ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

ಹೊಸಕೋಟೆ: ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸಚಿವ ಎಂಟಿಬಿ ನಾಗರಾಜ್ ತಾಕೀತು ಮಾಡಿದರು.

ನಗರದ ವಿವಿಧ ವಾರ್ಡ್​ಗಳಲ್ಲಿ 1.42 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪಕ್ಷಾತೀತವಾಗಿ ಅಭಿವೃದ್ಧಿ ಮಾಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದರು.

ಕನಕ ನಗರ, ರಾಮಕ್ಕ ಬಡಾವಣೆ, ಕುಪ್ಪಣ್ಣ ಬಡಾವಣೆ, ಸೋಮಸುಂದರ್ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಎಐಸಿಸಿ ಮಹಿಳಾ ಘಟಕದ ಸದಸ್ಯೆ ಕಮಲಾಕ್ಷಿ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಘುವೀರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ನಗರಸಭೆ ಆಯುಕ್ತ ನಿಸಾರ್ ಅಹಮದ್ ಇದ್ದರು.

ಬೈಕ್​ನಲ್ಲಿ ನಗರ ಪ್ರದಕ್ಷಿಣೆ: ಸಚಿವ ಎಂಟಿಬಿ ನಾಗರಾಜ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಬೆಂಗಾವಲು ಪಡೆ ವಾಹನ ಹಾಗೂ ತಮ್ಮ ಸರ್ಕಾರಿ ವಾಹನ ಬಿಟ್ಟು ಕಾರ್ಯಕರ್ತರೊಬ್ಬರ ಬೈಕ್ ಏರಿ ವಾರ್ಡ್​ಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ವಾರ್ಡ್​ಗಳಲ್ಲಿ ಮಹಿಳೆಯರಿಂದ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *