ಅಂಕೋಲಾ : ಕೋಟೆವಾಡದ ಏಳು ಎಕರೆ ಹಿಂದು ಸ್ಮಶಾನ ಜಮೀನಿನ 20 ಗುಂಟೆಯಲ್ಲಿ ದೇವರಾಜ ಅರಸು ಭವನ ನಿರ್ವಣಕ್ಕೆ ಗಡಿ ಗುರುತಿಸುವ ಸರ್ವೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.
ವಕೀಲ ರವೀಂದ್ರನಾಥ ನಾಯ್ಕ ಮಾತನಾಡಿ, ಹಿಂದು ಸ್ಮಶಾನ ಭೂಮಿಯ ನಿಖರ ಸರ್ವೆ ನಡೆಸಿ, ಗಡಿ ಗುರುತಿಸಿ ಅತಿಕ್ರಮಣವಾಗದಂತೆ ಕಾಂಪೌಂಡ್ ನಿರ್ವಿುಸುವುದು, ಆವರಣದ ಸ್ವಚ್ಛತೆಗೆ ಪುರಸಭೆ ಕಾರ್ಯಪ್ರವೃತ್ತರಾಗುವಂತೆ ಮನವಿ ಸಲ್ಲಿಸುವುದು ಮತ್ತು ಈ ಸ್ಥಳವನ್ನು ಮುಕ್ತಿಧಾಮ ಮಾದರಿಯಲ್ಲಿ ಸುಂದರ ಸ್ಥಳವನ್ನಾಗಿ ರೂಪಿಸಲು ರೂಪುರೇಷೆ ಸಿದ್ಧಪಡಿಸೋಣ ಎಂದರು. ಸುರೇಶ ವೇರ್ಣೆಕರ್ ಮಾತನಾಡಿದರು. ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣಕುಮಾರ ನಾಯಕ, ಕಿರಿಯ ಇಂಜಿನಿಯರ್ ಭಾಸ್ಕರ ಗೌಡ, ಮಂಜುನಾಥ ಡಿ. ನಾಯ್ಕ, ತಿಪ್ಪಯ್ಯ ನಾಯ್ಕ, ಉಮೇಶ ನಾಯ್ಕ ಗುಡಿಗಾರಗಲ್ಲಿ, ಉದಯ ನಾಯ್ಕ, ದೇವಿದಾಸ ನಾಯ್ಕ, ಉದಯ ನಾಯ್ಕ ಕೇಣಿ, ಸುರೇಶ ನಾಯ್ಕ, ಶೇಷು ನಾಯ್ಕ, ಪಾಂಡು ನಾಯ್ಕ ಹಾಗೂ ಸರ್ವೆ ಇಲಾಖೆಯ ಸಿಬ್ಬಂದಿ ಇದ್ದರು.