ವಿಧಾನಸಭೆ ಚುನಾವಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಮತದಾನಕ್ಕಾಗಿ ಬಳಸಿದ್ದ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ಸುರಕ್ಷಿತವಾಗಿ ಗೋದಾಮಿನಲ್ಲಿ ಭಾನುವಾರ ಇಡಲಾಗಿದೆ.
ಮೇ 10ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳ ಚುನಾವಣೆಯಲ್ಲಿ 3,478 ಬ್ಯಾಲೆಟ್ ಯೂನಿಟ್, 2938 ಕಂಟ್ರೋಲ್ ಯೂನಿಟ್ ಹಾಗೂ 3022 ವಿವಿ ಪ್ಯಾಟ್‌ಗಳನ್ನು ಬಳಸಲಾಗಿತ್ತು. ಜಿಲ್ಲೆಯಲ್ಲಿ 2,905 ಮತಗಟ್ಟೆಗಳಿದ್ದರೂ ಶೇ.20ರಷ್ಟು ಹೆಚ್ಚುವರಿಯಾಗಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳನ್ನು ಕಾಯ್ದಿರಿಸಲಾಗಿತ್ತು. ಯಾವುದಾದರೂ ಮತಗಟ್ಟೆಗಳಲ್ಲಿ ಮತಯಂತ್ರ ಹಾಗೂ ಕಂಟ್ರೋಲ್ ಯೂನಿಟ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಇವಿಎಂ ಬದಲಿಸಲು ಹೆಚ್ಚುವರಿ ಯಂತ್ರಗಳನ್ನು ಮೀಸಲಿಡಲಾಗಿತ್ತು. ಆದರೆ, ಮತಗಟ್ಟೆಗೆ ಒಂದರಂತೆ ಮತಯಂತ್ರ ಬಳಸಲಾಗಿತ್ತು.
ಮೇ 13 ರಂದು ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆದಿತ್ತು. ಮತದಾನ ಹಾಗೂ ಮತ ಎಣಿಕೆ ಕಾರ್ಯ ಸಂಪೂರ್ಣವಾಗಿ ಶಾಂತಿಯುತವಾಗಿ ಜರುಗಿತ್ತು. ಮತ ಎಣಿಕೆ ಕಾರ್ಯ ಮುಗಿದ ಬಳಿಕ ಮತಯಂತ್ರಗಳನ್ನು ಸುರಕ್ಷಿತವಾಗಿ ಎಣಿಕೆ ಕೇಂದ್ರದಿಂದ ವೇರ್‌ಹೌಸ್‌ಗೆ ಸಾಗಿಸಲು ಚುನಾವಣಾ ಆಯೋಗ ಸೂಚಿಸಿದ್ದು, ಆ ಪ್ರಕಾರ ಎಲ್ಲ ಮತಯಂತ್ರ, ವಿವಿ ಪ್ಯಾಟ್, ಕಂಟ್ರೋಲ್ ಯೂನಿಟ್‌ಗಳಲ್ಲಿ ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಗೋದಾಮಿಗೆ ಕೊಂಡೊಯ್ಯಲಾಯಿತು.
ಪ್ರತಿಯೊಂದು ಕ್ಷೇತ್ರವಾರು ಬಳಸಲಾದ ಮತಯಂತ್ರಗಳನ್ನು ವೇರ್‌ಹೌಸ್‌ನಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ. ಮತಯಂತ್ರಗಳ ಸ್ಥಳಾಂತರದ ವೇಳೆ ಹಾಗೂ ಮತಯಂತ್ರಗಳಿರುವ ಹಿನ್ನೆಲೆಯಲ್ಲಿ ವೇರ್‌ಹೌಸ್ ಬಳಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಸೂಕ್ತ ಬಂದೋಬಸ್ತ್ ಏರ್ಪಡಿಡಲಾಗಿದೆ. ಅಲ್ಲದೆ, ಸಿಸಿ ಕ್ಯಾಮರಾ ಕಣ್ಗಾವಲು ಇಡಲಾಗಿದೆ.
ಪಿರಿಯಾಪಟ್ಟಣ ಕ್ಷೇತ್ರದಲ್ಲಿ 235, ಕೆ.ಆರ್.ನಗರದಲ್ಲಿ 250, ಹುಣಸೂರು ಕ್ಷೇತ್ರದಲ್ಲಿ 273, ಎಚ್.ಡಿ.ಕೋಟೆ ಕ್ಷೇತ್ರದಲ್ಲಿ 282, ನಂಜನಗೂಡು ಕ್ಷೇತ್ರದಲ್ಲಿ 249, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 337, ಕೆ.ಆರ್.ಕ್ಷೇತ್ರದಲ್ಲಿ 265, ಚಾಮರಾಜ ಕ್ಷೇತ್ರದಲ್ಲಿ 244, ನರಸಿಂಹರಾಜ ಕ್ಷೇತ್ರದಲ್ಲಿ 282, ವರುಣ ಕ್ಷೇತ್ರದಲ್ಲಿ 261 ಹಾಗೂ ತಿ.ನರಸೀಪುರ ಕ್ಷೇತ್ರದಲ್ಲಿ 227 ಇವಿಎಂ, ವಿವಿ ಪ್ಯಾಟ್ ಹಾಗೂ ಕಂಟ್ರೋಲ್ ಯೂನಿಟ್‌ಗಳನ್ನು ಮಾತ್ರ ಬಳಸಲಾಗಿತ್ತು. ಜಿಲ್ಲೆಯಲ್ಲಿ 2,905 ಮತಗಟ್ಟೆಗಳಿದ್ದು, ತಲಾ ಒಂದೊಂದು ಇವಿಎಂ, ವಿವಿ ಪ್ಯಾಟ್ ಹಾಗೂ ಕಂಟ್ರೋಲ್ ಯೂನಿಟ್‌ಗಳನ್ನು ಮತದಾನಕ್ಕೆ ಬಳಸಲಾಗಿತ್ತು. ಉಳಿದ ಯಂತ್ರಗಳನ್ನು ಮೀಸಲು ಇರಿಸಲಾಗಿತ್ತು