ಶಿಗ್ಗಾಂವಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ವಹಿಸá-ವ ವಸತಿ ನಿಲಯಗಳಲ್ಲಿ ಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕೆಲಸದಿಂದ ತೆಗೆದು ಹಾಕಿದ ಕ್ರಮ ಖಂಡಿಸಿ ನೌಕರರು ತಾ.ಪಂ. ಇಒ ಪ್ರಶಾಂತ ತುರ್ಕಾಣಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರದ ಅಧೀನ ಇಲಾಖೆಯ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ, ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು. ಏಕರೂಪ ಸೇವಾ ನಿಯಮಾವಳಿಯಂತೆ ಕಾರ್ವಿುಕ ಕಾನೂನು ಜಾರಿಗೊಳಿಸಬೇಕು. ಯಾವುದೇ ಕಾರ್ವಿುಕರನ್ನು ಸರ್ಕಾರ ಕೈಬಿಡಬಾರದು. ಈಗಾಗಲೇ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಹಾಸ್ಟೆಲ್ಗಳಲ್ಲಿ ಸ್ವಚ್ಛತೆ, ಕಾವಲು ಕಾಯುವುದು, ಅಡುಗೆ ಕೆಲಸ ಮುಂತಾದವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಹೊರಗುತ್ತಿಗೆ ಆಧಾರದಡಿ ಕೆಲಸ ನಿರ್ವಹಿಸುವ ನೌಕರರ ಪರಿಪೂರ್ಣವಾದ ಸೇವಾ ಸಮೀಕ್ಷೆ ಅಂತಿಮವಾಗುವವರೆಗೂ ಕೆಲಸದಿಂದ ತೆಗೆದು ಹಾಕಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗುತ್ತಿಗೆ ಕಾರ್ವಿುಕರ ಸಂಘದ ಅಧ್ಯಕ್ಷೆ ಶಾಂತಾ ಗಡ್ಡಿಯವರ, ರೇಣುಕಾ ದ್ಯಾಮನಗೌಡ್ರ, ಸುಜಾತಾ ಆರೇಕೊಪ್ಪ, ಹೇಮಾವತಿ ವಾಲ್ಮಿಕಿ, ಮೋಟಪ್ಪ ಹರಿಜನ, ಶಶಿಕಲಾ ಜಗಣ್ಣವರ, ನಾಗರಾಜ ಜಾಧವ, ಸಂಘಟನೆಯ ಕಾರ್ಯಕರ್ತರು ಇದ್ದರು.