More

  ಗ್ಯಾರಂಟಿಗಳ ಷರತ್ತು ವಿರೋಧಿಸಿ ಪ್ರತಿಭಟನೆ

  ಚಿತ್ರದುರ್ಗ: ಐದು ಗ್ಯಾರಂಟಿಗಳನ್ನೂ ಷರತ್ತು ರಹಿತವಾಗಿ ಜಾರಿಗೊಳಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಬಿಜೆಪಿ ಕಾರ‌್ಯಕರ್ತರು ಮಂಗಳವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟಿಸಿದರು.

  ಹೇಗಾದರೂ ಸರಿ ಅಧಿಕಾರಕ್ಕೆ ಬರಬೇಕೆಂಬ ದುರುದ್ದೇಶದಿಂದ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ ಸೊಸೆ ನಡುವೆ ಕಿತ್ತಾಟ ಆರಂಭವಾಗಿದೆ. 200 ಯೂನಿಟ್ ವಿದ್ಯುತ್ ಉಚಿತವೆಂದು ಈಗ ಸರಾಸರಿ ಬಳಕೆಯ ಲೆಕ್ಕ ಹಾಕುವುದಾಗಿ ಹೇಳುತ್ತಿರುವ ಸರ್ಕಾರದ ನಿಲುವನ್ನು ಖಂಡಿಸಿದ ಪ್ರತಿಭಟನಾನಿರತರು, ಚುನಾವಣಾ ಭರವಸೆಯಂತೆ ಯಾವುದೇ ನಿಬಂಧನೆಗಳಿಲ್ಲದೆ ಗ್ಯಾರಂಟಿಗಳ ಅನುಷ್ಠಾನಗೊಳಿಸಬೇಕು. ಕೊಟ್ಟಿ ರುವ ಭರವಸೆಯಂತೆ ಪೂರ್ಣ ಪ್ರಮಾಣದಲ್ಲಿ 200 ಯೂನಿಟ್ ವಿದ್ಯುತ್‌ನ್ನು ಉಚಿತವಾಗಿ ಕೊಡಬೇಕು ಎಂದು ಆಗ್ರಹಿಸಿದರು.

  ನಿರುದ್ಯೋಗ ಭತ್ಯೆ ವಿಚಾರದಲ್ಲೂ ಕಾಂಗ್ರೆಸ್ ಯುವ ಜನರನ್ನು ವಂಚಿಸುತ್ತಿದೆ. ಉಚಿತ ಬಸ್ ಪ್ರಯಾಣ ಯೋಜನೆಗೂ ಷರತ್ತುಗಳು ಇರಬಾರದು ಎಂದು ಆಗ್ರಹಿಸಿದ ಕಾರ‌್ಯಕರ್ತರು,ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ, ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳಲಿದೆ. ರಾಜ್ಯದ ಸಚಿವರು, ಕೈ ಶಾಸಕರು ಓಡಾಡುವುದು ಕಷ್ಟವಾದೀತು ಎಂದು ಎಚ್ಚರಿಸಿದರು. ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಸಚಿವರ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದರು.

  ಬಿಜೆಪಿ ನಗರ ಮಂಡಲ ಅಧ್ಯಕ್ಷ ನವೀನ ಚಾಲುಕ್ಯ, ನಗರಸಭಾ ಸದಸ್ಯ ಹರೀಶ್,ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪು ರ,ಮಾಜಿ ಸದಸ್ಯೆರೇಖಾ,ಸಂಪತ್,ವೆಂಕಟೇಶ್‌ಯಾದವ್,ತಿಪ್ಪೇಸ್ವಾಮಿ,ಮಲ್ಲಿಕಾರ್ಜನ್,ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್,ಮಾಧುರಿಗಿ ರೀಶ್,ಕಲ್ಲೇಶಯ್ಯ,ಶಿವಣ್ಣಚಾರ್,ಯಶವಂತ,ವೀರೇಶ್‌ಜಾಲಿಕಟ್ಟೆ

  ನಾಗರಾಜ್,ಪಾಲಯ್ಯ,ಗೌರಣ್ಣ,ಪರಶುರಾಮ್, ಸತ್ಯನಾರಾಯಣಾಚಾರ್, ಜಯಣ್ಣ, ಶಿವಾನಂದ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts