More

  ಗಣರಾಜ್ಯೋತ್ಸವ ಆಚರಣೆಗೆ ಜವಾಬ್ದಾರಿ ನಿರ್ವಹಿಸಿ

  ದೇವರಹಿಪ್ಪರಗಿ: ಗಣರಾಜ್ಯೋತ್ಸವ ಜವಾಬ್ದಾರಿಗಳನ್ನು ತಾಲೂಕು ಆಡಳಿತದ ಜತೆಗೆ ವಿವಿಧ ಇಲಾಖೆಗಳ ಸಿಬ್ಬಂದಿ ವಹಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಆಚರಣೆಯ ಜತೆಗೆ ಸ್ಥಳೀಯ ಶಾಲೆಗಳ ಮಕ್ಕಳ ಉಪಾಹಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧ್ವಜಾರೋಹಣದ ಕುರಿತು ಸೂಕ್ತ ಕ್ರಮವಹಿಸಲು ಸೂಚಿಸಿದರು.

  ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಮಾತನಾಡಿ, ಮಕ್ಕಳಿಗೆ ಉಪಾಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದರು.
  ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಅವರು ಯೋಧನ ಸ್ಮಾರಕದ ರಿಪೇರಿ ಕುರಿತು ಗಮನ ಸೆಳೆದರು.

  ಕಾಶೀನಾಥ ತಳಕೇರಿ, ಜಾನು ಗುಡಿಮನಿ, ಬಸವರಾಜ ತಳಕೇರಿ, ರಾವುತ ತಳಕೇರಿ ಮಾತನಾಡಿ, ಪೂರ್ವಸಭೆಯಲ್ಲಿ ಕೇವಲ ಶಿಕ್ಷಣ ಇಲಾಖೆಯ ಶಿಕ್ಷಕರು ಮಾತ್ರ ಹಾಜರಾಗುತ್ತಾರೆ. ಉಳಿದ ಯಾವ ಇಲಾಖೆಯ ಪ್ರತಿನಿಧಿಗಳು ಭಾಗವಹಿಸುವುದಿಲ್ಲ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಮತ್ತು ಗಣರಾಜ್ಯೋತ್ಸವ ದಿನದಂದು ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವೇದಿಕೆಯಲ್ಲಿರಬೇಕು. ಅನ್ಯರಿಗೆ ಅವಕಾಶ ಬೇಡ ಎಂದರು.

  ಶಿರಸ್ತೆದಾರ ಸುರೇಶ ಮ್ಯಾಗೇರಿ, ತಾಲೂಕು ಪಂಚಾಯಿತಿಯ ಶ್ರೀನಿವಾಸ ಪವಾರ, ಸಿಆರ್‌ಪಿ ವಿಜಯಲಕ್ಷ್ಮೀ ನವಲಿ, ಸಿಡಿಪಿಒ ಎಸ್.ಎನ್.ಹಿರೇಮಠ, ಪ್ರಾಚಾರ್ಯ ವಿ.ಜಿ.ಹೂನಳ್ಳಿ, ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣಸಂಸ್ಥೆಯ ಎ.ಕೆ.ಆನಂದ, ಮಹಿಳಾ ಪಿಎಸ್‌ಐ ಎಸ್.ಬಿ.ನಡುವಿನಕೇರಿ, ಶಾಂತಾ ಕಸ್ತೂರಿ, ವಿ.ವೈ.ಹಳ್ಳಿ, ಆರ್.ಆರ್.ಕೋರಿ, ಆರ್.ಜಿ.ಕೋಟಿನ್, ಪಿ.ಸಿ.ತಳಕೇರಿ, ಶಿವಶರಣ ಪೂಜಾರಿ, ನಾನಾಗೌಡ ಸಿದರಡ್ಡಿ, ಮಲ್ಲಿಕಾರ್ಜುನ ದೇವೂರ, ರಾಜಕುಮಾರ ಸಿಂದಗೇರಿ, ಎ.ವಿ.ವಡ್ಡೋಡಗಿ ಹಾಗೂ ವಿವಿಧ ಶಾಲೆಗಳ ಮುಖ್ಯಗುರುಗಳು, ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts