More

  ಗಮನಸೆಳೆದ ಆರೆಸ್ಸೆಸ್ ಪಥ ಸಂಚಲನ  ಲಕ್ಷ್ಮೇಶ್ವರ: ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ಘಟಕಗಳ ಸ್ವಯಂಸೇವಕರ ತಾಲೂಕು ಮಟ್ಟದ ಸಮಾವೇಶ ಪಟ್ಟಣದಲ್ಲಿ ಶನಿವಾರ ಜರುಗಿತು.

  ಬೆಳಗ್ಗೆಯಿಂದಲೇ ಪಟ್ಟಣದ ತೋಟದ್ದೇವರಮಠದಲ್ಲಿ ಸಮಾವೇಶಗೊಂಡ ನೂರಾರು ಆರೆಸ್ಸೆಸ್ ಕಾರ್ಯಕರ್ತರು ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಮಧ್ಯಾಹ್ನ 3.30ಕ್ಕೆ 300ಕ್ಕೂ ಅಧಿಕ ಸ್ವಯಂಸೇವಕರು ಗಣವೇಷಧಾರಿಗಳಾಗಿ ಆಕರ್ಷಕ ಪಥಸಂಚಲನ ನಡೆಸಿದರು. ಪಥ ಸಂಚಲನದುದ್ದಕ್ಕೂ ‘ಭಾರತ ಮಾತಾಕೀ ಜೈ, ಜೈ ಹಿಂದ್’ ಘೊಷಣೆಗಳು ಮೊಳಗಿದವು.

  ಮೆರವಣಿಗೆಯಲ್ಲಿ ಭಾರತಮಾತೆ ಮತ್ತು ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್ ಅವರ ಭಾವಚಿತ್ರಗಳನ್ನು ಅಲಂಕೃತ ವಾಹನದಲ್ಲಿರಿಸಲಾಗಿತ್ತು. ಗಣವೇಷಧಾರಿಗಳು ಬರುವ ಮಾರ್ಗದುದ್ದಕ್ಕೂ ಮಹಿಳೆಯರು, ಮಕ್ಕಳು, ಹಿರಿಯರು ಪುಷ್ಪಗಳ ಮಳೆಗರೆದು ಸ್ವಾಗತ ನೀಡಿದರು. ಪಥಸಂಚಲನವು ತೋಟದ್ದೇವರಮಠದ ಆವರಣದಿಂದ ಪ್ರಾರಂಭಗೊಂಡು ವಿದ್ಯಾರಣ್ಯವೃತ್ತ, ಹಾವಳಿ ಹನುಮಂತದೇವರ ದೇವಸ್ಥಾನ, ಹಳೇ ಪೊಲೀಸ್ ಠಾಣೆ, ದೂದನಾನಾ ದರ್ಗಾ, ಬ್ರಹ್ಮದೇವರವೃತ್ತ, ಬಜಾರ ರೋಡ, ಪಾದಗಟ್ಟಿ, ಪುರಸಭೆ, ಸರ್ಕಾರಿ ಆಸ್ಪತ್ರೆ, ಪರ್ವತಮಲ್ಲಯ್ಯ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನದ ಮಾರ್ಗವಾಗಿ ಸಾಗಿ ತೋಟದ್ದೇವರಮಠದಲ್ಲಿ ಸಂಪನ್ನಗೊಂಡಿತು.

  ಪಥ ಸಂಚಲನದ ಹಿನ್ನಲೆಯಲ್ಲಿ ಡಿಎಸ್​ಪಿ ಸಿ.ಕೆ. ಪ್ರಹ್ಲಾದ್ ಅವರ ನೇತೃತ್ವದಲ್ಲಿ ನಾಲ್ವರು ಸಿಪಿಐ, 8 ಜನ ಪಿಎಸ್​ಐ ಸೇರಿ 150ಕ್ಕೂ ಹೆಚ್ಚು ಪೊಲೀಸರನ್ನು ಪಟ್ಟಣದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿತ್ತು.

  ಪೋಟೊ: 4-ಎಲ್​ಎಕ್ಷ್​ಆರ್-6

  ಲಕ್ಷ್ಮೇಶ್ವರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಶನಿವಾರ ಆಕರ್ಷಕ ಪಥಸಂಚಲನ ನಡೆಸಿದರು.  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts