More

  ಗೀತಾ ಯಜ್ಞದ ಮೂಲಕ ಧರ್ಮದ ರಕ್ಷಣೆ

  ಬಾಗಲಕೋಟೆ: ಮನುಕುಲವನ್ನು ಗಮನದಲ್ಲಿಟ್ಟುಕೊಂಡು ಗೀತೆಯ ಉಪದೇಶವಾಗಿದೆ. ಅದರ ಪಠಣ ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಉಡುಪಿಯ ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ ಸುಶೀಂದ್ರತೀರ್ಥ ಶ್ರೀಪಾದಂಗಳವರು ಹೇಳಿದರು.

  ನಗರದ ವಿದ್ಯಾ ಪ್ರಸಾರಕ ಮಂಡಳದ ಸರಳಾಬಾಯಿ ಭಾಗವತ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗೀತಾ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ಪ್ರಸ್ತುತ ಸನ್ನಿವೇಶದಲ್ಲಿ ಶಾಲಾ ಕಾಲೇಜುಗಳಲ್ಲಿ ಆಧ್ಯಾತ್ಮಿಕ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಧರ್ಮದ ಪರಿಚಯವನ್ನು ಯುವಕರಿಗೆ ಮಾಡಿಕೊಡುವ ಉದ್ದೇಶದಿಂದ ಗೀತಾ ಸಂದೇಶವನ್ನು ತಿಳಿಸಲಾಗುತ್ತಿದೆ. ಗೀತಾ ಲೇಖನದ ಯಜ್ಞದ ಮೂಲಕ ಧರ್ಮದ ರಕ್ಷಣೆ ಮಾಡಬಹುದಾಗಿದೆ ಎಂದರು.

  ಜೀವನದಲ್ಲಿ ದೇವರ ಬಗ್ಗೆ ಚಿಂತನೆ ಮಾಡುವುದು ಮಹತ್ವದ ಕಾರ್ಯ. ನಿತ್ಯ ದೇವರ ಸ್ಮರಣೆ ಹಾಗೂ ನಿರಂತರ ಪ್ರಯತ್ನದಿಂದ ಜ್ಞಾನಿಯಾಗಲು ಸಾಧ್ಯ. ಭಗವಂತನ ಇಚ್ಛೆ ಇಲ್ಲದಿದ್ದರೆ ಎನೂ ನಡೆಯಲಾರದು ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು. ಭಗವಂತನ ಬಗ್ಗೆ ತಿಳುವಳಿಕೆ ಹೊಂದಿ ಭಕ್ತಿ ಭಾವ ಇದ್ದಲ್ಲಿ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ತಿಳಿಸಿದರು.

  ಉತ್ತಮ ಜೀವನ ನಿರ್ವಣೆಗೆ ಸರಿಯಾದ ದಿಕ್ಕು ತೋರಿಸುವ ಶಕ್ತಿ ಭಗವದ್ಗೀತೆಗಿದೆ. ಇದು ಇರುವುದೇ ನಮ್ಮೆಲ್ಲರ ಉಧ್ಧಾರಕ್ಕೆ ಎಂಬ ಸತ್ಯವನ್ನು ಅರಿತು ಯುವಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದರು. ಇದಕ್ಕೂ ಮೊದಲು ಶ್ರೀಗಳು ಸಂಸ್ಥೆಯ ಉದ್ಯಾನವನದಲ್ಲಿ ಸಸಿಗಳನ್ನು ನೆಟ್ಟು, ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಿಗೆ ಭೇಟಿ ನೀಡಿ ಅನುಗ್ರಹಿಸಿದರು.

  ಪಂಡಿತ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರೆಂಜಲ್, ಗೌರವ ಕಾರ್ಯದರ್ಶಿ ಡಾ. ಗಿರೀಶ ಮಸೂರಕರ, ಕಾನೂನು ಮತ್ತು ಆಡಳಿತ ಸಲಹೆಗಾರ ಕೆ.ಎಸ್.ದೇಶಪಾಂಡೆ, ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ, ಸದಸ್ಯರಾದ ಎಸ್.ಕೆ. ಕುಲಕರ್ಣಿ, ಡಾ.ಜಯತೀರ್ಥ ದೇಶಪಾಂಡೆ, ಜಿ.ಬಿ.ಕುಲಕರ್ಣಿ, ಡಾ. ಎಂ.ಜಿ. ದೀಕ್ಷಿತ, ಪ್ರಾಚಾರ್ಯ ಶ್ರೀನಿವಾಸ ನರಗುಂದ, ಅಶೋಕ ಕಂದಗಲ, ಬಿ.ಎಚ್.ಲಮಾಣಿ, ವಿಪ್ರ ಕೇಸರಿ ಟ್ರಸ್ಟ್ ಅಧ್ಯಕ್ಷ ವಿನಾಯಕ ತಾಳಿಕೋಟಿ ಪಾಲ್ಗೊಂಡರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts