ಕಲಬುರಗಿ: ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವಲಗಾಣಗಾಪುರವನ್ನು ಮಠ ಎಂದು ಘೋಷಿಸಿ ಗುರುಗಳು ಸ್ವತಃ ಹೇಳಿರುವಂತೆ ಭಾಸ್ಕರನ ವಂಶಸ್ಥರಿಗೆ ವಹಿಸಿಕೊಡುವಂತೆ ಖ್ಯಾತ ಜ್ಯೋತಿಷಿ ಹಾಗೂ ಆಧ್ಯಾತ್ಮಿಕ ಚಿಂತಕ ರಾಜಗುರು ಬಿ.ಎಸ್.ದ್ವಾರಕನಾಥ ಸರ್ಕಾರಕ್ಕೆ ಆಗ್ರಹಿಸಿz್ದÁರೆ.
ದಸರಾ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮತ್ತು ಪಾರಾಯಣದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ ನಿರ್ದೇಶಕರೂ ಆಗಿರುವ ದ್ವಾರಕನಾಥ ಗುರೂಜಿ, ಶ್ರೀಗುರು ದತ್ತಾತ್ರೇಯರ ಅವತಾರ ಶ್ರೀನರಸಿಂಹ ಭಾರತಿ ಸ್ವಾಮಿಗಳ ನಿರ್ಗುಣ ಪಾದುಕೆಗಳು ಗಾಣಗಾಪುರದಲ್ಲಿ ನಿತ್ಯ ಪೂಜೆಗೊಳ್ಳುತ್ತಿವೆ. ಗಾಣಗಾಪುರ ಕ್ಷೇತ್ರದ ಸಂಪೂರ್ಣ ಮಾಹಿತಿಯುಳ್ಳ ಶ್ರೀಗುರುಚರಿತ್ರೆ ಪಾರಾಯಣ ಗ್ರಂಥದಲ್ಲಿ ಸ್ವತಃ ಗುರುಗಳೇ ತಿಳಿಸಿರುವಂತೆ ಬಡ ಬ್ರಾಹ್ಮಣನಾಗಿದ್ದ ಭಾಸ್ಕರನ ವಂಶಸ್ಥರಿಗೆ ತಮ್ಮ ನಿರ್ಗುಣ ಪಾದುಕೆಗಳನ್ನು ನೀಡಿz್ದÁರೆ ಎಂದು ಹೇಳಿದರು.
ಪವಿತ್ರ ಪಾದುಕೆಗಳೇ ಇಂದಿಗೂ ಗಾಣಗಾಪುರದಲ್ಲಿ ಪೂಜೆಗೊಳ್ಳುತ್ತಿವೆ. ಗುರುಗಳು ವಾಸ ಮಾಡಿದ ಈ ಸ್ಥಳ ಆ ಕಾಲದಿಂದಲೂ ಮಠ ಎಂದೇ ದಾಖಲಾಗಿದೆ. ನಂತರದ ದಿನಗಳಲ್ಲಿ ಉಸ್ತುವಾರಿ ಸಮಿತಿ ರಚಿಸಿ ಸಮಿತಿಯಲ್ಲಿ ಗೌರವಪೂರ್ವಕವಾಗಿ ಜಿ¯್ಲÁಧಿಕಾರಿಯನ್ನು ಸೇರಿಸಲಾಗಿದ್ದು, ಅದೇ ಕಾರಣಕ್ಕೆ ಮಠವು ದೇವಾಲಯ ಎಂದು ತಪ್ಪು ದಾಖಲೆಯಾಗಿದೆ. ಸದ್ಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಮಠವನ್ನು ಸರ್ಕಾರ ಕೂಡಲೇ ಅಧಿಕೃತವಾಗಿ ಮಠ ಎಂದು ಘೋಷಿಸಿ ಸಂಬAಧಪಟ್ಟವರಿಗೆ ವಹಿಸುವಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನು ಒತ್ತಾಯಿಸಿದ್ಧಾರೆ.
ಗಾಣಗಾಪುರವನ್ನು ಮಠವೆಂದು ಘೋಷಿಸಿ
Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..
ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…
ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ
ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…
ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips
ಚಳಿಗಾಲದಲ್ಲಿ ನೆಗಡಿ ಮಾತ್ರವಲ್ಲದೆ ಹಲವಾರು ಕಾಯಿಲೆಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಚಿಲ್ಬ್ಲೈನ್ಸ್ ರೋಗವು ಒಂದಾಗಿದೆ. ಬಹುಶಃ…