ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಗಣಿಭಾದಿತ ಪ್ರದೇಶಗಳ ಜನರ ಉಚಿತ ಆರೋಗ್ಯ ಸೇವೆ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ ಕಾರ್ಯನಿರ್ವಹಿಸಲಿದೆ ಎಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ತಿಳಿಸಿದ್ದಾರೆ.
ಗಣಿಭಾದಿತ ಪ್ರದೇಶಗಳಲ್ಲಿ ಸಂಚಾರಿ ಆರೋಗ್ಯ ಘಟಕ ನಿತ್ಯದ ವೇಳಾಪಟ್ಟಿ ಅನ್ವಯ ಚಿತ್ರದುರ್ಗದಿಂದ ಗಣಿಭಾದಿತ ಪ್ರದೇಶದ ಗ್ರಾಮಗಳಿಗೆ ತೆರಳಿ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲಿದೆ. ಘಟಕದಲ್ಲಿ ವೈದ್ಯರು, ಶುಶ್ರೂಷಕರು, ಪ್ರ ಯೋಗಶಾಲಾ ತಂತ್ರಜ್ಞರು, ಔಷಧ ವಿತರಕರು ಕಾರ್ಯನಿರ್ವಹಿಸಲಿದ್ದಾರೆ. ಸುಸಜ್ಜಿತ ವಾಹನ,ಆರೋಗ್ಯ ಉಪಕರಣಗಳು, ಔಷಧಗಳು ಲಭ್ಯ ಇರಲಿವೆ ಎಂದು ತಿಳಿಸಿದ್ದಾರೆ.
ಸಂಚಾರಿ ಆರೋಗ್ಯ ಘಟಕ ಒಂದು ವೇಳೆ ವೇಳಾಪಟ್ಟಿ ಪ್ರಕಾರ ಹಳ್ಳಿಗೆ ಬಾರದಿದ್ದರೆ ಅಥವಾ ಸಿಬ್ಬಂದಿ ಹಣ ಕೇಳಿದರೆ ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ(9448923532)ಸಂಪರ್ಕಿಸುವಂತೆ ಡಿಎಚ್‌ಒ ತಿಳಿಸಿದ್ದಾರೆ.
ವೇಳಾಪಟ್ಟಿ: ಮೊದಲನೇ ವಾರ ಸೋಮವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕುರುಬರಹಳ್ಳಿ, ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ತಿರುಮಲಾಪುರ, ಮಂಗಳವಾರ ಬೆಳಗ್ಗೆ 10ರಿಂದ 1ರವರೆಗೆ ತುರೆಬೈಲು, ಮಧ್ಯಾಹ್ನ 2ರಿಂದ 5 ರವರೆಗೆ ಬೊಮ್ಮೇನಹಳ್ಳಿ, ಬುಧವಾರ ಬೆಳಗ್ಗೆ 10ರಿಂದ 1ರವರೆಗೆ ವಿ. ಪಾಳ್ಯ, ಮಧ್ಯಾಹ್ನ 2 ರಿಂದ 5 ರವರೆಗೆ ನಲ್ಲಿಕಟ್ಟೆ, ಗುರುವಾರ ಬೆಳಗ್ಗೆ 10 ರಿಂದ 1ರವರೆಗೆ ಹುಲ್ಲೂರು, ಮಧ್ಯಾಹ್ನ 2 ರಿಂದ 5 ರವರೆಗೆ ಬೆಟ್ಟದ ನಾಗೇನಹಳ್ಳಿ, ಶುಕ್ರವಾರ ಬೆಳಗ್ಗೆ 10ರಿಂದ 1ರವರೆಗೆ ಮಳಲಿ, ಮಧ್ಯಾಹ್ನ 2ರಿಂದ 5 ರವರೆಗೆ ಬೊಮ್ಮವ್ವನಾಗ್ತಿಹಳ್ಳಿ, ಶನಿವಾರ ಬೆಳಗ್ಗೆ 10ರಿಂದ 1ರವರೆಗೆ ಚಿಕ್ಕೇನಹಳ್ಳಿ, ಮಧ್ಯಾಹ್ನ 2ರಿಂದ 5 ರವರೆಗೆ ಕೋಣನೂರು.
ಎರಡನೇ ವಾರದ ಸೋಮವಾರ ಬೆಳಗ್ಗೆ 10ರಿಂದ 1ರವರೆಗೆ ಹಳಿಯೂರು, ಮಧ್ಯಾಹ್ನ 2ರಿಂದ ಸಂಜೆ 5 ರವರೆಗೆ ಕಡ್ಲೇಗುದ್ದು, ಮಂಗಳವಾರ ಬೆಳಗ್ಗೆ 10 ರಿಂದ 1 ಮೇಗಳಹಳ್ಳಿ, ಮಧ್ಯಾಹ್ನ 2ರಿಂದ 5ರವರೆಗೆ ಹುಣಸೆಕಟ್ಟೆ, ಬುಧವಾರ ಬೆಳಗ್ಗೆ 10ರಿಂದ 1ರವರೆಗೆ ಆಲಘಟ್ಟ, ಮಧ್ಯಾಹ್ನ 2ರಿಂದ 5 ರವರೆಗೆ ದೊಡ್ಡಿಗನಾಳು, ಗುರುವಾರ ಬೆಳಗ್ಗೆ 10ರಿಂದ 1ರವರೆಗೆ ಪಳಕಿಹಳ್ಳಿ, ಮಧ್ಯಾಹ್ನ 2ರಿಂದ 5ರವರೆಗೆ ಬೆಟ್ಟದ ಸಿದ್ದಾಪುರ, ಶುಕ್ರವಾರ ಬೆಳಗ್ಗೆ 10 ರಿಂದ 1ರವರೆಗೆ ಡಿ. ಮದಕರಿಪುರ, ಮಧ್ಯಾಹ್ನ 2ರಿಂದ 5 ರವರೆಗೆ ಚಿಕ್ಕಾಲಘಟ್ಟ, ಶನಿವಾರ ಬೆಳಗ್ಗೆ 10 ರಿಂದ 1ರವರೆಗೆ ಚಿಕ್ಕಗುಂಟನೂರು, ಹಳುವುದರ ಗ್ರಾಮಗಳಲ್ಲಿ ಸಂಚಾರಿ ಘಟಕಕ ಕಾರ್ಯನಿರ್ವಹಿಸಲಿದೆ
ಮೂರನೇ ವಾರದ ಸೋಮವಾರ ಬೆಳಗ್ಗೆ 10ರಿಂದ 1ರವರೆಗೆ ಓಬಳಾಪುರ,ಮಧ್ಯಾಹ್ನ 2ರಿಂದ ಸಂಜೆ 5 ರವರೆಗೆ ಕೊಳಹಾಳು, ಮಂಗಳವಾರ ಬೆಳಗ್ಗೆ 10ರಿಂದ 1ಚಿಕ್ಕಪುರ, ಮಧ್ಯಾಹ್ನ 2ರಿಂದ 5 ರವರೆಗೆ ಕೊಡಗವಳ್ಳಿ, ಬುಧವಾರ ಬೆಳಗ್ಗೆ 10ರಿಂದ 1ರವರೆಗೆ ವಡ್ಡರಸಿದ್ದವ್ವನಹಳ್ಳಿ, ಮಧ್ಯಾಹ್ನ 2ರಿಂದ 5ರವರೆಗೆ ದ್ಯಾಮವ್ವನಹಳ್ಳಿ, ಗುರುವಾರ ಬೆಳಗ್ಗೆ 10ರಿಂದ 1ರವರೆಗೆ ಸಾದರಹಳ್ಳಿ, ಮಧ್ಯಾಹ್ನ 2 ರಿಂದ 5ರವರೆಗೆ ಮಾನಂಗಿ, ಶುಕ್ರವಾರ ಬೆಳಗ್ಗೆ 10 ರಿಂದ 1ರವರೆಗೆ ಕಾಟೀಹಳ್ಳಿ, ಮಧ್ಯಾಹ್ನ 2ರಿಂದ 5ರವರೆಗೆ ಐನಹಳ್ಳಿ, ಶನಿವಾರ ಬೆಳಗ್ಗೆ 10 ರಿಂದ 1 ರವರೆಗೆ ಹಳೇರಂಗಾಪುರ, ಮಧ್ಯಾಹ್ನ 2 ರಿಂದ 5 ರವರೆಗೆ ವಿಜಾಪುರ.
ನಾಲ್ಕನೇ ವಾರದ ಸೋಮವಾರ ಬೆಳಗ್ಗೆ 10ರಿಂದ 1ರವರೆಗೆ ಚಿಕ್ಕಬೆನ್ನೂರು, ಮಧ್ಯಾಹ್ನ 2ರಿಂದ ಸಂಜೆ 5 ರವರೆಗೆ ಹಿರೆಬೆನ್ನೂರು, ಮಂಗಳವಾರ ಬೆಳಗ್ಗೆ 10ರಿಂದ 1 ಲಿಂಗವ್ವನಾಗ್ತಿಹಳ್ಳಿ, ಮಧ್ಯಾಹ್ನ 2ರಿಂದ 5ರವರೆಗೆ ಚಿಳಂಗಿ, ಬುಧವಾರ ಬೆಳಗ್ಗೆ 10 ರಿಂದ 1ರವರೆಗೆ ಜಮ್ಮನಹಳ್ಳಿ, ಮಧ್ಯಾಹ್ನ 2ರಿಂದ 5 ರವರೆಗೆ ಗೌರಮ್ಮನಹಳ್ಳಿ, ಗುರುವಾರ ಬೆಳಗ್ಗೆ 10 ರಿಂದ 1 ರವರೆಗೆ ಹೊಸರಂಗಾಪುರ, ಓಬವ್ವನಾಗ್ತಿಹಳ್ಳಿ, ಮಧ್ಯಾಹ್ನ 2ರಿಂದ 5 ಕಲ್ಕುಂಟೆ, ಶುಕ್ರವಾರ ಬೆಳಗ್ಗೆ 10ರಿಂದ 1 ಕೆ. ಬಳ್ಳಕಟ್ಟೆ, ಎನ್. ಬಳ್ಳಕಟ್ಟೆ, ಮಧ್ಯಾಹ್ನ 2ರಿಂದ 5ರವರೆಗೆ ಶೀಗೆಹಳ್ಳಿ, ಶನಿವಾರ ಬೆಳಗ್ಗೆ 10 ರಿಂದ 1ರವರೆಗೆ ಸಿಂಗಾಪುರದಲ್ಲಿ ಸಂಚಾರಿ ಘಟಕ ಸಂಚರಿಸಲಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.
ಗಣಿಬಾಧಿತ ಪ್ರದೇಶದ ಜನರಿಗೆ ಆರೋಗ್ಯ ಸೇವೆ
ಗ್ಯಾಸ್ಗೆ ವಾಸನೆಯೇ ಇಲ್ಲ! ಹೀಗಿದ್ದರೂ ಸಿಲಿಂಡರ್ ಲೀಕ್ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್ ಮಾತ್ರ | Gas Leakage
Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…
ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..! sweet
sweet: ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…
astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ
astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …