ಗಾಂಧೀಜಿ ಸ್ವಚ್ಛಭಾರತ ಗುರಿ ಸಾಧಿಸಲು ಪಣ

ಮಾಗಡಿ: ಮಹಾತ್ಮ ಗಾಂಧೀಜಿರವರ ಸ್ವಚ್ಛ ಭಾರತ ಕಲ್ಪನೆಯಂತೆ ಇನ್ನೊಂದು ವರ್ಷದಲ್ಲಿ ಮಾಗಡಿ, ಬಿಡದಿ, ಕುದೂರು ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಪಟ್ಟಣದ ಎನ್​ಇಎಸ್ ಬಡಾವಣೆಯಲ್ಲಿ ಮಂಗಳವಾರ ಗಾಂಧೀಜಿ ನೂತನ ಪ್ರತಿಮೆ ಅನಾವರಣ ಮತ್ತು ಗಾಂಧೀಜಿರವರ 150ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಸ್ವಚ್ಛ ಭಾರತ ಯೋಜನೆ ಪ್ರಕಾರ ಪ್ರತಿ ಮನೆಯಲ್ಲೂ ಶೌಚಗೃಹ ನಿರ್ವಣಕ್ಕೆ ಪಣ ತೊಡಲಾಗಿದೆ. ಬಿಡದಿಯ ಟೊಯೋಟಾ ಸಂಸ್ಥೆ ವತಿಯಿಂದ ಕ್ಷೇತ್ರದ ಪ್ರತಿ ಶಾಲೆಯಲ್ಲೂ ಹೈಟೆಕ್ ಶೌಚಗೃಹ ನಿರ್ವಿುಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಗಳಲ್ಲಿ ಶುದ್ಧ ನೀರು ಘಟಕ ಸ್ಥಾಪಿಸಲಾಗುವುದು. 20 ವರ್ಷಗಳಿಂದಲೂ ಮಾಗಡಿಯಲ್ಲಿ ಯುಜಿಡಿ ಸಮಸ್ಯೆಯಿದ್ದು ಅಧಿಕಾರಿಗಳ ಜತೆ ರ್ಚಚಿಸಿ ಶಾಶ್ವತವಾಗಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಮಾಗಡಿ – ಬೆಂಗಳೂರು ಚತುಷ್ಪಥ ರಸ್ತೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ವಿದ್ಯುತ್ ಯುಜಿ ಕೇಬಲ್ ಅಳವಡಿಸಲು ಮಾಗಡಿಗೆ 24 ಕೋಟಿ, ಬಿಡದಿಗೆ 60 ಕೋಟಿ ಹಾಗೂ ಕುದೂರಿಗೆ 9 ಕೋಟಿ ರೂ. ಅನುದಾನ ಬಂದಿದ್ದು, ಶೀಘ್ರದಲ್ಲೆ ಕಾಮಗಾರಿ ಆರಂಭಿಸಲಾಗುತ್ತದೆ. ಎಲ್​ಇಡಿ ಬೀದಿದೀಪ ಅಳವಡಿಸುವ ಕಾರ್ಯವನ್ನೂ ಮಾಡಲಾಗುತ್ತದೆ ಎಂದರು.

ಪ್ರವಾಸಿ ತಾಣಗಳ ಪಟ್ಟಿಯಲ್ಲಿಯಲ್ಲಿರುವ ತಾಲೂಕಿನ ಮಾಗಡಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಸಾವನದುರ್ಗ, ಕಲ್ಯಾ ಬೆಟ್ಟವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.

ಕಸಾಪ ಕಲ್ಪನಾ ಶಿವಣ್ಣ ಮಾತನಾಡಿ, ಗಾಂಧಿ ವಿಚಾರಧಾರೆಯನ್ನು ಎಲ್ಲರೂ ಕೈಬಿಟ್ಟಿರುವುದು ಬೇಸರದ ಸಂಗತಿ. ಶಾಂತಿ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕಿ ್ತ ಗಾಂಧೀಜಿ. ಪ್ರತಿಯೊಬ್ಬರೂ ಗಾಂಧೀಜಿ ಆದರ್ಶಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಜಿಪಂ ಸದಸ್ಯೆ ಚಂದ್ರಮ್ಮ ನಂಜಯ್ಯ, ಪ್ರತಿಮೆ ದಾನಿ ಜಯರಾಮಯ್ಯ(ಬಾಬುಗೌಡ) ಜೆಡಿಎಸ್ ತಾಲೂಕು ಅಧ್ಯಕ್ಷ ಪೊಲೀಸ್ ರಾಮಣ್ಣ, ಪುರಸಭೆ ಸದಸ್ಯ ಎಂ.ಎನ್.ಮಂಜು, ಕೆ.ವಿ.ಬಾಲು, ಜೆಡಿಎಸ್ ಮುಖಂಡರಾದ ಕಲ್ಕರೆ ಶಿವಣ್ಣ, ಚಿಕ್ಕಣ್ಣ, ಐಯ್ಯಂಡಹಳ್ಳಿ ರಂಗಸ್ವಾಮಿ, ದಂಡಿಗೆಪುರ ಕುಮಾರ್, ಜುಟ್ಟನಹಳ್ಳಿ ಜಯರಾಂ, ನರಸೇಗೌಡ, ಅಂಬಿಕಾ, ಬೋರ್​ವೆಲ್ ನರಸಿಂಹಯ್ಯ, ಜೈಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಟೀಕಾಕಾರರಿಗೆ ಟಾಂಗ್: ಎರಡು ವರ್ಷಗಳಿಂದ ಗಾಂಧಿ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ನನೆಗುದಿಗೆ ಬಿದ್ದಿತ್ತು. ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಯರಾಮಯ್ಯ, ಗುತ್ತಿಗೆದಾರ ಕರಡಿ ನಾಗರಾಜು ಸಹಕಾರದಿಂದ ಗಾಂಧಿ ಪ್ರತಿಮೆಯನ್ನು ಮಾಡಿಸಲಾಗಿದೆ. ಇದರಲ್ಲಿ ನನ್ನ ಹೆಸರು ಹಾಕಿರುವುದಕ್ಕೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ನನ್ನ ಹೆಸರನ್ನು ಹಾಕಿಸಿದ್ದಾರೆ ಎಂದು ಟೀಕಾಕಾರರಿಗೆ ಮಂಜುನಾಥ್ ಟಾಂಗ್ ನೀಡಿದರು. ಮುಂದಿನ ಏ.14ರಂದು ಅಂಬೇಡ್ಕರ್ ಭವನ ಎದುರು ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.