ಗೌಡನಕೆರೆ ಪ್ರದೇಶ ಸ್ವಚ್ಛತಾ ಕಾರ್ಯ

blank

ಶಿವಮೊಗ್ಗ: ನಗರದ ಗ್ರೋ ಗ್ರೀನ್, ಅನಿಮಲ್ ರೆಸ್ಕ್ಯೂ ಕ್ಲಬ್ ಹಾಗೂ ಗ್ರೀನ್ ಲೈವ್ಸ್ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛ ಭಾರತ ಶ್ರೇಷ್ಠ ಭಾರತ ಕಲ್ಪನೆಯಡಿ ಭಾನುವಾರ ಆಯನೂರು ಸಮೀಪದ ಗೌಡನಕೆರೆ ಪ್ರದೇಶ ಸ್ವಚ್ಛ ಮಾಡಲಾಯಿತು.

ಕೆರೆ ಸಮೀಪದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಖಾಲಿ ಬಾಟಲಿ ಮತ್ತಿತರ ತ್ಯಾಜ್ಯ ತೆರವುಗೊಳಿಸಲಾಯಿತು. ಸ್ವಚ್ಛತಾ ಕಾರ್ಯಕ್ಕೆ ಜಿಪಂ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಕಸ ಸಂಗ್ರಹ ವಾಹನ ಒದಗಿಸಿದ್ದರು. ಕೆರೆ ಆವರಣದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.

ಹಣಗೆರೆ, ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿರುವುದರಿಂದ ಸಾಕಷ್ಟು ಪ್ರಯಾಣಿಕರು ಮಾರ್ಗಮಧ್ಯೆ ನೀರಿನ ಬಾಟಲಿ ಸೇರಿ ವಿವಿಧ ತ್ಯಾಜ್ಯ ಎಸೆಯುವುದು ಸಾಮಾನ್ಯ. ಹಾಗಾಗಿ ಗೌಡನಕೆರೆ ಆವರಣದಲ್ಲಿ ಡಸ್ಟ್​ಬಿನ್ ಇರಿಸಿದ್ದು ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡುವಂತೆ ಗ್ರೋ ಗ್ರೀನ್ ಸಂಸ್ಥೆ ಮನವಿ ಮಾಡಿದೆ.

ಗ್ರೋ ಗ್ರೀನ್ ಸಂಸ್ಥೆ ಕಾರ್ಯಕರ್ತರಾದ ನಿರಂಜನಿ, ಸುನೈನಾ, ವಿಜಯಲಕ್ಷ್ಮೀ, ಶ್ರುತಿ, ಸ್ವಪ್ನಾ, ಸವಿತಾ, ಲಲಿತಾ, ಲಕ್ಷ್ಮೀ, ಬುರ್ಖಾ ಮುಲಾನಿ, ಜಿ.ಎಸ್.ಪ್ರಸಾದ್, ಸಿಎಂ ಶ್ರವಣ್ ಪಾಲ್ಗೊಂಡಿದ್ದರು.

Share This Article

ಈ ಆಹಾರಗಳನ್ನು ಎಂದಿಗೂ ಮತ್ತೆ ಬಿಸಿ ಮಾಡಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ… Never reheat these foods

Never reheat these foods:  ಮನೆಗಳಲ್ಲಿ ಉಳಿದ ಆಹಾರವನ್ನು ಬಿಸಿ ಮಾಡಿ ನಂತರ ತಿನ್ನುವುದು ಸಾಮಾನ್ಯ.…

ಮಾವಿನಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ ಗೊತ್ತಾ? mango

mango: ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಮಾವು ಕೂಡ ಒಂದು.   ಅನೇಕರು ಮಾವಿನಹಣ್ಣು ತಿಂದ ನಂತರ ನೀರು…

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

Stress : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡ ಅನುಭವಿಸೋದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ…