Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಗಮನ ಬೇರೆಡೆ ಸೆಳೆದು 3 ಲಕ್ಷ ರೂ. ಕಳವು

Wednesday, 13.06.2018, 3:36 AM       No Comments

ಆನೇಕಲ್: ಬ್ಯಾಂಕಿನಿಂದ ಮೂರು ಲಕ್ಷ ರೂಪಾಯಿ ಪಡೆದು ಬೈಕ್​ನಲ್ಲಿ ಹೊರಡಲು ಅಣಿಯಾಗಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದ ದುಷ್ಕರ್ವಿುಗಳು ಸಿನಿಮೀಯ ಶೈಲಿಯಲ್ಲಿ ಹಣ ದೋಚಿದ್ದಾರೆ.

ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ರ್ಪಾಂಗ್ ಕೌಂಟರ್ ಕೆಲಸಗಾರ, ದೊಡ್ಡ ಮರಾಠ ಬೀದಿ ನಿವಾಸಿ ನಾಗರಾಜು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡವರು.

ಮನೆ ಕಟ್ಟುವ ಉದ್ದೇಶದಿಂದ ಚಿಕನ್ ಮಾರ್ಕೆಟ್ ಬಳಿಯ ಎಸ್​ಬಿಐನಿಂದ ಸೋಮವಾರ ಹಣ ಪಡೆದು ಬೈಕ್​ನ ಟ್ಯಾಂಕ್ ಕವರ್​ನಲ್ಲಿ ಇಟ್ಟು ಹೊರಡಲು ಸಿದ್ಧರಾಗಿದ್ದರು. ಅಷ್ಟರಲ್ಲೇ ಹತ್ತಿರವಿದ್ದ ಇಬ್ಬರು ಅಪರಿಚಿತರು ಕೆಳಗೆ ನಿಮ್ಮ ಹಣ ಬಿದ್ದಿದೆ ನೋಡಿ ಎಂದಾಗ ಕೆಳಗೆ ಬಿದ್ದಿದ್ದ 10 ರೂ. ಮುಖಬೆಲೆಯ ನಾಲ್ಕು ನೋಟು ಆಯ್ದುಕೊಳ್ಳಲು ಗಾಡಿಯಿಂದ ಕೆಳಗಡೆ ನಾಗರಾಜು ಇಳಿದಿದ್ದಾರೆ. ಇದನ್ನೇ ಹೊಂಚು ಹಾಕುತ್ತಿದ್ದ ಮತ್ತಿಬ್ಬರು ಬೈಕ್​ನಲ್ಲಿ ಬಂದು ನಾಗರಾಜು ಬೈಕ್ ಟ್ಯಾಂಕರ್ ಕವರಿನಲ್ಲಿಟ್ಟಿದ್ದ ನಗದು ದೋಚಿ ಪರಾರಿಯಾಗಿದ್ದಾರೆ. ಆಗಲೂ ಹತ್ತಿರವಿದ್ದ ಇಬ್ಬರೂ ನಿಮ್ಮ ಬೈಕ್​ನಲ್ಲಿದ್ದ ಕವರ್ ಯಾರೋ ಹೊತ್ತೋಯ್ತಿದ್ದಾರೆ ನೋಡಿ ಎಂದು ತಿಳಿಸಿದ್ದಾರೆ. ಪರಾರಿಯಾದ ಬೈಕ್ ಕಡೆ ತಿರುಗಿ ಪಕ್ಕದಲ್ಲಿದ್ದವರತ್ತ ನೋಡಿದರೆ ಅವರೂ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top