ಗುಬ್ಬಿಸರದಲ್ಲಿ ಚಿರತೆ ದಾಳಿಗೆ ಆಕಳು ಬಲಿ

ಸಿದ್ದಾಪುರ: ಸಂಪಗೋಡ ಗ್ರಾಮದ ಗುಬ್ಬಿಸರ ಮಜರೆಯಲ್ಲಿ ಚಿರತೆ ದಾಳಿಗೆ ಆಕಳು ಮೃತಪಟ್ಟಿದೆ. ತರಳಿಯ ರಾಮ ಲಕ್ಷ್ಮಣ ನಾಯ್ಕ ಎಂಬುವವರಿಗೆ ಸೇರಿದ ಮೂರು ವರ್ಷದ ಆಕಳು ಇದಾಗಿದೆ. ಹಾರ್ಸಿಕಟ್ಟಾ ಪಶುವೈದ್ಯಾಧಿಕಾರಿ ಡಾ. ಶ್ರೇಯಶ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಿಡಗೋಡ ಉಪವಲಯ ಅರಣ್ಯಾಧಿಕಾರಿ ಅಶೋಕ ಪೂಜಾರ, ಸಿಬ್ಬಂದಿ ಹನುಮಂತ ಕಿಲಾರಿ, ದೇವಿದಾಸ ಪಂಚನಾಮೆ ನಡೆಸಿದ್ದಾರೆ.

ಕ್ರಮಕ್ಕೆ ಆಗ್ರಹ: ತಾಲೂಕಿನ ಹೀನಗಾರ, ಗೊದ್ಲಬೀಳ, ಹಳದೋಟ ಸುತ್ತಮುತ್ತ ಚಿರತೆ ಸಂಚರಿಸುತ್ತಿದೆ. ಈ ಕುರಿತು ಜ.27ರಂದು ‘ವಿಜಯವಾಣಿ’ ವರದಿ ಮಾಡಿತ್ತು. ತರಳಿ ಸಮೀಪದ ಗುಬ್ಬಿಸರದಲ್ಲಿ ಚಿರತೆ ದಾಳಿಗೆ ಆಕಳು ಮೃತಪಟ್ಟ ಕಾರಣ ಜನ ಕಂಗಾಲಾಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತರಳಿ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.