ಗಗನಕ್ಕೇರಲಿದೆ ಭೂಮಿ ಬೆಲೆ

ಮೈಸೂರು- ಬೆಂಗಳೂರು ಹೆದ್ದಾರಿ ಅಭಿವೃದ್ಧಿಯಿಂದ ಈ ಮಾರ್ಗದ ಆಜು ಬಾಜುವಿನ ಭೂಮಿಯ ಬೆಲೆ ಗಗನಕ್ಕೇರಿದೆ. ಇಲ್ಲಿ ಭೂಮಿ ಖರೀದಿಗೆ ರಿಯಾಲ್ಟಿ ಕಂಪನಿಗಳು ಮುಗಿಬಿದ್ದಿವೆ.

| ಶಿವರಾಜ್ ಎಂ.

ಬೆಂಗಳೂರು: ಮೈಸೂರು-ಬೆಂಗಳೂರು ಹೆದ್ದಾರಿಗೆ ಕೇಂದ್ರ ಸರ್ಕಾರದ ಅಷ್ಟಪಥ ರಸ್ತೆ ನಿರ್ಮಾಣ ಯೋಜನೆಯೊಂದಾಗಿ ಅದೃಷ್ಟ ಕುದುರಿದೆ. ಭವಿಷ್ಯದಲ್ಲಿ ಇದೇ ಹೆದ್ದಾರಿಯ ಆಸುಪಾಸಿನ ಭೂಮಿಗೆ ಬಂಗಾರದ ಬೆಲೆ ಬರಲಿದೆ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದ್ದು, ರಿಯಾಲ್ಟಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿ ರಿಯಾಲ್ಟಿ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂಬ ಬಗ್ಗೆ ರಿಯಾಲ್ಟಿ ಕ್ಷೇತ್ರದ ತಜ್ಞರು ಆಶಾಭಾವ ಹೊಂದಿದ್ದಾರೆ.

ಮೈಸೂರು ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿ: ಕೇಂದ್ರ ಸರ್ಕಾರ 2 ವರ್ಷದ ಹಿಂದೆ ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯನ್ನು ಮೆಲ್ದರ್ಜೆಗೇರಿಸಿ ರಾಷ್ಟ್ರಿಯ ಹೆದ್ದಾರಿ-275 ಘೋಷಿಸಿರುವುದು ರಿಯಾಲ್ಟಿ ಕ್ಷೇತ್ರದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ವಿವಿಧ ರಿಯಾಲ್ಟಿ ಕಂಪನಿಗಳು ಬೆಂಗಳೂರು- ಮೈಸೂರು ರಸ್ತೆಯ ನಡುವಿನ ಪ್ರದೇಶಗಳಲ್ಲಿ ಹೂಡಿಕೆ ಮಾಡಲು ಮುಗಿಬಿದ್ದಿವೆ. ಇವುಗಳ ಜತೆ ಸ್ಥಳೀಯ ರಿಯಾಲ್ಟಿ ಕಂಪನಿಗಳೂ ಭೂಮಿ ಖರೀದಿಗೆ ಮುಂದಾಗಿರುವುದು ಮೈಸೂರು ರಸ್ತೆ ಸುತ್ತ ಜಮೀನು ಹೊಂದಿದವರಿಗೆ ಶುಕ್ರದೆಸೆ ಆರಂಭವಾಗಲು ಕಾರಣವಾಗಿದೆ.

ಪ್ರಯಾಣದ ಅವಧಿ ಕಡಿತ

ಹೆದ್ದಾರಿ ಕಾಮಗಾರಿ 2 ವರ್ಷದಲ್ಲಿ ಅಂತ್ಯಗೊಳ್ಳಲಿದ್ದು, ಬಳಿಕ 90 ನಿಮಿಷದ ಅವಧಿಯಲ್ಲಿ ಬೆಂಗಳೂರು- ಮೈಸೂರು ತಲುಪಬಹುದು. ಪ್ರಯಾಣದ ಅವಧಿ ಕಡಿಮೆಯಾಗುವುದರಿಂದ ಪ್ರಯಾಣಿಕರ ಸಂಖ್ಯೆ ಅಧಿಕಗೊಳ್ಳಲಿದೆ. ಇದು ಹೆದ್ದಾರಿ ನಡುವಿನ ಪ್ರದೇಶಗಳ ಅಭಿವೃದ್ಧಿಗೆ ಪ್ರೇರಕವಾಗಲಿದೆ. ಅಭಿವೃದ್ಧಿ ಚಟುವಟಿಕೆಗಳು ಹೆಚ್ಚುತ್ತಿದ್ದಂತೆ ಭೂಮಿಗೆ ಬೇಡಿಕೆ ಹೆಚ್ಚಲಿದೆ. ಬೇಡಿಕೆ ಅಧಿಕವಾಗುತ್ತಿದ್ದಂತೆ ಭೂಮಿ ಬೆಲೆ ಬಂಗಾರವಾಗಲಿದೆ.

ಅಪಾರ್ಟ್​ವೆುಂಟ್​ಗಳಿಗೆ ಸ್ಕೆಚ್: ಹೆದ್ದಾರಿ ಆಸುಪಾಸಿನ ಸ್ಥಳಗಳಲ್ಲಿ ಹೋಟೆಲ್, ಆಸ್ಪತ್ರೆ, ಶಾಲೆ ಸೇರಿ ವಿವಿಧ ಬಡಾವಣೆಗಳ ನಿರ್ವಣಕ್ಕೆ ಹಲವು ಕಂಪನಿಗಳು ಆಸಕ್ತಿ ತೋರಿಸುತ್ತಿವೆ. ವಿವಿಧ ಕಂಪನಿಗಳು ಹಣ ತೊಡಗಿಸಲು ಮುಂದಾಗಿವೆ. ರಿಯಾಲ್ಟಿ ಕಂಪನಿಗಳಲ್ಲಿ ಪ್ರಮುಖವೆನಿಸಿರುವ ಬ್ರಿಗೇಡ್, ಶೋಭಾ ಡೆವಲಪರ್ಸ್ ಬೃಹತ್ ಅಪಾರ್ಟ್​ವೆುಂಟ್​ಗಳ ನಿರ್ವಣಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿವೆ.

ಮೆಟ್ರೋ ವರದಾನ: ರಾಜಧಾನಿ ಸೆರಗಿನಲ್ಲೇ ಇರುವ ಬಿಡದಿ ಸುತ್ತಮುತ್ತಲ ಪ್ರದೇಶದ ಭೂಮಿಗೆ ಈಗಾಗಲೇ ಚಿನ್ನದ ಬೆಲೆ ಬಂದಿದೆ. ಇದರೊಂದಿಗೆ ಕೆಂಗೇರಿವರೆಗೆ ಚಲಿಸುತ್ತಿರುವ ಮೆಟ್ರೊ ರೈಲು ಕುಂಬಳಗೋಡು ಹಾಗೂ ಬಿಡದಿವರೆಗೆ ವಿಸ್ತರಿಸಲಿದೆ. ಸದ್ಯ ಕೇಂದ್ರದ ಮುಂದೆ ಮೆಟ್ರೊ ರೈಲು ಮಾರ್ಗ ನಿರ್ಮಾಣ ಪ್ರಸ್ತಾವನೆ ಇದ್ದು, ಕೇಂದ್ರದಿಂದ ಹಸಿರು ನಿಶಾನೆ ಪಡೆಯುವುದೊಂದು ಬಾಕಿ ಇದೆ.

ಕುಂಬಳಗೋಡುವರೆಗೆ ಸರ್ಕಾರದ ಹಣದಿಂದ ಮಾರ್ಗ ನಿರ್ವಣವಾದರೆ ಅಲ್ಲಿಂದ ಬಿಡದಿವರೆಗೆ ಮಾರ್ಗ ನಿರ್ವಣಕ್ಕೆ ಟಯೋಟ ಕಂಪನಿ ಹಣ ಹೂಡುವುದಾಗಿ ಹೇಳಿಕೊಂಡಿದೆ. ಇದರಿಂದ ಬಿಡದಿ ಹಾಗೂ ಬೆಂಗಳೂರಿನ ಸಂಚಾರ ಮಾರ್ಗ ಸರಳವಾಗಲಿದ್ದು, ರಾಜಧಾನಿ ಜನತೆ ಬಿಡದಿಯತ್ತ ಕಣ್ಣು ನೆಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಡದಿ ಬೆಂಗಳೂರೇ ಆಗಿ ಹೋಗಿದ್ದು, ಮುಂದೆ ರಾಮನಗರ, ಚನ್ನಪಟ್ಟಣ ಮದ್ದೂರು ಬೃಹತ್ ನಗರಗಳಾಗಿ ರೂಪುಗೊಳ್ಳಲಿವೆ ಎಂಬುದು ರಿಯಾಲ್ಟಿ ಕ್ಷೇತ್ರದ ತಜ್ಞರು ಭವಿಷ್ಯ. ಇದರೊಂದಿಗೆ ಬೆಂಗಳೂರು-ಮೈಸೂರು ನಡುವೆ ಜೋಡಿ ರೈಲು ಮಾರ್ಗ ಬರಲಿದ್ದು, ಎರಡು ನಗರಗಳನ್ನು ಇನ್ನಷ್ಟು ಹತ್ತಿರವಾಗಿಸಲಿದೆ. ರಾಷ್ಟ್ರಿಯ ಹೆದ್ದಾರಿ ನಿರ್ವಣವಾದರೆ ಎರಡು ನಗರಗಳ ನಡುವಿನ ಸಂಪರ್ಕ ಸುಲಭವಾಗುವುದರಿಂದ ರಿಯಾಲ್ಟಿ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಚಟುವಟಿಕೆಗಳು ಗರಿಗೆದರಲಿವೆ.

ಅಷ್ಟಪಥದ ರಸ್ತೆ

ಪ್ರಸ್ತುತ 4 ಪಥದ ರಾಜ್ಯ ಹೆದ್ದಾರಿಯಾಗಿರುವ ಬೆಂಗಳೂರು-ಮೈಸೂರು ರಸ್ತೆ 8 ಪಥಗಳ ರಾಷ್ಟ್ರಿಯ ಹೆದ್ದಾರಿಯಾಗಿ ಮೆಲ್ದರ್ಜೆಗೆ ಏರಲಿದೆ. 2 ವರ್ಷಗಳಲ್ಲಿ ಕಾಮಗಾರಿ ಅಂತ್ಯಗೊಳ್ಳಲಿದೆ ಎಂಬ ಲೆಕ್ಕಾಚಾರವಿದೆ. ನಂತರ ವಾಹನಗಳಿಗೆ ಶುಂಕ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬಿಡದಿ, ರಾಮನಗರ, ಚನ್ನಪಟ್ಟಣ ಹಾಗೂ ಮಂಡ್ಯದಲ್ಲಿ ಬೈಪಾಸ್​ರಸ್ತೆ ನಿರ್ವಣಗೊಂಡರೆ, ಮದ್ದೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಮೇಲ್ಸೆತುವೆ ನಿರ್ವಿುಸುವ ಉದ್ದೇಶವಿದೆ.

ಹೋಟೆಲ್​ಗಳಿಗೆ ಡಿಮಾಂಡ್

ಬೆಂಗಳೂರು-ಮೈಸೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾಗುತ್ತಿದ್ದಂತೆ ರಸ್ತೆಯ ಆಸುಪಾಸಿನಲ್ಲಿ ಹೆಸರಾಂತ ಹೋಟೆಲ್​ಗಳು ತಲೆಎತ್ತಲು ಆರಂಭಿಸಿವೆ. ಈಗಾಗಲೇ ಎಕರೆಗಟ್ಟಲೆ ಭೂಮಿ ಖರೀದಿಯಾಗುತ್ತಿದೆ. ಭವಿಷ್ಯದಲ್ಲಿ ಹೆದ್ದಾರಿಯ ಉದ್ದಕ್ಕೂ ಇಂಥ ಹೈಫೈ ಹೋಟೆಲ್​ಗಳು ಕೈಬೀಸಿ ಕರೆಯಲಿವೆ. ಇದರೊಂದಿಗೆ ಡಾಭಾಗಳು, ದೊಡ್ಡ ರೆಸ್ಟೋರೆಂಟ್​ಗಳು ಸಹ ನಿರ್ವಣವಾಗಲಿದ್ದು, ಗ್ರಾಹಕರ ಸ್ವರ್ಗವಾಗಲಿದೆ ಎಂಬುದು ರಿಯಾಲ್ಟಿ ತಜ್ಞರ ಅಭಿಮತವಾಗಿದೆ, ಶಿಕ್ಷಣ ಸಂಸ್ಥೆಗಳು ಸಹ ಕಣ್ಣು ನೆಟ್ಟಿದ್ದು, ಭವಿಷ್ಯದಲ್ಲಿ ವಸತಿಗಳನ್ನು ಗಮನಿಸಿ ಶಾಲಾ ಕಾಲೇಜುಗಳನ್ನು ತೆರೆಯಲು ಸಿದ್ದತೆ ನಡೆಸಿವೆ, ಇದರೊಂದಿಗೆ ಮನರಂಜನಾ ಕ್ಲಬ್​ಗಳು, ಅಮ್ಯೂಸ್​ವೆುಂಟ್ ಪಾರ್ಕ್​ನಂತವುಗಳೂ ಸಹ ನಿರ್ವಣಕ್ಕೆ ಉತ್ಸುಕತೆ ತೋರಿದ್ದು, ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನ ಭೂಮಿಗೆ ಬೆಲೆ ಹೆಚ್ಚಲು ಕಾರಣವಾಗಲಿದೆ.

Leave a Reply

Your email address will not be published. Required fields are marked *