ಗೋಡೆಕೆರೆ ಮಠಕ್ಕೆ ಉತ್ತರಾಧಿಕಾರಿ ನೇಮಕ

ಚಿಕ್ಕನಾಯಕನಹಳ್ಳಿ: ಗೋಡೆಕೆರೆ ಮಠದ ಸ್ಥಿರಪಟ್ಟಾಧ್ಯಕ್ಷ ಪೀಠಕ್ಕೆ ಉತ್ತರಾಧಿಕಾರಿಯಾಗಿ ಸಿದ್ದೇಶ ಸ್ವಾಮೀಜಿಗೆ ಶ್ರೀ ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ದೀಕ್ಷೆ ನೀಡಿದರು.

ಶ್ರೀ ಸಿದ್ದರಾಮೇಶ್ವರರು ಹಾಕಿಕೊಟ್ಟ ಹಾದಿಯಲ್ಲಿ ಇದುವರೆಗೆ ಎಂಟು ಮಠಾಧೀಶರು ಮಠ ನಡೆಸಿಕೊಂಡು ಬಂದಿದ್ದಾರೆ. ಶಿಷ್ಯ ಸ್ವೀಕಾರದ ಬಳಿಕ ಸಂಸ್ಕೃತ, ವೇದಪಾಠ, ಜೊ್ಯೕತಿಷ್ಯ, ಧಾರ್ವಿುಕ ಜ್ಞಾನದ ಅಧ್ಯಯನ ನಂತರ ಮಠದ ತೀರ್ವನದಂತೆ ನೂತನ ಸ್ವಾಮೀಜಿಗಳ ಪೀಠಾರೋಹಣ ನೆರವೇರಲಿದೆ ಎಂದು ಶ್ರೀ ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ದೀಕ್ಷೆ ಪಡೆದ ಸಿದ್ದೇಶ ಸ್ವಾಮೀಜಿ ವಿವಿಧ ಧಾರ್ವಿುಕ ವಿಧಿವಿಧಾನ ನೆರವೇರಿಸಿದರು. ಶಾಸಕ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಆರ್.ಶಶಿಧರ್ ಮತ್ತಿತರರಿದ್ದರು.

ಸ್ವಯಂ ಪ್ರೇರಣೆಯಂತೆ ನಿರ್ಧಾರ: ಸಿದ್ದೇಶ್ (ಸಿದ್ದೇಶ ಸ್ವಾಮೀಜಿ) ಜೆ.ಸಿ.ಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು, ಗೋಡೆಕೆರೆ ಹೊಸಮನೆ ವಂಶಸ್ಥರಾದ ಕುಮಾರಸ್ವಾಮಿ ಮತ್ತು ಪ್ರತಿಭಾ ದಂಪತಿ ಏಕೈಕ ಪುತ್ರ. ಪಾಲಕರ ಹಾಗೂ ಸಿದ್ದೇಶ್ ಸ್ವಯಂ ಪ್ರೇರಣೆಯಂತೆ ಮಠದ ಉತ್ತರಾಧಿಕಾರಿಯಾಗಲು ಒಲವು ತೋರಿದ್ದರು.

Leave a Reply

Your email address will not be published. Required fields are marked *