21 C
Bengaluru
Thursday, January 23, 2020

ಗೇರು, ಮಾವು ಫಸಲು ನಷ್ಟ ಭೀತಿ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ವಿಜಯವಾಣಿ ವಿಶೇಷ ಶಿರಸಿ

ಪ್ರಸಕ್ತ ವರ್ಷ ಗೇರು ಹಾಗೂ ಮಾವಿನ ಮರಗಳಲ್ಲಿ ಉತ್ತಮ ಹೂವುಗಳು ಬಿಟ್ಟಿವೆ. ಆದರೆ, ಈ ಬೆಳೆಗಳಿಗೆ ಜಿಗಿಹುಳು ಹಾಗೂ ಟೀ ಸೊಳ್ಳೆಗಳ ಕಾಟ ಆರಂಭವಾಗಿದ್ದು, ಬೆಳೆಗಾರರ ನಿದ್ದೆಗೆಡಿಸಿದೆ.

2018-19ನೇ ಸಾಲಿನ ಬೆಳೆ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಮಾವು 3,155 ಹೆಕ್ಟೇರ್ ಮತ್ತು ಗೇರು 4,300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವಾಣಿಜ್ಯಕವಾಗಿ ಕರಾವಳಿ ಭಾಗಕ್ಕೆ ಸೀಮಿತವಾಗಿದ್ದ ಗೇರು ಬೆಳೆಯು ಜಿಲ್ಲೆಯ ಅರೆ ಮಲೆನಾಡು ಮತ್ತು ಬಯಲು ಸೀಮೆ ತಾಲೂಕುಗಳಲ್ಲೂ ವಿಸ್ತಾರಗೊಳ್ಳುತ್ತಿದೆ. ಉತ್ತಮ ಇಳುವರಿಯ ಭರವಸೆ ಹುಟ್ಟಿಸಿದ್ದ ಮಾವು ಹಾಗೂ ಗೇರಿಗೆ ಪ್ರಸ್ತುತ ಜಿಗಿಹುಳು ಹಾಗೂ ಟೀ ಸೊಳ್ಳೆಗಳ ಕಾಟ ಶುರುವಾಗಿರುವುದು ರೈತರ ತಲೆನೋವಿಗೆ ಕಾರಣವಾಗಿದೆ. ಈ ವರ್ಷ ಗೇರು ಗಿಡಗಳಲ್ಲಿ ಹೂ ಗೊಂಚಲು ಚೆನ್ನಾಗಿ ಮತ್ತು ಬೇಗ ಬಂದಿದ್ದು, ಈಗಾಗಲೇ ಅರಳಲಾರಂಭಿಸಿವೆ. ಮಾವಿನಲ್ಲಿ ಜಿಗಿಹುಳು ಮತ್ತು ಗೇರಿನಲ್ಲಿ ಟೀ ಸೊಳ್ಳೆ ಕೀಟಗಳು ಮೃದು ಭಾಗಗಳಾದ ಚಿಗುರು ಮತ್ತು ಹೂ ಗೊಂಚಲನ್ನು ಚೂಪಾದ ಕೊಂಬಿನಿಂದ ಚುಚ್ಚಿ ರಸ ಹೀರುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ. 25ರಿಂದ 75ರಷ್ಟು ಫಸಲು ನಷ್ಟವಾಗುವ ಸಾಧ್ಯತೆಯಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಬೆಳೆಗೆ ಬೇಕಾದ ಪೂರಕ ವಾತಾವರಣ ಇರಲಿಲ್ಲ. ವಾತಾವರಣ ಸರಿಯಿಲ್ಲದ ಕಾರಣ ಸರಿಯಾಗಿ ಹೂವು ಕಚ್ಚುತ್ತಿರಲಿಲ್ಲ. ಈ ಬಾರಿ ಉತ್ತಮ ವಾತಾವರಣದ ಜತೆಗೆ ಹೂವು ಬೇಗ ಕಚ್ಚುತ್ತಿದೆ. ಆದರೆ, ಕೀಟ ಬಾಧೆ ಆರಂಭವಾಗಿದ್ದು, ರೈತರ ಆತಂಕ ಹೆಚ್ಚಿಸಿದೆ ಎಂಬುದು ಗೇರು ಹಾಗೂ ಮಾವು ಬೆಳೆಗಾರರ ಮಾತು.

ಮಾವು ಮತ್ತು ಗೇರು ಗಿಡಗಳ ಒಣಗಿದ ರೆಂಬೆಗಳನ್ನು ಕತ್ತರಿಸಬೇಕು. ಮಾವಿನಲ್ಲಿ ಹೂ, ಮೊಗ್ಗು ಹೊರಟ ನಂತರ ಹೂ, ಮೊಗ್ಗು ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ ಅಥವಾ ಕ್ಲೋರೋಫೈರಿಫಾಸ್ 2 ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಜಿಗಿ ಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕೆ ಡೆಕಾಮೆಥ್ರಿನ್ 1.0 ಮಿ.ಲೀ. ಅಥವಾ ಇಮಿಡಾಕ್ಲೋಪ್ರಿಡ್ 0.3 ಮಿ.ಲೀ. ಅಥವಾ 0.5 ಮಿ.ಲೀ. ಸೈಪರಮೆಥ್ರಿನ್ ಕೀಟನಾಶಕದ ಜತೆಗೆ ಕಾರ್ಬೆಂಡೆಂಜಿಮ್ 1 ಗ್ರಾಂ ಅಥವಾ ಮ್ಯಾಂಕೋಜೆಬ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಸೇರಿಸಿ 25-30 ದಿನಗಳಿಗೊಮ್ಮೆ ಸಿಂಪಡಿಸಬೇಕು. ಗೇರು ಬೆಳೆಯಲ್ಲಿ ಟೀ ಸೊಳ್ಳೆ ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ 1.75 ಮಿ.ಲೀ. ಅಥವಾ ಲ್ಯಾಂಬ್ಡಾ ಸೈಲೋಥ್ರಿನ್ 1 ಮಿ.ಲೀ. ಅಥವಾ ಕ್ಲೋರೊಪೈರಿಫಾಸ್-50 ಇ.ಸಿ. 1.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. | ವಿ.ಎಂ. ಹೆಗಡೆ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್ ತಜ್ಞ

ಪ್ರಸಕ್ತ ವರ್ಷ ಉತ್ತಮ ಇಳುವರಿಯ ಭರವಸೆಯಲ್ಲಿದ್ದೇವು. ಆದರೆ, ಹೂ ಕಚ್ಚುವ ಹಂತದಲ್ಲಿಯೇ ಕೀಟ ಬಾಧೆಯಿಂದ ನಮ್ಮ ಕನಸಿಗೆ ತಣ್ಣೀರೆರಚಿದಂತಾಗಿದೆ. | ಗುತ್ಯಪ್ಪ ಭೋವಿ ಗೇರು ಬೆಳೆಗಾರ

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...