ್ಳಿ ಗ್ರಾಪಂ ಅಧ್ಯಕ್ಷ ಡಿ.ಪಿ.ರಂಜಿತ್ ಇತರರಿದ್ದರು.