ಚಿಂಚೋಳಿ (ಕಲಬುರಗಿ) : ನಾಡು-ನುಡಿ, ನೆಲ, ಜಲ ಸಂರಕ್ಷಣೆ ಪ್ರತಿ ಕನ್ನಡಿಗನ ಕರ್ತವ್ಯವಾಗಿದೆ. ಗಡಿಯಲ್ಲಿ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶ್ರಮಿಸಬೇಕು ಎಂದು ಬೀದರ್ನ ಸ್ನಾತಕೋತ್ತರ ಕಾಲೇಜಿನ ಉಪನ್ಯಾಸಕ ಡಾ.ರಾಮಚಂದ್ರ ಗಣಾಪುರ ಹೇಳಿದರು.
ಪಟ್ಟಣದ ಸಿ.ಬಿ.ಪಾಟೀಲ್ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಬುಧವಾರ ಹಮ್ಮಿಕೊಂಡಿದ್ದ ಸಾಹಿತಿಗಳ ಸಮಾಗಮ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಸಾಹಿತ್ಯ ಪರಿಷತ್ತಿನಿಂದ ಹೊಸ- ಹೊಸ ಕವಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ನಿರಂತವಾಗಿ ನಡೆಯುವಂತಾಗಲಿ ಎಂದರು.
ಡಾ.ಈಶ್ವರಯ್ಯ ಕೊಡಂಬಲ್ ಮಾತನಾಡಿ, ತತ್ವಪದಗಳನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ, ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ನಮ್ಮದಾಗಿದೆ ಎಂದರು.
ಡಾ.ಶರಣಪ್ಪ ಮಾಳಗೆ ಅವರ ಡಾ.ಬಿ.ಆರ್.ಅಂಬೇಡ್ಕರ್', ಡಾ.ಈಶ್ವರಯ್ಯ ಕೊಡಂಬಲ್ ಅವರ
ನಾಗೀಂದ್ರಪ್ಪ ಮುತ್ಯಾ ಅವರ ತತ್ವ ಪದಗಳು’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಶರಣಯ್ಯ ಸ್ವಾಮಿ, ಗುರುರಾಜ ಕುಲಕರ್ಣಿ ವಚನ ಗಾಯನ ನಡೆಸಿಕೊಟ್ಟರು.
ಕಸಾಪ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ಪ್ರಮುಖರಾದ ಡಾ.ಶರಣಪ್ಪ ಮಾಳಗೆ, ಡಾ.ಮಾಣಿಕಮ್ಮ ಸುಲ್ತಾನಪುರ, ಡಾ.ಶಿವಶರಣಪ್ಪ ಕೋಡ್ಲಿ, ರೇಣುಕಾ ಎನ್., ಅಶೋಕ ಪಾಟೀಲ್, ಜ್ಯೋತಿ ಬೊಮ್ಮಾ, ಜಯಶ್ರೀ ಕುಲಕರ್ಣಿ, ಎಸ್.ಎನ್.ದಂಡಿನಕುಮಾರ, ನಾಗೀಂದ್ರ ಮುತ್ಯಾ, ಉತ್ತಮ ದೊಡ್ಡಮನಿ, ಗುರುಲಿಂಗಪ್ಪ ಹಾಲಳ್ಳಿ, ನಂದಿಕುಮಾರ ಪಾಟೀಲ್, ಸಿದ್ದಪ್ಪ ದೇಶಪಾಂಡೆ, ಡಾ.ಶಿವಗಂಗಾ ಇತರರಿದ್ದರು.