ಗುಂಡಿಮಯ ರಸ್ತೆಯಲ್ಲಿ ಸಂಚಾರ ಸರ್ಕಸ್

Latest News

ಬೆಂಗಳೂರಿಗೆ ಇನ್ನೊಂದು ರೈಲು

ಶ್ರವಣ್‌ಕುಮಾರ್ ನಾಳ ಪುತ್ತೂರು ಅಗತ್ಯವಿರುವ 2ಪ್ರದೇಶಗಳಿಗೆ ಅಥವಾ ಬೃಹತ್ ನಗರದಿಂದ ಸಣ್ಣ ಪಟ್ಟಣಗಳಿಗೆ ವೇಗವಾಗಿ ಸಂಪರ್ಕಿಸಲು ನೆರವಾಗುವ ಉದ್ದೇಶದಿಂದ ತುಮಕೂರು-ಯಶವಂತಪುರ ಸೇರಿ ದೇಶದಲ್ಲಿ 10 ಸೇವಾ ಸರ್ವೀಸ್...

ಕ್ರಿಕೆಟಲ್ಲೂ ಹನಿಟ್ರ್ಯಾಪ್!

ಬೆಂಗಳೂರು: ‘ಸಭ್ಯರ ಕ್ರೀಡೆ’ ಕ್ರಿಕೆಟ್​ಗೆ ಬೆಟ್ಟಿಂಗ್ ದಂಧೆಯ ಕಳಂಕ ಮೆತ್ತಿದ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಹಿಂದೆ ಹನಿಟ್ರಾ್ಯಪ್ ಅಪಸವ್ಯವೂ ಕಾಣಿಸಿಕೊಂಡಿದೆ. ಮ್ಯಾಚ್ ಫಿಕ್ಸಿಂಗ್​ನಲ್ಲಿ ಸಿಕ್ಕಿಬಿದ್ದ ಆಟಗಾರರನ್ನು...

ಜೋಡಿ ಕೊಲೆ ಆರೋಪಿ ಸೆರೆ

ಈಶ್ವರಮಂಗಲ: ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಸಮೀಪದ ಹೊಸಮಾರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್...

ಕೆಪಿಎಸ್​ಸಿ ​ಸಂದರ್ಶನದ ವೇಳೆ ನಡೆಯುವ ಅವ್ಯವಹಾರ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಣಯ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್​ಸಿ) ಸಂದರ್ಶನ ವೇಳೆ ಆಗಬಹುದಾದ ಅವ್ಯವಹಾರ ನಿಯಂತ್ರಿಸಿ ನೇಮಕಾತಿಯಲ್ಲಿ ಬಿಗಿ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಬುಧವಾರ...

ಖಂಡಿಗೆ ಕಿಂಡಿ ಅಣೆಕಟ್ಟು ದುರಸ್ತಿಗಿಲ್ಲ ಕ್ರಮ

ಲೋಕೇಶ್ ಸುರತ್ಕಲ್ ಪಾವಂಜೆ ಖಂಡಿಗೆ ಬಳಿ ಇರುವ ನಂದಿನಿ ನದಿ ಕಿಂಡಿ ಅಣೆಕಟ್ಟಿನ ದುರಸ್ತಿಗೆ ಅಧಿಕಾರಿಗಳು ಖಚಿತ ಯೋಜನೆ ರೂಪಿಸಿಲ್ಲ. ಅಣೆಕಟ್ಟು ನಿರ್ವಹಣೆಗೆ ಸಮಿತಿಯೇ ರಚನೆಯಾಗಿಲ್ಲ. ಹಾಗಾಗಿ...

ಮಂಜುನಾಥ ಅಂಗಡಿ ಧಾರವಾಡ

ಹೇಳಿಕೊಳ್ಳೋಕೆ ಧಾರವಾಡ ನಗರದಲ್ಲಿರುವ ಬಡಾವಣೆಗಳು. ಆದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುತ್ತವೆ. ನಗರದಿಂದ 4-5 ಕಿ.ಮೀ. ಅಂತರದಲ್ಲಿದ್ದರೂ ಕಲಘಟಗಿ ವಿಧಾನಸಭೆ ಕ್ಷೇತ್ರಕ್ಕೆ ಒಳಪಡುತ್ತವೆ. ಪಂಚಾಯಿತಿಯವರಾಗಲಿ, ಶಾಸಕರಾಗಲಿ ಇತ್ತ ಗಮನ ಹರಿಸದ ಪರಿಣಾಮ, ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಇದು ಶಿರಡಿನಗರ, ಹಿರೇಮಠ ಲೇಔಟ್, ಬಸವ ಕಾಲನಿ ಹಾಗೂ ಪನೋರಮಾ ಲೇಔಟ್ ನಿವಾಸಿಗಳ ಗೋಳು. 2001- 02ರಲ್ಲಿ ಬಡಾವಣೆಗಳು ನಿರ್ವಣಗೊಂಡಿದ್ದು, ಅಂದಾಜು 2,000 ಜನ ವಾಸಿಸುತ್ತಿದ್ದಾರೆ. ನಗರಕ್ಕೆ ಹೊಂದಿಕೊಂಡಿದ್ದರೂ ಪಾಲಿಕೆ ವ್ಯಾಪ್ತಿಗೊಳಪಟ್ಟಿಲ್ಲ. ಶಿರಡಿನಗರ 1, 2ನೇ ಹಂತ ಕ್ಯಾರಕೊಪ್ಪ, ಹಿರೇಮಠ ಲೇಔಟ್ ಹಾಗೂ ಬಸವ ಕಾಲನಿಗಳು ಮಲ್ಲಿಗವಾಡ ಗ್ರಾ.ಪಂ.ಗೆ ಒಳಪಡುತ್ತವೆ.

ಹದಗೆಟ್ಟ ಮುಖ್ಯರಸ್ತೆ: ಮಲ್ಲಿಗವಾಡ ಮುಖ್ಯರಸ್ತೆಯಿಂದ ನರೇಂದ್ರ ಕ್ರಾಸ್​ನ ಏರ್​ಟೆಕ್​ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. 4 ಬಡಾವಣೆಗಳಿದ್ದರೂ ರಸ್ತೆ ಡಾಂಬರ್ ಕಂಡಿಲ್ಲ. ಮಳೆಗಾಲದಲ್ಲಿ ಜನ ಏಳುತ್ತ ಬೀಳುತ್ತ ಸಂಚರಿಸಬೇಕು. ಸದ್ಯ ಮೊಣಕಾಲುದ್ದ ಗುಂಡಿಗಳಾಗಿದ್ದು, ರಾಡಿ ನೀರಲ್ಲಿ ಸರ್ಕಸ್ ಮಾಡುತ್ತ ವಾಹನ ಚಲಾಯಿಸಬೇಕು.

ಮೂಲಸೌಕರ್ಯಗಳಿಲ್ಲ: ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಾದ ಗ್ರಾ.ಪಂ.ನವರು ಹಿಂತಿರುಗಿ ನೋಡುತ್ತಿಲ್ಲ. ಒಳರಸ್ತೆ, ಚರಂಡಿ ವ್ಯವಸ್ಥೆಗಳಿಲ್ಲ. 5-6 ಟ್ರಾನ್ಸ್​ಫಾರ್ಮರ್​ಗಳಿದ್ದರೂ 2ರ ಮೇಲೆ ಲೋಡ್ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಟಿಸಿಗಳನ್ನು ದುರಸ್ತಿಪಡಿಸಿ ಅಳವಡಿಸುತ್ತಿಲ್ಲ.

ಜಲಾವೃತವಾಗುವ ಬಡಾವಣೆಗಳು: ಮಳೆಗಾಲದಲ್ಲಿ ಭಾರಿ ಪ್ರಮಾಣದ ನೀರು ಬಂದು ಬಡಾವಣೆಗಳು ಜಲಾವೃತವಾಗುತ್ತವೆ. ರಾಷ್ಟ್ರೀಯ ಹೆದ್ದಾರಿಯ ಕೆಳಭಾಗದ ನೀರು ಖಾಲಿ ನಿವೇಶನಗಳಲ್ಲಿ ಜಮಾವಣೆಗೊಳ್ಳುತ್ತದೆ. ಮಳೆ ನೀರು ಕೆಲವೊಮ್ಮೆ ಮನೆಗಳಿಗೂ ನುಗ್ಗಿ ಅದನ್ನು ಹೊರಹಾಕುವುದೇ ನಿವಾಸಿಗಳ ಕೆಲಸವಾಗತ್ತದೆ.

ಶಾಸಕರೇ ಇಲ್ಲೊಮ್ಮೆ ಬರ್ರಿ…: ಚುನಾವಣೆಗೂ ಮೊದಲು ಬಂದಿದ್ದ ಸಿ.ಎಂ. ನಿಂಬಣ್ಣವರ ಅವರು ಶಾಸಕರಾದ ಮೇಲೆ ಇತ್ತ ಸುಳಿದಿಲ್ಲ. ನಿವಾಸಿಗಳು ಅವರನ್ನು ಮಳೆಗಾಲಕ್ಕೂ ಮುಂಚೆ ಸ್ಥಳಕ್ಕೆ ಕರೆಸಿ ಗೋಳು ತೋಡಿಕೊಂಡಿದ್ದರು. ಮುಖ್ಯರಸ್ತೆಯ ಗುಂಡಿ ಮುಚ್ಚುವುದು, ವಿದ್ಯುತ್, ನೀರು, ಚರಂಡಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದ ಅವರು ನಂತರ ಹಿಂತಿರುಗಿ ನೋಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಟೋಲ್​ಗೇಟ್ ತಪ್ಪಿಸುವ ರಸ್ತೆ: ಚಿಕ್ಕಮಲ್ಲಿಗವಾಡ ರಸ್ತೆಯಿಂದ ನರೇಂದ್ರ ಏರ್​ಟೆಕ್​ವರೆಗಿನ ಬಡಾವಣೆಯ ಈ ಮುಖ್ಯರಸ್ತೆ ಅಸಲಿಗೆ ಟೋಲ್​ಗೇಟ್ ತಪ್ಪಿಸುವ ರಸ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಭಾರಿ ವಾಹನ, ಕಾರು, ಟ್ರಕ್​ಗಳ ಚಾಲಕರು ಟೋಲ್ ತಪ್ಪಿಸಲು ಈ ರಸ್ತೆ ಕಂಡುಕೊಂಡಿದ್ದಾರೆ. ಪರಿಣಾಮ ಕಚ್ಚಾ ರಸ್ತೆಯಲ್ಲಿ ಮೊಳಕಾಲುದ್ದ ಗುಂಡಿ ಬಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಬಡಾವಣೆಗಳಿಗೆ ಮೂಲ ಸೌಕರ್ಯಗಳಿಲ್ಲ. ಪಂಚಾಯಿತಿ, ಕಲಘಟಗಿ ಶಾಸಕರು ಇತ್ತ ನೋಡುತ್ತಿಲ್ಲ. ಇತ್ತೀಚೆಗೆ ಶಾಸಕ ನಿಂಬಣ್ಣವರ ನೀಡಿದ್ದ ಭರವಸೆ ಮರೆತಿದ್ದಾರೆ. ಇರುವ ಕಚ್ಚಾ ರಸ್ತೆ ಟೋಲ್ ತಪ್ಪಿಸಲು ಬಳಸಲ್ಪಡುತ್ತಿದ್ದು, ಕಡಿವಾಣ ಹಾಕಬೇಕು. – ಸಂಗಮೇಶ ಹಡಪದ, ಶಿರಡಿನಗರ ನಿವಾಸಿ

ಬಸವ ಕಾಲನಿ, ಹಿರೇಮಠ ಲೇಔಟ್, ಶಿರಡಿನಗರದ ಮುಖ್ಯರಸ್ತೆ ದುರಸ್ತಿ ಮಾಡುವಂತೆ ಜಿ.ಪಂ. ಹಾಗೂ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿದೆ. ಸದ್ಯ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾ.ಪಂ. ವ್ಯಾಪ್ತಿಗೆ ಬಾರದಿರುವುದರಿಂದ ತಾತ್ಕಾಲಿಕವಾಗಿ ಗುಂಡಿ ಮುಚ್ಚಲೂ ಬರುವುದಿಲ್ಲ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತರಲಾಗುವುದು. – ವಿ.ಕೆ. ಗಣಾಚಾರಿ, ಮಲ್ಲಿಗವಾಡ ಪಿಡಿಒ

- Advertisement -

Stay connected

278,638FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...