Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಗುಂಡಿಯಾಗಿ ಕಾಡಿತ್ತು ಮಾಯೆ!

Friday, 10.08.2018, 3:02 AM       No Comments

‘ಅವರಾಡಿದ ಮಾತು ಕೇಳಿ, ಒಂದು ಕ್ಷಣ ಈ ಭೂಮಿಯೇ ಬಾಯ್ಬಿಟ್ಟು ನನ್ನನ್ನು ನುಂಗಬಾರದೇ ಅನಿಸಿಬಿಟ್ಟಿತು’- ಇಂಥ ಡೈಲಾಗ್​ಗಳನ್ನು ದಿನನಿತ್ಯದ ವ್ಯವಹಾರಗಳಲ್ಲೋ, ಚಲನಚಿತ್ರಗಳಲ್ಲೋ ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಚೀನಾದಲ್ಲಿ ನಿಜಕ್ಕೂ ಇಂಥದೊಂದು ಘಟನೆ ನಡೆದಿದೆ.

ಅಲ್ಲಿನ ಹರ್ಬಿನ್ ನಗರದಲ್ಲಿ ಇತ್ತೀಚೆಗೆ ಕುಂಭದ್ರೋಣ ಮಳೆ ಸುರಿಯಿತು. ಇಂಥ ಸಂದರ್ಭಗಳಲ್ಲಿ ರಸ್ತೆ ಮೇಲಿನ ನೀರಿನ ಪ್ರವಾಹದಿಂದಾಗಿ ರಸ್ತೆ ಯಾವುದು, ಗುಂಡಿ ಯಾವುದು, ರಸ್ತೆ ಉಬ್ಬುಗಳೆಲ್ಲಿವೆ ಎಂಬುದೇ ಗೊತ್ತಾಗದಷ್ಟು ಅಯೋಮಯವಾಗಿತ್ತು. ಇಂಥದೇ ಪರಿಸ್ಥಿತಿ ಅಲ್ಲಿನ ಇಬ್ಬರು ಕಾರು ಚಾಲಕರದಾಗಿತ್ತು. ಕಾರನ್ನು ಹುಷಾರಾಗೇನೋ ಅವರು ಚಲಾಯಿಸಿಕೊಂಡು ಬಂದರು; ಆದರೆ ಅದೃಷ್ಟ ಖೋತಾ ಆಗಿತ್ತು ಎನ್ನುವಂತೆ ರಸ್ತೆಯಲ್ಲೇ ಭಾರಿ ಕುಸಿತವಾಗಿ 10 ಮೀಟರ್ ಉದ್ದ ಮತ್ತು 4

ಮೀಟರ್​ಗೂ ಹೆಚ್ಚು ಆಳದ ಗುಂಡಿ ಸೃಷ್ಟಿಯಾಗಿ ಅವೆರಡೂ ಕಾರುಗಳನ್ನು ಅದು ಒಂದಾದ ಮೇಲೊಂದರಂತೆ ‘ಗುಳುಂ’ ಮಾಡಿಬಿಟ್ಟಿತು! ಅನಿರೀಕ್ಷಿತ ಘಟನೆಯಿಂದ ಇಬ್ಬರಿಗೂ ಶಾಕ್ ಆದರೂ, ಗಂಭೀರ ಗಾಯವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.

Leave a Reply

Your email address will not be published. Required fields are marked *

Back To Top