ಗುರುವಂದನೆ, ಸ್ನೇಹ ಸಮ್ಮೇಳನ

ಮುಳಗುಂದ: ವಿದ್ಯಾರ್ಜನೆ ಕಾಲದ ಜೀವನಾನುಭವಗಳಿಂದ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಆರ್.ಎಫ್. ಹಿರೇಮಠ ಹೇಳಿದರು.

ಎಸ್​ಜೆಜೆಎಂ ಪದವಿ ಪೂರ್ವ ಕಾಲೇಜ್​ನ 1995-96ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗುರುವಂದನೆ, ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸೈನಿಕರು, ರೈತರು, ಪಾಲಕರು ಹಾಗೂ ಶಿಕ್ಷಕರ ಸೇವೆಯನ್ನು ನಾವು ಎಂದಿಗೂ ಮರೆಯಬಾರದು. ಇತ್ತೀಚಿನ ದಿನಮಾನದಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧಗಳು ಹಳಸುತ್ತಿವೆ. ಆದರೆ, ಈ ಕಾಲೇಜ್​ನ ಹಳೆಯ ವಿದ್ಯಾರ್ಥಿಗಳು ಗುರುಗಳನ್ನು ನೆನೆಪಿಸಿಕೊಂಡು ಗೌರವಿಸಿದ್ದಾರೆ. ಅದರ ನೆನಪಲ್ಲಿ 23 ವರ್ಷಗಳ ಹಿಂದಿನ ಸಂಬಂಧವನ್ನು ಜಾಗೃತಗೊಳಿಸುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾದದ್ದು’ ಎಂದರು.

ನಿವೃತ್ತ ಪ್ರಾಚಾರ್ಯ ಎಸ್.ಎಫ್. ಮುದ್ದನಗೌಡರ ಮಾತನಾಡಿ, ‘ಗುರುವಿನ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥವಾಗಬೇಕು. ವಿದ್ಯಾರ್ಥಿಯಲ್ಲಿನ ಕಲಿಯುವ ಹಂಬಲ ಗುರುವಿಗೆ ಅರ್ಥವಾಗಬೇಕು. ಅಂದಾಗ ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧ ಬೆಳೆಯಲು ಸಾಧ್ಯ’ ಎಂದರು.

ಶಿಕ್ಷಕ ಎಂ.ಎ. ಅಂಗಡಿ, ಆರ್.ಎಫ್. ಹಿರೇಮಠ, ಎಸ್.ಎಫ್. ಮುದ್ದನಗೌಡರ, ಬಿ.ಟಿ. ಬ್ಯಾಳಿ, ಬಿ.ಜಿ. ಯಳವತ್ತಿ, ಸಿ.ಎಚ್. ದೊಡ್ಡಮನಿ, ಇ.ಎಂ. ಗುಳೆದಗುಡ್ಡ, ಎ.ಎಂ. ಅಂಗಡಿ, ಎನ್.ಎಸ್. ಮಳ್ಳಿ ಗುರುಗಳಿಗೆ ಸನ್ಮಾನ ಮಾಡಲಾಯಿತು.

ಗುರುರಾಜ ಸಾಂಬ್ರಾಣಿ, ಸಚಿನ ಕುಲಕರ್ಣಿ, ಪ್ರದೀಪ ದೊಡ್ಡವಾಡ, ಶ್ರೀಕಾಂತ ಶಿರಹಟ್ಟಿ, ಪ್ರದೀಪ ಗೊಡಚಪ್ಪನವರ, ಎಂ.ಎಚ್.ದಲೀಲ, ರಾಜೇಸಾಬ ಜಮಾಲಸಾಬನವರ, ಶಿವಾನಂದ ಮಣ್ಣೂರ, ರಮೇಶ ಮ್ಯಾಗೇರಿ, ದಾದಾಖಲಂದರ ಶೇಖ, ಅಲ್ಲಾಭಕ್ಷಿ ಹೊಂಬಳ, ಮಹಾಂತೇಶ ಜಂಪಾಳಿ, ಮೇಹಬೂಬ್​ಸಾಬ್ ಪೀರಖಾನವರ, ಸತೀಶ ಜಕ್ಕಣ್ಣವರ,ಸಂಗಮೇಶ ಗದ್ದಿ, ವಿಶ್ವನಾಥ ಹಿರೇಮಠ,ಪ್ರಭು ಗೌಳಿ, ವಿದ್ಯಾ ಪತ್ತಾರ, ಅಶ್ವಿನಿ ಕಟ್ಟಿ, ಜ್ಯೋತಿ ಅರಳಿ, ರೂಪಾ ಹಸಬಿ, ಗಂಗಮ್ಮಾ ಕಣವಿ, ಶಿವಲೀಲಾ ಅಂಗಡಿ, ಲಲಿತಾ ಕಬಾಡೆ, ಕರಬಸವ್ವ ಮಟ್ಟಿ, ರುದ್ರವ್ವ ಬಿನ್ನಾಳ, ಜಯಶ್ರೀ ಬಾಕಳೆ, ರೇಣುಕಾ ಕಾಗಿ ಇತರರು ಇದ್ದರು.

Leave a Reply

Your email address will not be published. Required fields are marked *