ದಾವಣಗೆರೆ: ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ ವತಿಯಿಂದ ರೋಟರಿ ಬಾಲಭವನ ಮತ್ತು ಧರಾಮ ಸ್ಕೌಟ್ಸ್ ಭವನದಲ್ಲಿ ಜಾನಪದ ತಜ್ಞ ಡಾ.ಗೊ.ರು. ಚನ್ನಬಸಪ್ಪ ಅವರ ಹೆಸರಿನಲ್ಲಿ ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಐ ಯು.ಕೊಟ್ರೇಶ್, ಭಾರತ್ ಸೌಟ್ ಮತ್ತು ಗೈಡ್ಸ್,ಸೌಟ್ಸ್,ಕಬ್ ಮತ್ತು ಬುಲ್ ಬುಲ್ ಕಡ್ಡಾಯವಾಗಿ ಎಲ್ಲಾ ಶಾಲೆಯಲ್ಲಿಯೂ ಇರಲೇಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ.ಚಿಗಟೇರಿ ಮಾತನಾಡಿ, ಹಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಪಿ.ಷಡಾಕ್ಷರಪ್ಪ, ಜಿಲ್ಲಾ ಕಾರ್ಯದರ್ಶಿ ರತ್ನಾ, ಸಹಾಯಕ ಜಿಲ್ಲಾ ಆಯುಕ್ತ ಎನ್.ಕೆ.ಕೊಟ್ರೇಶ್, ಹಾಲಪ್ಪ, ಶಕುಂತಲ, ಶುಭ ಐನಳ್ಳಿ, ಶಾರದಾ ಮಾಗಾನಹಳ್ಳಿ, ಶಾಂತಾ ಯಾವಗಲ್, ಸೀತಮ್ಮ, ತ್ರಿವೇಣಿ ಇತರರು ಇದ್ದರು.