ಗುಣಮಟ್ಟ ಶಿಕ್ಷಣದಿಂದ ಪ್ರಗತಿ

ಸಿರಿಗೆರೆ: ಮಗುವಿನ ಗುಣಮಟ್ಟ ಶಿಕ್ಷಣ ನೀಡುವುದು ದೇಶಕ್ಕೆ ಭದ್ರ ಬುನಾದಿ ನಿರ್ಮಿಸಿದಂತೆ ಎಂದು ತಾಲೂಕು ದೈಹಿಕ ಶಿಕ್ಷಣ ಸಮಯೋಜಕ ಎಮ್.ಎಚ್. ಶೇಖರಪ್ಪ ತಿಳಿಸಿದರು.

ಸಮೀಪದ ಚಿಕ್ಕಾಲಘಟ್ಟದ ಹೊಸ ಕಾಲನಿಯಲ್ಲಿ ಬುಧವಾರ ಆಯೋಜಿಸಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುನಾರಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, 5ವರ್ಷ 10ತಿಂಗಳು ಪೂರೈಸಿದ ಯಾವುದೇ ಮಗು ಶಿಕ್ಷಣದಿಂದ ದೂರ ಉಳಿಯಬಾರದು ಎಂದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳ ಜತೆ ಕ್ಷೀರಭಾಗ್ಯ, ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗಿದೆ. ದಾಖಲಾಗಿ ಆಂದೋಲನ ಆರಂಭವಾಗಿದ್ದು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ಗ್ರಾಮದ ಬೀದಿಗಳಲ್ಲಿ ದಾಖಲಾತಿ ಅಂದೋಲನ ರ‌್ಯಾಲಿ ನಡೆಯಿತು.

ಸಿಆರ್‌ಪಿ ಪ್ರದೀಪ್, ಮುಖ್ಯಶಿಕ್ಷಕ ಡಿ. ಮಾದಪ್ಪ ಶಿಕ್ಷಕ ಅಜಯ್, ಅಕ್ಷರ ದಾಸೋಹ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಸಿಯೂಟದಲ್ಲಿ ವಿದ್ಯಾರ್ಥಿಗಳು ಒಬ್ಬಟ್ಟು, ಸೀಕರಣೆ ಸವಿದರು.

Leave a Reply

Your email address will not be published. Required fields are marked *