ಗೆಲುವಿನ ನಗೆ ಬೀರಿದ ಕೋದಂಡ ತಂಡ

ವಿರಾಜಪೇಟೆ: ಹಾಕಿ ಕೊಡಗು ಸಂಸ್ಥೆಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಕೋದಂಡ, ಕೊಂಗಂಡ, ಕುಮ್ಮಂಡ, ಚೆರುವಾಳಂಡ, ಅನ್ನಡಿಯಂಡ, ಬೊಳ್ಯಪಂಡ, ಪುದಿಯೊಕ್ಕಡ, ಅರೆಯಡ, ಕಾಂಡಂಡ, ಕಣ್ಣಂಡ ತಂಡಗಳು ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡಿವೆ.

ಮ್ಯೆದಾನ 1ರಲ್ಲಿ ನಡೆದ ಪಂದ್ಯದಲ್ಲಿ ಕೋದಂಡ ತಂಡ 1-0 ಗೋಲಿನಿಂದ ಅಲ್ಲಾರಂಡ ತಂಡವನ್ನು ಪರಾಭವ ಗೊಳಿಸಿತು. ಕೊದಂಡ ಪರ ಜೆಸ್ಸಿ ಅಪ್ಪಣ್ಣ (24ನಿ) ಗೋಲು ಬಾರಿಸಿದರು.
ಕೊಂಗಂಡ ತಂಡ 4-2 ಗೋಲುಗಳಿಂದ ಪಾಲಂದಿರ ತಂಡವನ್ನು ಟೈ ಬ್ರೇಕರ್‌ನಲ್ಲಿ ಮಣಿಸಿತು. ನಿಗದಿತ ಅವದಿಯಲ್ಲಿ ಯಾವುದೇ ಗೋಲಾಗಲಿಲ್ಲ. ಟೈ ಬೇಕರ್‌ನಲ್ಲಿ ಕೊಂಗಂಡ ಪರ ಬೋಪಣ್ಣ, ನಾಚಪ್ಪ, ಹರ್ಷ, ಪೊನ್ನಣ್ಣ, ಪಾಲಂದಿರ ಪರ ನಾಣಯ್ಯ, ಮುತ್ತಣ್ಣ ಗೋಲು ಹೊಡೆದರು.

ಕುಮ್ಮಂಡ ತಂಡ 2-0 ಗೊಲುಗಳಿಂದ ಚೇರಂಡ ತಂಡವನ್ನು ಪರಾಭವ ಗೊಳಿಸಿತು. ಕುಮ್ಮಡ ಪರ ನಗೇಶ್ (6,24ನಿ) ಗೋಲು ಹೊಡೆದರು. ಚೆರುವಾಳಂಡ ತಂಡ 4-0 ಗೋಲುಗಳಿಂದ ಕುಂಚೇಟ್ಟಿರ ತಂಡವನ್ನು ಸೋಲಿಸಿತು. ಚೆರುವಾಳಂಡ ಪರ ಸುಬ್ಬಯ್ಯ (6ನಿ), ನಿಶಾನ್ (15ನಿ), ನಿರನ್ (18ನಿ), ಸಚಿನ್ (23ನಿ) ಗೋಲು ದಾಖಲಿಸಿದರು.

ಪುಲ್ಲೆರ ತಂಡ ಬಾರದ ಕಾರಣ ಆಯೋಜಕರು ಅನ್ನಡಿಯಂಡ ತಂಡವನ್ನು ವಿಜಯಿ ಎಂದು ಘೋಷಿಸಿದರು. ಬೊಳ್ಯಪಂಡ ತಂಡ ಕೇಳಪಂಡ ತಂಡವನ್ನು 3-2 ಗೋಲುಗಳಿಂದ ಪರಾಭವ ಗೋಳಿಸಿತು. ಮ್ಯೆದಾನ 2ರಲ್ಲಿ ಪುದಿಯೊಕ್ಕಡ ತಂಡ ಟೈ ಬ್ರೇಕರ್‌ನಲ್ಲಿ 5-2 ಗೋಲುಗಳಿಂದ ಮಾಚಿಮಂಡ ತಂಡವನ್ನು ಪರಾಭವ ಗೊಳಿಸಿದರು. ನಿಗದಿತ ಅವದಿಯಲ್ಲಿ ಎರಡು ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿತು. ಪುದಿಯೊಕ್ಕಡ ಪರ ವಿಪನ್ (24ನಿ), ಬೊಪಣ್ಣ (30ನಿ), ಟೈ ಬ್ರೇಕರ್‌ನಲ್ಲಿ ಪುದಿಯೊಕ್ಕಡ ಪರ ಸೂರಜ್, ಬೋಪಣ್ಣ, ಮಾಚಿಮಂಡ ಪರ ಬಿದ್ದಪ್ಪ (15ನಿ), ನಾಚಪ್ಪ ( 25ನಿ) ಗೋಲು ದಾಖಲಿಸಿದರು.

ಅರೆಯಡ ತಂಡ ಹೊದವಾಡ ಚೌರಿರ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಅರೆಯಡ ಪರ ವಿವಿನ್ (8ನಿ), ಚಿಣ್ಣಪ್ಪ (35ನಿ) ಗೋಲು ಹೊಡೆದರು. ಕಾಂಡಂಡ ತಂಡವು 3-2 ಗೋಲುಗಳಿಂದ ಬೊಟ್ಟಂಗಡ ತಂಡವನ್ನು ಪರಾಭವಗೊಳಿಸತು. ಕಾಂಡಂಡ ಪರ ಕಿರಣ್ (4ನಿ), ಅನೀಲ್ (18ನಿ), ಕುಶಾಲಪ್ಪ (32ನಿ), ಬೊಟ್ಟಂಗಡ ಪರ ರವೀಂದ್ರ (23ನಿ), ಗೌತಮ್ (25ನಿ) ಗೋಲು ಬಾರಿಸಿದರು.

ಕಣ್ಣಂಡ ತಂಡ 2-1 ಗೋಲುಗಳಿಂದ ಬೊಳಕಾರಂಡ ತಂಡವನ್ನು ಮಣಿಸಿತು. ಕಣ್ಣಂಡ ಪರ ದೆವಯ್ಯ (12ನಿ), ಶರಣ್ (29ನಿ), ಬೊಳಕಾರಂಡ ಪರ ಪೂಣಚ್ಚ (21ನಿ) ಗೋಲು ಬಾರಿಸಿ ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡರು.