Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಗೋವು-ಋಷಿ ಎರಡೂ ಸಮಾನ

Tuesday, 16.01.2018, 3:02 AM       No Comments

ನಿರೂಪಣೆ: ಗಂಗಾವತಿ ಪ್ರಾಣೇಶ್​

ಮಹರ್ಷಿ ಆಪಸ್ತಂಬರು ನೀರಿನಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದರು. ಬರದಿಂದಾಗಿ ಮಳೆ-ಬೆಳೆಗಳಿಲ್ಲದೆ ಹಸಿದ ಬಡ ಕೃಷಿಕರು ಮೀನನ್ನಾದರೂ ಹಿಡಿದು ತಿನ್ನೋಣವೆಂದು ಬಲೆ ಬೀಸಿದ್ದರು. ಆ ಬಲೆಗೆ ಆಪಸ್ತಂಬರು ಸಿಲುಕಿದರು. ಅವರನ್ನು ಕಂಡ ಕೃಷಿಕರು ಭಯದಿಂದ ನಡುಗುತ್ತ, ‘ಮಹಾತ್ಮರೇ; ನಾವು ಬಡವರು. ಮೀನನ್ನಾದರೂ ತಿಂದು ಬದುಕೋಣವೆಂದು ಬಲೆ ಬೀಸಿದೆವು. ನೀವು ಇದ್ದದ್ದು ತಿಳಿಯಲಿಲ್ಲ. ಕ್ಷಮಿಸಿ’ ಎಂದು ಪಾದಕ್ಕೆರಗಿದರು. ಆಗ ಆಪಸ್ತಂಬರು ಬರಗಾಲಕ್ಕೆ ರಾಜನೇ ಕಾರಣ ಎಂದು ಹೇಳಿ ಆತನನ್ನು ಕರೆಸಿ, ‘ರಾಜಾ ಈ ಕೃಷಿಕರು ನನ್ನನ್ನು ಬಲೆ ಬೀಸಿ ಹಿಡಿದಿದ್ದಾರೆ. ನನ್ನ ಸಮಾನವಾದ ಯಾವುದಾದರೊಂದು ವಸ್ತುವನ್ನು ಇವರಿಗೆ ಕೊಟ್ಟು ನನ್ನನ್ನು ಬಿಡಿಸು’ ಎಂದರು. ಒಬ್ಬ ಋಷಿಗೆ ಸಮಾನವಾದ ವಸ್ತು ಯಾವುದು? ಯಾರಿಗೂ ಹೊಳೆಯಲಿಲ್ಲ. ಆಗ ಋಷಿ, ‘ರಾಜಾ, ಇವರಿಗೆ ಸಮೃದ್ಧ ಹಾಲು ಕೋಡುವ ನಾಲ್ಕಾರು ಗೋವು ಕೊಡು. ಋಷಿಗಳಿಗೆ ಸಮಾನವಾದದ್ದು ಗೋವು ಮಾತ್ರ’ ಎಂದರು. ‘ಕೃಷಿಕರೇ, ನೀವು ಈ ಹಿಂಸಾ ಕಾರ್ಯ ಬಿಟ್ಟು ಗೋಮಾತೆ ಸೇವೆ ಮಾಡಿ. ಹಾಲು ಪಡೆದು ಅದರಿಂದ ಬದುಕಿರಿ’ ಎಂದು ಋಷಿ ಹೇಳಿದರು.

 

Leave a Reply

Your email address will not be published. Required fields are marked *

Back To Top