More

  ಗದ್ದುಗೆಯಲ್ಲಿ ಅಗ್ಗೇರಿ ದೇವಿ ವಿರಾಜಮಾನ

  ಸಿದ್ದಾಪುರ: ತಾಲೂಕಿನ ಅಗ್ಗೇರಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹೀನಗಾರ ಶಾಲಾ ಸಮೀಪದ ಜಾತ್ರಾ ಮೈದಾನದ ಗದ್ದುಗೆಯಲ್ಲಿ ಮಾರಿಕಾಂಬಾ ದೇವಿ ವೀರಾಜಮಾನಳಾಗಿ ಭಕ್ತರಿಗೆ ದರ್ಶನ ನೀಡಿ ಹರಸುತ್ತಿದ್ದಾಳೆ.

  ಜಾತ್ರಾ ಸಂಪ್ರದಾಯದಂತೆ ಅಗ್ಗೇರಿಯಿಂದ ಜಾತ್ರಾ ಗದ್ದುಗೆಯವರೆಗೆ ಶಿಂಗರಿಸಿದ ರಥದಲ್ಲಿ ಮಾರಿಕಾಂಬಾ ದೇವಿಯನ್ನು ಕುಳ್ಳಿರಿಸಿ ಮೆರವಣಿಗೆಯ ಮೂಲಕ ತರಲಾಯಿತು.

  ಮೆರವಣಿಗೆಯಲ್ಲಿ ವಾದ್ಯ, ಡೊಳ್ಳುಕುಣಿತ, ಕೋಲಾಟ ಪ್ರದರ್ಶನ ನಡೆಯಿತು. ಜಾತ್ರಾ ಕಮಿಟಿ ಹಾಗೂ ದೇವಸ್ಥಾನ ಕಮಿಟಿ ಸದಸ್ಯರು, ಗ್ರಾಮಸ್ಥರು ಸೇರಿದಂತೆ 500ಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿದ್ದರು.

  ಬುಧವಾರ ಬೆಳಗ್ಗೆ 7.30ಕ್ಕೆ ಜಾತ್ರಾಗದ್ದುಗೆಯಲ್ಲಿ ವೀರಾಜಮಾನಳಾದ ಮಾರಿಕಾಂಬಾ ದೇವಿಗೆ ಮೊದಲು ಗೊದ್ಲಬೀಳ ಗ್ರಾಮಸ್ಥರಿಂದ ಪೂಜೆ ನಡೆಯಿತು. ನಂತರ ಭಕ್ತರ ಸೇವೆಗೆ ಅವಕಾಶ ನೀಡಲಾಯಿತು. ಜಾತ್ರಾ ಆರಂಭ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

  See also  ಕುಮಾರೇಶ್ವರ ರಥ ಪುರಪ್ರವೇಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts