ಗೋಲ್ಡ್ ಪೋಸ್ಟರ್​ನಲ್ಲಿ ಅಕ್ಷಯ್ ಮಿಂಚಿಂಗ್

ರೀಮಾ ಕಾಗ್ತಿ ನಿರ್ದೇಶನದ ‘ಗೋಲ್ಡ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಲುಕ್ ಹೇಗಿರಲಿದೆ ಎಂಬ ವಿಚಾರವನ್ನು ಈ ಹಿಂದೆಯೇ ರೀಮಾ ಟೀಸರ್ ಮೂಲಕ ಬಹಿರಂಗಗೊಳಿಸಿದ್ದರು. ಈಗ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಗೆ ಮತ್ತಷ್ಟು ಮೈಲೇಜ್ ಒದಗಿಸಿದ್ದಾರೆ. ಹೊಸ ಪೋಸ್ಟರ್​ನಲ್ಲಿ ಅಕ್ಷಯ್ ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ನಿಂತಿದ್ದಾರೆ. ಜತೆಗೆ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಹಾಕಿ ಆಟದ ಕಥೆ ಆಧರಿಸಿ ‘ಗೋಲ್ಡ್’ ಸಿದ್ಧಗೊಳ್ಳುತ್ತಿದ್ದು, ಕೋಚ್ ಆಗಿ ಅಕ್ಷಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಪೋಸ್ಟರ್​ನಲ್ಲಿ ಹಾಕಿ ಆಟಗಾರರ ಫೋಟೋ ಕೂಡ ಇದೆ. ಈ ಚಿತ್ರ ದೇಶಪ್ರೇಮದ ಕುರಿತ ಕಥೆಯನ್ನೂ ಹೇಳಲಿದೆ. ಈ ಹಿನ್ನೆಲೆಯಲ್ಲಿ ‘ಗೋಲ್ಡ್’ ಸ್ವಾತಂತ್ರ್ಯ ದಿನಾಚರಣೆಯಂದೇ (ಆ.15) ತೆರೆಕಾಣುತ್ತಿದೆ. ಕಿರುತೆರೆಯಲ್ಲಿ ಗುರುತಿಸಿಕೊಂ ಡಿರುವ ಮೌನಿ ರಾಯ್ ಈ ಚಿತ್ರದ ಮೂಲಕ ಹಿರಿತೆರೆಗೆ ಜಿಗಿದಿದ್ದಾರೆ.-ಏಜೆನ್ಸೀಸ್

Leave a Reply

Your email address will not be published. Required fields are marked *