Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಗಿನ್ನೆಸ್ ರೆಕಾರ್ಡ್​ಗೆ ಸೇರಲು ಇಸ್ರೋ ಸಜ್ಜು

Monday, 16.01.2017, 8:17 AM       No Comments
  • ಕೆ.ಪಿ. ಓಂಕಾರಮೂರ್ತಿ ಚಿತ್ರದುರ್ಗ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇಡೀ ಪ್ರಪಂಚ ಭಾರತದತ್ತ ತಿರುಗಿ ನೋಡುವ ಕಾಲ ಸನಿಹವಾಗಿದೆ!

ಹೌದು. ಬಾಹ್ಯಕಾಶ ಉಪಗ್ರಹ ಉಡಾವಣೆ ಯಲ್ಲಿ ರಷ್ಯಾದ ಒಪ್ಪಂದ ಕಡಿತವಾದ ಬಳಿಕ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದ ಇಸ್ರೋ ಗಿನ್ನೆಸ್ ದಾಖಲೆಗೆ ಸಿದ್ಧತೆ ನಡೆಸಿದೆ. ಈ ಎಲ್ಲದರ ಬಗ್ಗೆ ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಇಸ್ರೋ ಉಪ ನಿರ್ದೇಶಕ ಹಾಗೂ ಕಾರ್ಯಕ್ರಮ ನಿರ್ದೇಶಕ ಡಾ.ಎಸ್.ವಿ. ಶರ್ಮಾ ಮಾಹಿತಿ ಹಂಚಿಕೊಂಡರು.

  • ಇಸ್ರೋದ ಹೊಸ ಯೋಜನೆ ಏನು?

ಪ್ರಪಂಚದಲ್ಲೇ 103 ಉಪಗ್ರಹಗಳ ಕಾಟೋಸ್ಯಾಟ್ ಸೀರಿಸ್ ಅನ್ನು ಇಸ್ರೋ ಫೆಬ್ರವರಿಯಲ್ಲಿ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಿದೆ. ಒಟ್ಟು 1,400 ಕೆಜಿ ಇದ್ದು, ಇದರಲ್ಲಿ 100 ಅಮೆರಿಕ, ಕೆನಡಾ ಸೇರಿ ವಿವಿಧ ದೇಶಗಳ ಉಪಗ್ರಹಗಳಿದ್ದು, ನಮ್ಮ ದೇಶದ 2 ನ್ಯಾನೋ ಹಾಗೂ ಕಾಟ್ರೋ ಉಪಗ್ರಹ ಇರುತ್ತದೆ. ಇದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆಯಾಗಲಿದ್ದು, ಈ ಹಿಂದೆ ಯಾವುದೇ ದೇಶವೂ ಇಂತಹ ಸಾಹಸಕ್ಕೆ ಕೈ ಹಾಕಿಲ್ಲ. ಇದು ಭಾರತದ ಸಾಧನೆ.

  • ಚಂದ್ರಯಾನ -2 ಯಾವಾಗ ಉಡಾವಣೆಯಾಗಲಿದೆ?

2008ರಲ್ಲಿ ಚಂದ್ರಯಾನ- ಪಿಎಸ್​ಎಲ್​ವಿ 1 ಉಡಾವಣೆಯಾಗಿದ್ದು, ಈ ವರ್ಷದ ಅಂತ್ಯ ಅಥವಾ 2018ರ ಜನವರಿಯಲ್ಲಿ ಚಂದ್ರಯಾನ- ಜಿಎಸ್​ಎಲ್​ವಿ 2 ಉಡಾವಣೆಯಾಗಲಿದೆ. ಈಗಾಗಲೇ ಇದಕ್ಕೆ ಸಿದ್ಧತೆಗಳು ನಡೆದಿದ್ದು, ಲ್ಯಾಂಡರ್ ಹಾಗೂ ರೋವರ್ ಅನ್ನು ಇಸ್ರೋ ಸಿದ್ಧಪಡಿಸಿದೆ. ಚಂದ್ರನ ಮೇಲೆ ಹೋಗುವ ರೋವರ್ ಅನ್ನು ಪರೀಕ್ಷೆ ಮಾಡಲು ಸೇಲಂನಿಂದ ಪರೀಕ್ಷಿತ ಮಣ್ಣನ್ನು ಬೆಂಗಳೂರಿನ ಕೇಂದ್ರಕ್ಕೆ ತರಲಾಗಿದೆ. ಯಾವುದೇ ದೇಶದ ಸಹಾಯವಿಲ್ಲದೆ ಯಶಸ್ವಿ ಉಡಾವಣೆ ಮಾಡಲಾಗುವುದು.

  • ಉಪಗ್ರಹ ಉಡಾವಣೆಗೂ ಮುನ್ನ ವಿಜ್ಞಾನಿಗಳು ಪೂಜೆ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ?

ಒಂದು ವಸ್ತುವಿಗೆ ಹೇಗೆ ಒಬ್ಬ ಸೃಷ್ಟಿಕರ್ತ ಇರುತ್ತಾನೋ ಹಾಗೇ ದೇವರು ಸಹ. ದೇವರು ಇಲ್ಲ ಎಂದು ಹೇಳುವ ಮಾತಿನಲ್ಲಿ ದೇವರಿರುತ್ತಾನೆ. ವಿಜ್ಞಾನಿ ಎಂದ ಮಾತ್ರಕ್ಕೆ ಪೂಜಿಸುವುದು ತಪ್ಪಾ? ಇದು ಒಂದು ನಂಬಿಕೆಯಾಗಿದ್ದು, ಚರ್ಚೆ ಅನಗತ್ಯ.

  • ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಇಸ್ರೋ ಕೇಂದ್ರದ ಪ್ರಾರಂಭ ಯಾವಾಗ?

ಚಳ್ಳಕೆರೆ ಸಮೀಪದ ದೊಡ್ಡಉಳ್ಳಾರ್ತಿಯ ಇಸ್ರೋ ಕೇಂದ್ರ ಪ್ರಾರಂಭಕ್ಕೆ ಕೆಲವು ಅಡೆತಡೆಗಳಿದ್ದು, ಹಸಿರು ನ್ಯಾಯಪೀಠದಲ್ಲಿ ಕೆಲವು ಅರ್ಜಿಗಳು ವಿಚಾರಣೆಯಲ್ಲಿವೆ. ಅವು ಬಗೆಹರಿದ ನಂತರ ನ್ಯಾಯಪೀಠ ಅನುಮತಿ ನೀಡಲಿದೆ. ಹೀಗಾಗಿ ಅಲ್ಲಿ ನಡೆಯುತ್ತಿದ್ದ ಕೆಲಸಗಳು ಸ್ಥಗಿತಗೊಂಡಿವೆ.

  • ಚಂದ್ರನ ಮೇಲೆ ನೀರಿದೆ ಎಂದು ಇಸ್ರೋ ಮಾಹಿತಿ ನೀಡಿದ ಬಳಿಕ ನಡೆದ ಚರ್ಚೆ ಬಗ್ಗೆ?

ಚಂದ್ರನ ಮೇಲೆ ನೀರಿದೆ ಎಂದು ಮೊದಲು ವಿಶ್ವಕ್ಕೆ ತಿಳಿಸಿದ್ದು ಇಸ್ರೋ. ಆದರೆ, ಇದನ್ನು ಇತರೆ ದೇಶಗಳು ಆ ಸಮಯದಲ್ಲಿ ನಂಬಲಿಲ್ಲ. ಬಳಿಕ ಉಪಗ್ರಹ ಉಡಾವಣೆ ಮಾಡಿ ನೀರಿದೆ ಎಂದು ಒಪ್ಪಿಕೊಂಡವು. ಈ ಸಾಧನೆ ಭಾರತಕ್ಕೆ ಸಲ್ಲುತ್ತದೆ.

 

Leave a Reply

Your email address will not be published. Required fields are marked *

Back To Top