ಗಮನ ಸೆಳೆದ ಸಕ್ಷಮ ಸೈಕ್ಲೋಥಾನ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ (ಪಿಸಿಆರ್ಎ) ಮತ್ತು ತೈಲ ಮಾರಾಟ ಕಂಪನಿಗಳ ಸಹಯೋಗದಡಿ ನಗರದಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಸಕ್ಷಮ ಸೈಕ್ಲೋಥಾನ್ 2019 ಸಾರ್ವಜನಿಕರ ಗಮನ ಸೆಳೆಯಿತು.

ಸೈಕ್ಲೋಥಾನ್ಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜಾ ಮಾತನಾಡಿ, ಇಂಧನ ಉಳಿಸುವ ಉದ್ದೇಶದಿಂದ ಪ್ರತಿಯೊಬ್ಬರೂ ವಾರಕ್ಕೊಮ್ಮೆ ವಾಹನ ಬಳಸದೆ ಇರುವಂತೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೈಕ್ಲೋಥಾನ್ ಉಸ್ತುವಾರಿ ಮತ್ತು ಭಾರತೀಯ ತೈಲ ನಿಗಮ ಕಲಬುರಗಿ ಘಟಕದ ಹಿರಿಯ ಅಧಿಕಾರಿ ಎಸ್.ಎಸ್. ಕುಲಕರ್ಣಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ತಿಂಗಳಲ್ಲಿ ಒಂದು ದಿನ ಸೈಕಲ್ ಬಳಸಿ ಇಂಧನ ಉಳಿಸಿ ಎಂದು ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ರ್ಯಾಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನ ವ್ಯವಸ್ಥಾಪಕ ಜಿ.ಪಿ.ಸಿಂಗ್, ಸಹಾಯಕ ವ್ಯವಸ್ಥಾಪಕ ಉದಯಕುಮಾರ, ಅಧಿಕಾರಿಗಳಾದ ವೆಂಕಟ ರಾಠೋಡ, ಮಹೇಶ, ತರುಣ, ಐಒಸಿಎಲ್ ಅಧಿಕಾರಿಗಳಾದ ಮಹೇಶ ಎಸ್., ಸೌರವ್ ಪಾಲ್, ಶಿವಬಸಯ್ಯ, ಅಂಬಾದಾಸ ಇತರರಿದ್ದರು. ಮಿನಿ ವಿಧಾನಸೌಧದಿಂದ ಸೇಡಂ ರಿಂಗ್ ರಸ್ತೆ ವೃತ್ತದವರೆಗೆ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಟಿ ಶರ್ಟ್​ ಮತ್ತು ಕ್ಯಾಪ್ ವಿತರಿಸಲಾಯಿತು.

ವ್ಯವಸ್ಥಾಪಕ ಜಿ.ಪಿ.ಸಿಂಗ್, ಸಹಾಯಕ ವ್ಯವಸ್ಥಾಪಕ ಉದಯಕುಮಾರ, ಅಧಿಕಾರಿಗಳಾದ ವೆಂಕಟ ರಾಠೋಡ, ಮಹೇಶ, ತರುಣ, ಐಒಸಿಎಲ್ ಅಧಿಕಾರಿಗಳಾದ ಮಹೇಶ ಎಸ್., ಸೌರವ್ ಪಾಲ್, ಶಿವಬಸಯ್ಯ, ಅಂಬಾದಾಸ ಇತರರಿದ್ದರು. ಮಿನಿ ವಿಧಾನಸೌಧದಿಂದ ಸೇಡಂ ರಿಂಗ್ ರಸ್ತೆ ವೃತ್ತದವರೆಗೆ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಟಿ ಶರ್ಟ್​ ಮತ್ತು ಕ್ಯಾಪ್ ವಿತರಿಸಲಾಯಿತು.

Leave a Reply

Your email address will not be published. Required fields are marked *