ಗಿಳಿಗೇನು ಆಪತ್ತು

ಅಗ್ನಿ ಅವಘಡಗಳ ಮುನ್ಸೂಚನೆ ನೀಡುವಂಥ ‘ಖಞಟkಛಿ ಚ್ಝಚ್ಟಞ’ ಸಾಧನಗಳ ಕುರಿತು ನಿಮಗೆ ಗೊತ್ತಿರಬಹುದು. ಇವು ಮನೆ/ಕಚೇರಿಯಲ್ಲಿ ಅಸಹಜ ರೀತಿಯಲ್ಲಿ ಹೊಗೆಯ ಹೊರಸೂಸುವಿಕೆಯಾಗುತ್ತಿದ್ದಲ್ಲಿ ಅದನ್ನು ಗ್ರಹಿಸಿ ಎಚ್ಚರಿಸುವ ಸಂವೇದಕಗಳಾಗಿದ್ದು, ಇವುಗಳ ನೆರವಿಂದ ಸಂಭಾವ್ಯ ದುರಂತವನ್ನು ತಪ್ಪಿಸಬಹುದಾಗಿರುತ್ತದೆ.

ಬ್ರಿಟನ್​ನ ಡಾವೆಂಟ್ರಿ ಎಂಬಲ್ಲಿ ಇಂಥ ಒಂದು ಎಚ್ಚರಿಕೆಯ ಗಂಟೆಯ ಸದ್ದು ಪುನರಾವರ್ತನಗೊಳ್ಳತೊಡಗಿದಾಗ ಸನಿಹದಲ್ಲೇ ಇದ್ದ ಅಗ್ನಿಶಾಮಕ ದಳದವರು ಆ ತಾಣಕ್ಕೆ ಧಾವಿಸಿದರು. ಆದರೆ ಆ ಮನೆಯಾತ ನಿರಾಳವಾಗಿದ್ದ. ಅಗ್ನಿಶಾಮಕ ಸಿಬ್ಬಂದಿಯನ್ನು ಕಂಡು ಅಚ್ಚರಿಗೊಂಡ ಆತ ಆಗಮನಕ್ಕೆ ಕಾರಣ ಕೇಳಿದಾಗ ಅವರು ಇರುವ ವಿಷಯವನ್ನು ತಿಳಿಸಿದರು. ‘ಇಲ್ಲ, ಅಂಥದ್ದೇನೂ ಆಗಿಲ್ಲ; ಮನೆ ಸುರಕ್ಷಿತವಾಗಿದೆ’ ಎಂದು ಮನೆಯಾತ ಖಾತ್ರಿಪಡಿಸಿದ. ಇಷ್ಟಕ್ಕೇ ಸಮಾಧಾನಗೊಳ್ಳದ ಸಿಬ್ಬಂದಿ ಮನೆಯೊಳಗೆಲ್ಲ ತಲಾಷ್ ಮಾಡಿದರು, ಸ್ಮೋಕ್ ಅಲಾಮರ್್​ಗಳನ್ನು ಚೊಕ್ಕಗೊಳಿಸಿ ಅದು ವಿನಾಕಾರಣ ಮತ್ತೊಮ್ಮೆ ಶಬ್ದಮಾಡದಂತೆ ಒಳಭಾಗವನ್ನೆಲ್ಲ ಪರಿಶೀಲಿಸಿ ಸರಿಮಾಡಿದರು.

ಇಷ್ಟೆಲ್ಲ ಕೆಲಸ ಮಾಡುತ್ತಿರುವಾಗ ಮತ್ತೆ ಅಲಾಮ್ರ್ ಸದ್ದು ಹೊಡೆದುಕೊಳ್ಳಲಾರಂಭಿಸಿದಾಗ, ಅದರ ಮೂಲವನ್ನು ಹುಡುಕುತ್ತ ಹೊರಟ ಸಿಬ್ಬಂದಿಗೆ ಅಚ್ಚರಿ ಕಾದಿತ್ತು. ಹೀಗೆ ಎಚ್ಚರಿಕೆಯ ದನಿ ಹೊರಡಿಸುತ್ತಿದ್ದುದು ಅಲಾಮ್ರ್ ಅಲ್ಲ, ಒಂದು ಗಿಳಿ! ‘ಜಾಝå್’ ಎಂಬ ಹೆಸರಿನ ಆಫ್ರಿಕಾ-ಮೂಲದ ಈ ಬೂದುಬಣ್ಣದ ವಿಶಿಷ್ಟ ಗಿಳಿಗೆ ಪಂಜರದಲ್ಲಿದ್ದೂ ಇದ್ದೂ ಬೇಜಾರಾಗಿತ್ತೋ ಏನೊ… ಹೊಗೆ ಅಲಾಮರ್್​ನ ಸದ್ದನ್ನು ಅನುಕರಣೆ ಮಾಡುವುದನ್ನು ಕಲಿತು ಹೀಗೆ ಏಮಾರಿಸಿತ್ತು! ಬಂದದಾರಿಗೆ ಸುಂಕವಿಲ್ಲವೆಂಬಂತೆ ಅಗ್ನಿಶಾಮಕ ಸಿಬ್ಬಂದಿ ಅಲ್ಲಿಂದ ತೆರಳಿದರು.