ಗುರಿ ತಲುಪುವವರೆಗೆ ಛಲ ಬಿಡದಿರಿ

ಮುಂಡರಗಿ: ಯುವಕರು ಕೀಳರಿಮೆ ಬಿಟ್ಟು, ಸಾಧಿಸುವ ಛಲದೊಂದಿಗೆ ಸಾರ್ಥಕತೆಯ ಬದುಕಿನತ್ತ ನಡೆಯಬೇಕು. ದೇಶ ಸಶಕ್ತವಾಗಬೇಕಾದರೆ ಶಿಕ್ಷಣ ಅತ್ಯವಶ್ಯ. ವಿದ್ಯಾರ್ಥಿಗಳು ಸ್ವಯಂ ಕೃಷಿಯಿಂದ ಮುಂದಾಗಬೇಕು ಎಂದು ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಾಲೇಜ್​ನಲ್ಲಿ ಕ.ರಾ. ಬೆಲ್ಲದ ಮಹಾವಿದ್ಯಾಲಯ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ ಮಹಾತ್ಮರ ಆದರ್ಶಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಸುಂaದರ ಸಮಾಜ ಕಟ್ಟಬೇಕು. ಭಾವೋದ್ವೇಗಕ್ಕಿಂತ ಭಾವನೆಗಳು ಮೊಳಕೆ ಒಡೆಯಬೇಕು. ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಒತ್ತು ನೀಡಬೇಕು. ಎಲ್ಲರಿಗೂ ಅವಕಾಶಗಳು ಇರುತ್ತವೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಯುವಕರು ಮಾನವಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಹಾತ್ಮರ ಮತ್ತು ಸಾಧಕರ ಆದರ್ಶ ಪಾಲನೆಯೊಂದಿಗೆ ಸುಂದರ ಜೀವನ ರೂಪಿಸಿಕೊಳ್ಳಬೇಕು ಎಂದರು.

ದೆಹಲಿ ಎನ್​ಸಿಸಿ ಪರೇಡ್​ಗೆ ಆಯ್ಕೆಯಾಗಿದ್ದ ಪ್ರದೀಪ ರಾಠೋಡ್ ಹಾಗೂ ಪದವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 10ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಕಮರುನ್​ಬೀ ನಾಗರಹಳ್ಳಿ ಅವರನ್ನು ಸನ್ಮಾನಿಸಲಾಯಿತು. ರವಿ ಚನ್ನಣ್ಣನವರ ಅವರನ್ನು ಅನ್ನದಾನೀಶ್ವರ ಸ್ವಾಮೀಜಿ ಸನ್ಮಾನಿಸಿ, ಗೌರವಿಸಿದರು.

ಸಿಪಿಐ ಶ್ರೀನಿವಾಸ ಮೇಟಿ, ಕ.ರಾ. ಬೆಲ್ಲದ ಕಾಲೇಜ್ ಪ್ರಾಚಾರ್ಯ ಡಿ.ಸಿ. ಮಠದ, ಕುಮಾರ ಕಲ್ಮಠ, ಇತರರು ಇದ್ದರು.

ಬೆಂಗಳೂರಿನಲ್ಲಿ ತರಬೇತಿ: ಬೆಂಗಳೂರಿನ ವಿಜಯನಗರದಲ್ಲಿ ಫೆ. 23ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಯುಪಿಎಸ್​ಸಿ ಪರೀಕ್ಷೆ ಕುರಿತು ತರಬೇತಿ ನೀಡಲಾಗುತ್ತಿದೆ. ಸಾಧ್ಯವಾದರೆ ತರಬೇತಿಗೆ ಬನ್ನಿ. ಇಲ್ಲವಾದರೆ ಫೇಸ್​ಬುಕ್ನ್ ಜಣಠಿಛಿಛಿಠಟ ನಲ್ಲಿ ತರಬೇತಿ ವಿಡಿಯೋ ಅಪ್​ಲೋಡ್ ಮಾಡಲಾಗುತ್ತದೆ. ಅದನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಿ. ಈ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ತರಬೇತಿ ನಡೆಸಲಾಗುತ್ತದೆ ಎಂದು ರವಿ ಚನ್ನಣ್ಣನವರ ಮಾಹಿತಿ ನೀಡಿದರು.

ಸಂಶಯ ನಿವಾರಿಸಿಕೊಂಡ ವಿದ್ಯಾರ್ಥಿಗಳು: ಭವಿಷ್ಯದ ಬಗ್ಗೆ ಹತ್ತಾರು ಕನಸುಹೊತ್ತ ವಿದ್ಯಾರ್ಥಿಗಳು ಐಪಿಎಸ್ ಅಧಿಕಾರಿಯೊಂದಿಗೆ ಸಂವಾದ ನಡೆಸುವ ಮೂಲಕ ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು.

ವಿದ್ಯಾರ್ಥಿಗಳಿಗೆ ನೌಕರಿ ಪಡೆಯಲು ವಿದ್ಯಾರ್ಹತೆ ಬೇಕು. ಆದರೆ, ಜನಪ್ರತಿನಿಧಿಗಳಿಗೆ ಯಾಕಿಲ್ಲ ಎಂದು ಪದವಿ ವಿದ್ಯಾರ್ಥಿ ಖಾದರಸಾಬ್ ಪ್ರಶ್ನೆಗೆ ಉತ್ತರಿಸಿದ ಚನ್ನಣ್ಣನವರ, ‘ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಇದನ್ನು ನಾವೇ ಮಾಡಿಕೊಂಡಿದ್ದೇವೆ. 70 ವರ್ಷದಲ್ಲಿ ನಮ್ಮ ದೇಶ ಸುಧಾರಣೆ ಮತ್ತು ಅಭಿವೃದ್ಧಿಯತ್ತ ನಡೆಯುತ್ತಿದೆ. ಮುಂದೆ ವ್ಯವಸ್ಥೆಯಲ್ಲಿ ಬದಲಾವಣೆ ಆಗಬಹುದು’ ಎಂದರು.

ಐಎಎಸ್, ಐಪಿಎಸ್ ಅಧಿಕಾರಿಯಾಗಲು ಹೇಗೆ ಅಭ್ಯಾಸ ಮಾಡಬೇಕು ಎಂದು ಕೇಳಿದ ಪದವಿ ವಿದ್ಯಾರ್ಥಿನಿ ಕಮರುನ್​ಬೀ ಪ್ರಶ್ನೆಗೆ, ಹುಡುಕಾಟವೇ ಸ್ಪರ್ಧಾತ್ಮಕ ಪರೀಕ್ಷೆ. ಅಂತಹ ಪರೀಕ್ಷೆ ಬರೆದು ಸಮಾಜಕ್ಕೆ ನ್ಯಾಯ ಒದಗಿಸಬೇಕು. ನಾವು ತೆಗೆದುಕೊಳ್ಳುವ ಪರೀಕ್ಷೆಗೆ ಸಂಬಂಧಿಸಿದ ವಿಷಯಕ್ಕೆ ಮೊದಲು ಆಸಕ್ತಿ ಪೂರಕವಾಗಿ ಹೆಚ್ಚು ಒತ್ತು ಕೊಡಬೇಕು. ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿನಿ ಚೈತ್ರಾ ಚನ್ನಳ್ಳಿ ಬಡತನ ಎಂದರೇ ಏನು? ಸರ್ ಎಂದು ಪ್ರಶ್ನಿಸಿದರು. ಅದಕ್ಕೆ ಮಾರ್ವಿುಕವಾಗಿ ಉತ್ತರಿಸಿದ ರವಿ, ‘ಯಾರಲ್ಲಿ ಕನಸುಗಳು ಇರುವುದಿಲ್ಲವೋ ಅವರೇ ಬಡವರು. ಕಂಡ ಕನಸುಗಳನ್ನು ಛಲ ಬಿಡದೇ ನನಸು ಮಾಡಿಕೊಳ್ಳಬೇಕು’ ಎಂದರು.</