ಕೊಪ್ಪಳ: ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರು ಗ್ರಂಥಾಲಯದ ಸದುಪಯೋಗ ಪಡೆಯಬೇಕೆಂದು ಮುನಿರಾಬಾದ್ ಪೊಲೀಸ್ ಠಾಣೆ ಎಎಸ್‌ಐ ರಾಮಣ್ಣ ಹೇಳಿದರು.
ತಾಲೂಕಿನ ಮುನಿರಾಬಾದ್ ಗ್ರಾಮದ ಕೇಂದ್ರ ಗ್ರಂಥಾಲದಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿಚಾರಣೆ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾಹಿತಿ ಪಡೆಯಲು ಅನೇಕ ಮಾರ್ಗಗಳಿವೆ. ಆದರೂ, ಪುಸ್ತಕದ ಓದು ನೀಡುವ ಅನುಭವ, ಜ್ಞಾನವೇ ಬೇರೆ. ಹೀಗಾಗಿ ಗ್ರಂಥಾಲಯಗಳಿಗೆ ಇಂದಿಗೂ ಮಹತ್ವವಿದೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರು ಪರಿಣಾಮಕಾರಿಯಾಗಿ ಗ್ರಂಥಾಲಯ ಬಳಸಿಕೊಂಡು ಉತ್ತಮ ಉದೋಗ ಪಡೆಯಬಹುದು ಎಂದರು.
ನೀರಾವರಿ ಅಧಿಕಾರಿ ಮಹಾಂತೇಶ ಟಿ. ಮಾತನಾಡಿ, ಡಾ.ಎಸ್.ಆರ್.ರಂಗನಾಥ ಜನ್ಮದಿನವನ್ನು ಗ್ರಂಥಪಾಲಕರ ದಿನವಾಗಿ ಆಚರಿಸಲಾಗುತ್ತಿದೆ. ಮದ್ರಾಸ್ ವಿವಿಯಲ್ಲಿ ಗ್ರಂಥಪಾಲಕರಾಗಿದ್ದ ರಂಗನಾಥ ಅನೇಕ ಹೊಸತುಗಳನ್ನು ಪರಿಚಯಿಸಿದ್ದಾರೆ. ಅವರ ಸೇವೆಗೆ ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳು ಬಂದಿವೆ. ಅವರ ಜನ್ಮದಿವನ್ನು ಗ್ರಂಥಪಾಲಕರ ದಿನವಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಮುನಿರಾಬಾದ್ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ರಾಜಾಭಕ್ಷಿ ರಂಗನಾಥ ಅವರು ಗ್ರಂಥಾಲಯ ಕುರಿತು ರಚಿಸಿದ ಪಂಚಸೂತ್ರ ವಿವರಿಸಿದರು. ಶಿಕ್ಷಕಿ ಕೋಮಲಾ ಶಾಲಾ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಗ್ರಂಥಾಲಯ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಗ್ರಾಪಂ ಸದಸ್ಯರಾದ ಗಾಳೆಪ್ಪ, ಇಕ್ಬಲ್ ಹುಸೇನ್, ಪಿಸಿಗಳಾದ ಮಂಜುನಾಥ, ಶರಣಪ್ಪ, ಬಸವನಗೌಡ, ಗ್ರಂಥಾಲಯ ಸಹಾಯಕ ರಾಮಪ್ಪ ಇತರರಿದ್ದರು.