ಗುರುಮಠಕಲ್ಗೆ ನಾಲ್ಕು ದಿನಕ್ಕೊಮ್ಮೆ ನೀರು

ಗುರುಮಠಕಲ್: ಒಣಪ್ರದೇಶದಿಂದ ಕೂಡಿದ ಗುರುಮಠಕಲ್ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಕರ್ಾರ ಕುಡಿಯುವ ನೀರಿನ ಬವಣೆ ತಪ್ಪಿಸಲು ನಡೆಸಿದ ಭಗೀರಥ ಪ್ರಯತ್ನವೂ ಲ ಕೊಡದ ಕಾರಣ ಸದ್ಯ 4 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ.
ಪಟ್ಟಣಕ್ಕೆ ಸ್ಥಳೀಯ ನಲ್ಲಾಚೇರು ಕೆರೆಯಿಂದ ಈ ಹಿಂದೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಅಲ್ಲೂ ನೀರಿನ ಸಮಸ್ಯೆ ಎದುರಾಗಿದ್ದರಿಂದ 2008ರಲ್ಲಿ ಶಾಸಕರಾಗಿದ್ದ ಬಾಬುರಾವ್ ಚಿಂಚನಸೂರ 32 ಕೋಟಿ ರೂ. ವೆಚ್ಚದಲ್ಲಿ ಯಾದಗಿರಿ ಭೀಮಾ ನದಿಯಿಂದ ಗುರುಮಠಕಲ್ಗೆ ನೀರು ತರುವ ಯೋಜನೆ ರೂಪಿಸಿ ಜಾರಿಗೊಳಿಸಿದರು. ಅದರ ಲವಾಗಿಯೇ 2008ರಲ್ಲಿ ಆರಂಭಗೊಂಡ ಈ ಯೋಜನೆ 2013ರಲ್ಲಿ ಪೂರ್ಣಗೊಂಡಿದೆ.
ಆರಂಭದಿಂದಲೇ ದಿನಕ್ಕೊಂದು ಸಮಸ್ಯೆ ಎದುರಿಸುತ್ತಿರುವ ಈ ಯೋಜನೆ ಸರಿಪಡಿಸಲು ಸಕರ್ಾರ ಮತ್ತೆ ಹೆಚ್ಚುವರಿಯಾಗಿ 5.5 ಕೋಟಿ ರೂ. ಬಿಡುಗಡೆ ಮಾಡಿತ್ತು. ಮೊದಲಿಗೆ ಎರಡ್ಮೂರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಇದೀಗ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ 4 ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಬ್ಲೀಚಿಂಗ್, ಕ್ಲೋರಿನೇಶನ್, ಫಿಲ್ಟರ್ ಇರದ ಕಾರಣ ಗುರುಮಠಕಲ್ ಜನರು ಕುಲುಷಿತ ನೀರು ಕುಡಿಯುವಂತಾಗಿದೆ. ಈ ಯೋಜನೆಗಾಗಿ ಅರಕೇರಾ ಹಾಗೂ ಧರಂಪುರ ಗ್ರಾಮಗಳ ಸಮೀಪ ನಿಮರ್ಿಸಿದ ಪಂಪ್ಹೌಸ್ನಲ್ಲಿ ಅಳವಡಿಸಿದ ಮೋಟಾರ್ಗಳು ತೀರ ಕಳಪೆ ಮಟ್ಟದ್ದಾಗಿದ್ದರಿಂದ ಪದೇಪದೆ ಕೆಡುತ್ತಿವೆ. ಅವುಗಳ ರಿಪೇರಿಗೆಂದೇ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಯಥಾವತ್ ಮುಂದುವರಿದಿದೆ.

Leave a Reply

Your email address will not be published. Required fields are marked *