ಗೋಗಟೆ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ನಿತಿನ್ ಗಡ್ಕರಿಗೆ ಆಹ್ವಾನ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನಗರದ ಕೆಎಲ್ ಎಸ್ ಸಂಸ್ಥೆಯ ಕಾಲೇಜ್ ಆಫ್ ಕಾಮರ್ಸ್ ನ ರಜತ ಮಹೋತ್ಸವ ಆಚರಣೆ ಸಮಾರಂಭಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸ್ಥೆಯ ನಿಯೋಗ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.
ಕೆಎಲ್‌ಎಸ್ ಗೋಗಟೆ ಕಾಲೇಜ್ ಆಫ್ ಕಾಮರ್ಸ್‌ನ ನಿಯೋಗದ ,ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಎ.ಕೆ. ಟಗರೆ, ನೇತೃತ್ವದಲ್ಲಿ , ವಿವೇಕ ಕುಲಕರ್ಣಿ ಮತ್ತು ಎಸ್.ವಿ. ಗಣಾಚಾರಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸಂಸ್ಥೆಯ ಬಿಬಿಎ ಮತ್ತು ಬಿಸಿಎ ವಿಭಾಗಗಳ ರಜತ ಮಹೋತ್ಸವ ಆಚರಣೆಗೆ ಔಪಚಾರಿಕ ಆಹ್ವಾನವನ್ನು ನೀಡಿದರು.